Amitabh Bachchan: ‘ಕಾಗೆಗಳು ಕೂಗಲು ಆರಂಭಿಸಿದವು’! ಅನಾರೋಗ್ಯ ವದಂತಿ ಹಬ್ಬಿಸಿದವರಿಗೆ ಸಖತ್ ಟಾಂಗ್ ಕೊಟ್ಟ ಅಮಿತಾಭ್ ಬಚ್ಚನ್! | | ACTPnews

News18


Last Updated:

Amitabh Bachchan: ಬಾಲಿವುಡ್‌ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಇರುವ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತು.

News18
News18

ಬಾಲಿವುಡ್‌ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಆರೋಗ್ಯದ ವಿಚಾರದಲ್ಲಿ ಇತ್ತೀಚೆಗೆ ಭಾರೀ ಗೊಂದಲ ಉಂಟಾಗಿತ್ತು . ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ದೇಶದಾದ್ಯಂತ ಇರುವ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತು. ಆದರೆ ಇದೀಗ ಬಂದಿರುವ ಅಧಿಕೃತ ಮಾಹಿತಿಗಳ ಪ್ರಕಾರ, ಅವರ ಆರೋಗ್ಯ ಸಂಪೂರ್ಣ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಮೇ 16ರಂದು ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ವಿಚಾರ ಸತ್ಯವಾದರೂ, ಅದು ಕೇವಲ ಜನರಲ್ ಚೆಕಪ್ ಗಾಗಿ ಮಾತ್ರ ಎನ್ನುವುದು ಆಸ್ಪತ್ರೆ ಮೂಲಗಳಿಂದ ದೃಢಪಟ್ಟಿದೆ. ಕೆಲವು ಮಾಧ್ಯಮಗಳಲ್ಲಿ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಹೊಟ್ಟೆ ಸಮಸ್ಯೆ ತೊಂದರೆ ನೀಡುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದರೂ, ಅದು ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಿ ಅವರ ಆರೋಗ್ಯ ಕುರಿತ ಹಲವು ಸಂದೇಶಗಳು ವೈರಲ್ ಆದವು. ಅವರು ವಿಐಪಿ ವಿಭಾಗದಲ್ಲಿ ದಾಖಲಾಗಿದ್ದಾರೆ, ಅವರ ಮಗ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬ ವರದಿಗಳು ಅಭಿಮಾನಿಗಳನ್ನು ಇನ್ನಷ್ಟು ಆತಂಕಕ್ಕೆ ಒಳಪಡಿಸಿತ್ತು.

ಇದನ್ನೂ ಓದಿ: Salman Khan: ಐಶು ಅಲ್ಲ, ಕತ್ರಿನಾ ಅಲ್ವೇ ಅಲ್ಲ! ಸಲ್ಮಾನ್ ಖಾನ್ ಫಸ್ಟ್‌ ಲವ್ ಯಾರು ಗೊತ್ತಾ?

ಆದರೆ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಅಮಿತಾಭ್ ಬಚ್ಚನ್ ಅವರ ಭೇಟಿ ಪೂರ್ಣವಾಗಿ ರೂಟೀನ್ ಚೆಕ್‌ಅಪ್‌ಗಾಗಿ ಮಾತ್ರವಾಗಿತ್ತು. ತಪಾಸಣೆ ನಂತರ ಅವರು ನೇರವಾಗಿ ಮನೆಗೆ ಹಿಂತಿರುಗಿದ್ದಾರೆ. ಜೊತೆಗೆ ಆಸ್ಪತ್ರೆ ಸುದ್ದಿಯ ಮರುದಿನವೇ ತಮ್ಮ ನಿವಾಸ ಜಲ್ಸಾದಿಂದ ಕಚೇರಿಗೆ ಸ್ವತಃ ಕಾರು ಓಡಿಸಿಕೊಂಡು ಹೋಗುತ್ತಿರುವ ಅಮಿತಾಭ್ ಬಚ್ಚನ್ ಅವರ ವಿಡಿಯೋಗಳನ್ನು ಅಭಿಮಾನಿಗಳು ಗಮನಿಸಿದ್ದಾರೆ. ಇದು ಅವರು ಆರೋಗ್ಯವಾಗಿದ್ದಾರೆ ಎಂಬುದಕ್ಕೆ ಮತ್ತೊಂದು ದೃಢವಾದ ಸಾಕ್ಷಿಯಾಯಿತು.

ಪ್ರಸ್ತುತ ಅಮಿತಾಭ್ ಬಚ್ಚನ್ ಅವರು ಪ್ಯಾನ್ ಇಂಡಿಯಾ ಬ್ಲಾಕ್‌ಬಸ್ಟರ್ ಆಗಿರುವ ಕಲ್ಕಿ 2898 ಎಡಿ ಚಿತ್ರದ ಸೀಕ್ವೆಲ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ನಟ ಕಮಲ್ ಹಾಸನ್ ಅವರೊಂದಿಗಿನ ಸೆಟ್‌ ಫೋಟೋಗಳನ್ನು ಇತ್ತೀಚೆಗಷ್ಟೇ ಹಂಚಿಕೊಂಡಿದ್ದರು. ಪ್ರಭಾಸ್ ಮುಖ್ಯಭೂಮಿಕೆಯಲ್ಲಿರುವ ಈ ಭವ್ಯ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಈ ಚಿತ್ರದಲ್ಲಿ ನಟ ಪ್ರಭಾಸ್ ಅಭಿನಯಿಸುತ್ತಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ನಿರೀಕ್ಷೆ ಮೂಡಿಸಿದೆ.

ಅಂತಿಮವಾಗಿ, ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂಬುದು ಈಗ ಅಧಿಕೃತವಾಗಿ ಸ್ಪಷ್ಟವಾಗಿದೆ. ಅವರ ಆರೋಗ್ಯ ಚೆನ್ನಾಗಿದ್ದು, ಶೂಟಿಂಗ್‌ಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. ಇದರಿಂದ ಕೋಟ್ಯಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports