Last Updated:
ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ ಹೇಳುತ್ತಿದ್ದಾರೆ. ಮಧ್ಯಮ ವರ್ಗದ ಕತೆಯ ಮಹಾಲಕ್ಷ್ಮಿ ಮದುವೆ (Mahalakshmi Maduve) ಸೀರಿಯಲ್ ಮಾಡುತ್ತಿದ್ದಾರೆ. ಜೂನ್-1 ರಿಂದಲೇ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಇದರ ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಮನೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ
ಶ್ರೀಹರಿ ಪಾತ್ರದಲ್ಲಿ ನವ ನಟ ಭರತ್ ಶಿವಣ್ಣ ಇಲ್ಲಿ ನಟಿಸಿದ್ದಾರೆ. ಈ ಮೂಲಕ ಇವರು ಕಿರುತೆರೆಗೆ ಕಾಲಿಡುತ್ತಿದ್ದಾರೆ. ಇವರ ಈ ಸೀರಿಯಲ್ ಅಲ್ಲಿ ಮದುವೆ ಕತೆ ಇದೆ.
ಮಹಾಲಕ್ಷ್ಮಿ ಹಾಗೂ ಶ್ರೀಹರಿಯ ಮದುವೆ ಸಾವಿರ ಸುಳ್ಳು ಹೇಳಿದ್ಮೇಲೆ ಆಗೋದಿಲ್ಲ. ಬದಲಾಗಿ ಒಂದೇ ಒಂದು ಸುಳ್ಳಿನಿಂದಲೇ ಆಗುತ್ತದೆ.
ಆದರೆ, ಇವರ ಈ ಮದುವೆ ಗಟ್ಟಿಯಾಗಿ ಉಳಿಯುತ್ತಾರೆ. ಉಳಿದರೆ ಹೇಗೆ ಸಾಗುತ್ತದೆ. ಈ ಎಲ್ಲ ವಿಷಯಗಳು ಸೀರಿಯಲ್ ಅಲ್ಲಿ ಹೋಗ್ತಾ ಹೋಗ್ತಾ ತಿಳಿಯುತ್ತದೆ.
ಮಹಾಲಕ್ಷ್ಮಿ ಒಂದು ಕೆಲಸ ಮಾಡ್ತಾ ಇರ್ತಾಳೆ. ಮನೆ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾಳೆ. ಒಂದು ಸುಳ್ಳು ಹೇಳಿಯೇ ಮದುವೆ ಮಾಡ್ತಾರೆ. ಆದರೆ, ಮಹಾಲಕ್ಷ್ಮಿ ಇಲ್ಲಿ ಒಂದು ಷರತ್ತು ಹಾಕಿರುತ್ತಾಳೆ.
ಮದುವೆ ಬಳಿಕವೂ ನನ್ನ ಸಂಬಳವನ್ನ ನಮ್ಮ ಅಮ್ಮನಿಗೆ ಕೊಡುತ್ತೇನೆ ಅಂತ ಹೇಳಿರುತ್ತಾಳೆ. ಅಮ್ಮನ ನೋಡಿಕೊಳ್ಳಬೇಕು ತಂಗಿಯರನ್ನ ಓದಿಸಬೇಕು ಅನ್ನುವ ಆಸೆನೂ ಇರುತ್ತದೆ. ಅದಕ್ಕೇನೆ ಮಹಾಲಕ್ಷ್ಮಿ ಈ ಒಂದು ಷರತ್ತು ಹಾಕಿರುತ್ತಾಳೆ. ಆದರೆ, ಮದುವೆ ಬಳಿಕ ಏನೆಲ್ಲ ಆಗುತ್ತದೆ ಅನ್ನೋದು ಇಡೀ ಸೀರಿಯಲ್ ಅಂತಲೂ ಹೇಳಬಹುದು.
ಜೂನ್-1 ರಿಂದ ಪ್ರಸಾರ
ಉದಯ ಟಿವಿಯಲ್ಲಿ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಜೂನ್-1 ರಿಂದಲೇ ಇದು ಟೆಲಿಕಾಸ್ಟ್ ಆಗುತ್ತಿದೆ. ಸಂಜೆ 6.30 ಈ ಸೀರಿಯಲ್ ಪ್ರಸಾರ ಆಗುತ್ತಿದೆ.
ಸೋಮವಾರದಿಂದ ಶನಿವಾರದವರೆಗೂ ಮಹಾಲಕ್ಷ್ಮಿ ಮದುವೆ ಪ್ರಸಾರ ಆಗುತ್ತದೆ. ಈ ಸೀರಿಯಲ್ ಅಲ್ಲಿ ಅಮೂಲ್ ಗೌಡ, ಭರತ್ ಶಿವಣ್ಣ, ಮಂಜು ಪಾವಗಡ, ಮಾನಸ ನಟಿಸಿದ್ದಾರೆ. ಶಿವರಾಜಿ ರಾವ್ ಜಾಧವ್, ಅಮೃತಾ ರಾಮೂರ್ತಿ, ಸೀತಾ ಕೋಟೆ, ಸ್ನೇಹ ಭಟ್, ಮೇಘಶ್ರೀ ಸೇರಿದಂತೆ ಇನ್ನು ಅನೇಕರು ಅಭಿನಯಿಸಿದ್ದಾರೆ.
ಮಹಾಲಕ್ಷ್ಮಿ ಸೀರಿಯಲ್ ಅನ್ನ ಶಿವು ಪೂಜೇನ ಅಗ್ರಹಾರ ಡೈರೆಕ್ಷನ್ ಮಾಡಿದ್ದಾರೆ. ಯೋಗೇಶ್ ಗೌಡ ಈ ಸೀರಿಯಲ್‌ಗೆ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ.
ಉದಯ ಟಿವಿಯಲ್ಲಿ ಸಾಕಷ್ಟು ಒಳ್ಳೆ ಸೀರಿಯಲ್ ಬಂದಿವೆ. ರಂಗೋಲಿ ಸೀರಿಯಲ್ ಅಂತಲೂ ಜನಮಾನಸದಲ್ಲಿ ಈಗಲೂ ಇದೆ. ಮೂಗುತಿ ಮಲ್ಲಿ ಸೀರಿಯಲ್ ಕೂಡ ಇಲ್ಲಿ ಪ್ರಸಾರ ಆಗಿದೆ. ಇದೀಗ ಮಹಾಲಕ್ಷ್ಮಿ ಮದುವೆ ಸೀರಿಯಲ್ ಬರ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













