Last Updated:
ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಯ್ತು?
ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ (Amrutha Ramamoorthi) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸ್ಪರ್ಶ್ ಹಾಸ್ಪಿಟಲ್ನಲ್ಲಿ (Hospital) ದಾಖಲಾಗಿದ್ದು ನಟಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.
ಅವರು ಆಸ್ಪತ್ರೆಗೆ ದಾಖಲಾಗಿದ್ದು ಸ್ಪರ್ಶ್ ಹಾಸ್ಪಿಟಲ್ ಟ್ಯಾಗ್ ಮಾಡಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಾಗೂ ವಿಡಿಯೋ ಶೇರ್ ಮಾಡಿ ಆರೋಗ್ಯದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ.
ನಮಸ್ಕಾರ ಎಲ್ಲರಿಗೂ. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಗಿದೆ ಏನಾಯ್ತು ಅಂತ. ನಂಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಆಗಿದೆ. ಎಕ್ಸ್ಟ್ರೀಮ್ ಲೆವೆಲ್ಗೆ ಹೋಗಿದೆ ಇನ್ಫೆಕ್ಷನ್. ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಳೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮ್ಗೆ ವಿಧಿಯಿಲ್ಲ. ಶೂಟಿಂಗ್ ಸೆಟ್ನಲ್ಲಿ ರೆಸ್ಟ್ರೂಮ್ ಯೂಸ್ ಮಾಡ್ಬೇಕಾಗುತ್ತದೆ. ನಮ್ಮ ಶೂಟಿಂಗ್ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ತುಂಬಾ ಮುಖ್ಯ. ನಾನು ಈಗ ಹುಷಾರಾಗುತ್ತಿದ್ದೇನೆ ಎಂದಿದ್ದಾರೆ.
ಅಮೃತಾ ರಾಮಮೂರ್ತಿ
ನಟಿ ಅಮೃತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಚಂದದ ಫೋಟೋಶೂಟ್, ವಿಡಿಯೋಗಳನ್ನು ನಟಿ ಶೇರ್ ಮಾಡುತ್ತಲೇ ಇರುತ್ತಾರೆ. ಅವರು ಸದ್ಯ ಆಸೆ ಸೀರಿಯಲ್ನಲ್ಲಿ ನಟಿಸುತ್ತಿದ್ದು ತಮ್ಮ ಅಭಿನಯಕ್ಕೆ ಮೆಚ್ಚುಗೆ ಗಳಿಸಿದ್ದಾರೆ.
ಮಿಸ್ಟರ್ & ಮಿಸ್ಸ್ ರಂಗೇಗೌಡ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದವರು ಅಮೃತಾ. ಸದ್ಯ ಕೆಂಡ ಸಂಪಿಗೆ ಧಾರಾವಾಹಿಯ ಸಾಧನಾ ಮೂಲಕ ಮತ್ತಷ್ಟು ಫೇಮ್ ಪಡೆದುಕೊಂಡರು. ಈ ಧಾರಾವಾಹಿಯಲ್ಲಿ ಅಮೃತಾ ವಿಲನ್ ಪಾತ್ರದಲ್ಲಿ ಉತ್ತಮವಾಗಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಮೃತಾ ಕೇವಲ ನಟನೆ ಮಾತ್ರವಲ್ಲ ಯುಟ್ಯೂಬ್ ಚಾನಲ್ ಕೂಡ ನಡೆಸುತ್ತಿದ್ದಾರೆ. ಅದರಲ್ಲಿ ಬಹಳಷ್ಟು ವಿಚಾರಗಳನ್ನು, ಫ್ಯಾಷನ್, ಹೆಲ್ತ್ ಟಿಪ್ಸ್ ಸೇರಿದಂತೆ ಅನೇಕ ಮಾಹಿತಿ ಶೇರ್ ಮಾಡುತ್ತಿರುತ್ತಾರೆ. ಜತೆಗೆ ಅಮೃತಾ ಗಂಡ ಕೂಡ ಈ ಚಾನಲ್ಗೆ ಸಾಥ್ ಕೊಟ್ಟಿದ್ದಾರೆ.
ಅಮೃತ ರಾಮಮೂರ್ತಿ ಹಾಗೂ ಫ್ಯಾಮಿಲಿ ವಿದೇಶ ಟ್ರಿಪ್ ಗೆ ಹೋಗಿ ಎಂಜಾಯ್ ಮಾಡಿಕೊಂಡು ಬಂದಿರುವ ಫೋಟೋ ವೈರಲ್ ಆಗಿತ್ತು. ಇದೀಗ ಆಸೆ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಅಮೃತಾ ರಾಮಮೂರ್ತಿ ಅವರು ಹೆಚ್ಚಾಗಿ ನೆಗೆಟಿವ್ ರೋಲ್ಗಳನ್ನೇ ಮಾಡ್ತಾರೆ. ವಿಲನ್ ಪಾತ್ರ ನೋಡಿ ಜನ ಬೈದುಕೊಂಡೆ ಇವರ ಅಭಿನಯ ಚೆನ್ನಾಗಿದೆ ಎಂದು ಹೇಳ್ತಾರೆ. ಅಮೃತಾ ಅವರು ಮತ್ತು ರಾಘವೇಂದ್ರ ಅವರಿಗೆ ಮುದ್ದಾದ ಹೆಣ್ಣು ಮಗು ಇದೆ. ಮಗುವಿನ ಫೋಟೋಗಳನ್ನು ಈ ಹಿಂದೆ ಅಮೃತಾ ಅವರು ಶೇರ್ ಮಾಡಿದ್ದರು.
Bangalore,Karnataka













