Anant Nag: ಅಣ್ಣಾವ್ರು, ವಿ.ಕೆ. ಮೂರ್ತಿ ಬಳಿಕ ಅನಂತ್ ನಾಗ್; ದಾದಾಸಾಹೇಬ್ ಫಾಲ್ಕೆ ಪಡೆದ 3ನೇ ಕನ್ನಡಿಗ! | | ACTPnews

ಅಣ್ಣಾವ್ರು-ವಿ.ಕೆ.ಮೂರ್ತಿ ಇದೀಗ ಅನಂತ್ ನಾಗ್‌!


Last Updated:

ಅಣ್ಣಾವ್ರ ಬಳಿಕ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಇದೀಗ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲಿಗೆ ಇದು ಕನ್ನಡಿಗರಿಗೆ ಸಿಗುತ್ತಿರೋ ಮೂರನೇ ಪ್ರಶಸ್ತಿ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಣ್ಣಾವ್ರು-ವಿ.ಕೆ.ಮೂರ್ತಿ ಇದೀಗ ಅನಂತ್ ನಾಗ್‌!
ಅಣ್ಣಾವ್ರು-ವಿ.ಕೆ.ಮೂರ್ತಿ ಇದೀಗ ಅನಂತ್ ನಾಗ್‌!

ಅನಂತ್ ನಾಗ್ (Anant Nag) ಅವರಿಗೆ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ. ಚಿತ್ರರಂಗಕ್ಕೆ ನೀಡಿದ ಕೊಡಿಗೆಗಾಗಿ ಭಾರತೀಯ ಚಿತ್ರರಂಗದ ಅತ್ಯುನ್ನತ ಈ ಪ್ರಶಸ್ತಿಯನ್ನ ಕೊಟ್ಟು ಗೌರವಿಸಲಾಗುತ್ತಿದೆ. ಆದರೆ, ಈ ಮೊದಲು ರಾಜ್‌ಕುಮಾರ್ (Rajkumar) ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು. ಅಣ್ಣಾವ್ರು ಆದ್ಮೇಲೆ ಹೆಸರಾಂತ ಛಾಯಾಗ್ರಹಕ ವಿ.ಕೆ.ಮೂರ್ತಿಗಳಿಗೆ (V.K.Murthy) ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗಾಗಿಯೇ ಈ ಪ್ರಶಸ್ತಿ ಪಡೆಯುತ್ತಿರೋ 3 ನೇ ಕನ್ನಡಿಗರ ಅನಂತ್ ನಾಗ್ ಅವರಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಅನಂತ್‌ ನಾಗ್…

ಅನಂತ್ ನಾಗ್‌ ತುಂಬಾನೆ ಸ್ಪೆಷಲ್ ನೋಡಿ. ಇವರ ಅಭಿನಯಕ್ಕೆ ಸೋಲದವರೇ ಇಲ್ಲ. ಪ್ರತಿಭಾನ್ವಿತ ಯುವ ನಿರ್ದೇಶಕರ ಚಿತ್ರದಲ್ಲೂ ಇವರು ನಟಿಸಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಏನು ಕಡಿಮೇನೆ?
after annavru vk murthy now anant nag wins dadasaheb phalke award

ಕನ್ನಡಿಗರಿಗೆ ಸಿಗ್ತಿರೋ 3ನೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

(ಚಿತ್ರ ಕೃಪೆ: ಅನಂತ್ ನಾಗರಕಟ್ಟೆ ಇನ್​ಸ್ಟಾಗ್ರಾಮ್)

ಈ ಚಿತ್ರದ ಅಭಿನಯ ಇಂದಿಗೂ ಎಲ್ಲರನ್ನೂ ಕಾಡುತ್ತದೆ. ಹೇಮಂತ್ ರಾವ್ ಡೈರೆಕ್ಷನ್ ಮಾಡಿರೋ ಈ ಚಿತ್ರದಲ್ಲಿ ಅನಂತ್ ನಾಗ್ ಅವರು ನಿಜಕ್ಕೂ ಅದ್ಭುತವಾಗಿಯೇ ಅಭಿನಯಿಸಿದ್ದರು. ಇದೇ ಹೇಮಂತ್ ರಾವ್ ಅವರ ಕವಲುದಾರಿ ಚಿತ್ರದಲ್ಲೂ ಅನಂತ್‌ ನಾಗ್ ಅವರು ಬೇರೆ ರೀತಿ ಕಾಣಿಸಿಕೊಂಡರು.

300 ಚಿತ್ರಗಳಲ್ಲಿ ನಟನೆ

ಅನಂತ್‌ ನಾಗ್ ಅವರು 300 ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಸುಮಾರು 250 ಕನ್ನಡ ಚಿತ್ರಗಳೇ ಇವೆ. ಉಳಿದ ಚಿತ್ರಗಳಲ್ಲಿ ಹಿಂದಿ ಸೇರಿ ಇತರ ಭಾಷೆಯ ಚಿತ್ರಗಳೂ ಇವೆ.

ಇಷ್ಟೆಲ್ಲ ಚಿತ್ರಗಳಲ್ಲಿ ಅನಂತ್ ನಾಗ್ ತಮ್ಮದೇ ಛಾಪು ಮೂಡಿಸಿದ್ದಾರೆ. ಎಲ್ಲವೂ ನಿಜವೇನೋ ಅನ್ನುವಷ್ಟು ಸಹಜವಾಗಿಯೇ ಅಭಿನಯಿಸಿದ್ದಾರೆ. ಎಲ್ಲರ ನೆಚ್ಚಿನ ನಟರೂ ಆಗಿದ್ದಾರೆ. ಆದರೆ, ಈಗ ನಟನೆಯಿಂದ ಸ್ವಲ್ಪ ದೂರವೇ ಉಳಿದ್ದಾರೆ.

after annavru vk murthy now anant nag wins dadasaheb phalke award

ಅಣ್ಣಾವ್ರ ಬಳಿಕ…

(ಚಿತ್ರ ಕೃಪೆ: ರಾಘವೇಂದ್ರ ರಾಜ್‌ಕುಮಾರ್ ಇನ್​ಸ್ಟಾಗ್ರಾಮ್)

ಅಣ್ಣಾವ್ರ ಬಳಿಕ…

ಡಾಕ್ಟರ್ ರಾಜ್‌ಕುಮಾರ್ ಅವರಿಗೆ ಮೊದಲು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿ ಬಂದು ಇದೀಗ 31 ವರ್ಷ ಆಗಿದೆ.

ಸೆಪ್ಟೆಂಬರ್-22 ರಂದು ಪ್ರಶಸ್ತಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಈ ತಿಂಗಳು ಸೆಪ್ಟೆಂಬರ್-22 ರಂದು ಪ್ರದಾನ ಮಾಡಲಾಗುತ್ತಿದೆ. ಗುಜರಾತನಲ್ಲಿ ನಡೆಯುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

after annavru vk murthy now anant nag wins dadasaheb phalke award

ಛಾಯಾಗ್ರಾಹಕ ವಿ.ಕೆ.ಮೂರ್ತಿ

(ಚಿತ್ರ ಕೃಪೆ: ಸೋಮನಾಥ್ ಮೈತಿ ಇನ್​ಸ್ಟಾಗ್ರಾಮ್)

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆ ಮೂಲಕ ಅನಂತ್ ನಾಗ್ ಅವರಿಗೆ ಅಭಿನಂದನೆ ಕೂಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಅಭಿನಂದಿಸಿದ್ದಾರೆ.

ಹಾಗೆ ಇದು ಅನಂತ್‌ ನಾಗ್ ಅವರಿಗೆ ನೀಡ್ತಿರೋ 2024 ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಆಗಿದೆ. ಕಳೆದ ವರ್ಷ 2025 ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2007 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಸಂದಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports