Last Updated:
Arijit Singh: ಅರಿಜಿತ್ ಸಿಂಗ್ ಕಮ್ ಬ್ಯಾಕ್ ಮಾಡುತ್ತಿದ್ದಾರಾ? ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ ನಂತರ ಹಾಡಿದ್ದೇಕೆ ಅರಿಜಿತ್ ಸಿಂಗ್? ನಿಜಕ್ಕೂ ಕಮ್ ಬ್ಯಾಕ್ ಮಾಡ್ತಿರೋದು ಹೌದಾ?
ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಅವರು ಕೆಲವು ತಿಂಗಳ ಹಿಂದೆ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಈಗ ಅವರು ಮತ್ತೆ ಸಿನಿಮಾ ಒಂದಕ್ಕಾಗಿ ಹಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ಅವರು ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ.
ಈ ವರ್ಷದ ಜನವರಿಯಲ್ಲಿ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದಾಗ ಲಕ್ಷಾಂತರ ಅಭಿಮಾನಿಗಳು ಬೇಸರಗೊಂಡರು. ಯಾಕೆಂದರೆ ಹೃದಯಗಳನ್ನು ಮುಟ್ಟಿದ ಧ್ವನಿ ಅವರದ್ದು.
ಅವರ ನಿವೃತ್ತಿ ಘೋಷಣೆಯಿಂದ ಅವರ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಕಳೆದ ಮಂಗಳವಾರ, ಇಮ್ರಾನ್ ಹಶ್ಮಿ ಅವರ “ಅವರಪನ್” ಚಿತ್ರದ ಮುಂದುವರಿದ ಭಾಗವಾದ “ಅವರಪನ್ 2” ನ ಹಾಡನ್ನು ಬಿಡುಗಡೆ ಮಾಡಲಾಯಿತು/ ಇದನ್ನು ಅರಿಜಿತ್ ಸಿಂಗ್ ಹಾಡಿದ್ದಾರೆ.
ಹಾಡಿನ ಬಿಡುಗಡೆಯ ನಂತರ, ಅರಿಜಿತ್ ಸಿಂಗ್ ತಮ್ಮ ನಿವೃತ್ತಿಯ ನಿರ್ಧಾರ ಬದಲಾಯಿಸಿದ್ದಾರಾ? ಕಮ್ ಬ್ಯಾಕ್ ಮಾಡಿದ್ದಾರಾ ಎಂದು ಅಭಿಮಾನಿಗಳು ಊಹಿಸಿದ್ದರು. “ಅವರಪನ್ 2” ಅನ್ನು ಅರಿಜಿತ್ ಸಿಂಗ್ ಅವರ ಕಮ್ ಬ್ಯಾಕ್ ಹಾಡು ಎಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು.
ಆದರೆ ಅವರ ಮ್ಯಾನೇಜರ್ ಈಗ ಗಾಯಕ ನಿವೃತ್ತಿ ಹೊಂದುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಮತ್ತೆ ಅವರು ಹಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಾಸ್ತವವಾಗಿ, ಜನವರಿಯಲ್ಲಿ ನಿವೃತ್ತಿ ಘೋಷಿಸಿದ ನಂತರ, ಜುಲೈ 21 ರಂದು ‘ಆವರಪನ್ 2’ ಹಾಡು ಬಿಡುಗಡೆಯಾದಾಗ, ಅರಿಜಿತ್ ಸಿಂಗ್ ಅವರ ಅಭಿಮಾನಿಗಳು ಅದನ್ನು ಅವರ ಕಮ್ ಬ್ಯಾಕ್ ಎಂದು ಪರಿಗಣಿಸಲು ಪ್ರಾರಂಭಿಸಿದರು.
ಈ ಊಹಾಪೋಹಗಳ ನಡುವೆ, ಗಾಯಕನ ತಂಡವು ಅವರು ಕಮ್ ಬ್ಯಾಕ್ ಮಾಡಲ್ಲ ಎಂದು ಸ್ಪಷ್ಟಪಡಿಸಿದೆ. ವಾಸ್ತವವಾಗಿ ಅರಿಜಿತ್ ಸಿಂಗ್ ನಿವೃತ್ತಿ ಘೋಷಿಸುವ ಮೊದಲು ‘ಆವಾರಪನ್ 2’ ಹಾಡಿಗೆ ಸಹಿ ಹಾಕಿದ್ದರು. ಹಾಗಾಗಿ ಇದು ಮೊದಲೇ ಒಪ್ಪಿಕೊಂಡ ಪ್ರಾಜೆಕ್ಟ್ ಆಗಿತ್ತು.
“ದಿ ಪ್ರಿಂಟ್” ಜೊತೆ ಮಾತನಾಡಿದ ಅರಿಜಿತ್ ಸಿಂಗ್ ಅವರ ಮ್ಯಾನೇಜರ್, “ಅರಿಜಿತ್ ಸಿಂಗ್ ಮತ್ತೆ ಕಮ್ ಬ್ಯಾಕ್ ಮಾಡುವುದಿಲ್ಲ. ನಿವೃತ್ತಿ ಘೋಷಿಸುವ ಮೊದಲು ಅವರು ಒಪ್ಪಿದ್ದ ಪ್ರಾಜೆಕ್ಟ್ ಮುಗಿಸುತ್ತಿದ್ದಾರೆ ಎಂದು ಹೇಳಿದರು. ಈ ರಿಯಾಲಿಟಿ ಚೆಕ್ ಅರಿಜಿತ್ ಸಿಂಗ್ ಅವರ ಲಕ್ಷಾಂತರ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ.
Bangalore,Karnataka
Jul 22, 2026 11:40 AM IST














