Amitabh Bachchan: ಕೆಬಿಸಿ ಸೆಟ್​ನಲ್ಲಿ ಜಾರಿಬಿದ್ದು ಗಾಯಗೊಂಡ ಬಿಗ್ ಬಿ! ಈಗ ಹೇಗಿದ್ದಾರೆ ಅಮಿತಾಭ್ ಬಚ್ಚನ್? | Amitabh Bachchan slips and fell in kbc shooting set | | ACTPnews

ಅಮಿತಾಭ್ ಬಚ್ಚನ್


Last Updated:

Amitabh Bachchan: ಖ್ಯಾತ ಬಾಲಿವುಡ್ ನಟ ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಅಮಿತಾಭ್ ಬಚ್ಚನ್ ಈಗ ಹೇಗಿದ್ದಾರೆ? ಆರಾಮ ಆದ್ರಾ?

ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

ಬಾಲಿವುಡ್​ನ (Bollywood) ಬಿಗ್​ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರು ವಯಸ್ಸಾದರೂ ಕೂಡಾ ಇನ್ನೂ ಸಿನಿಮಾ, ರಿಯಾಲಿಟಿ ಶೋ (Reality Show) ಅಂತ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅತಿದೊಡ್ಡ ರಿಯಾಲಿಟಿ ಶೋ ಕೆಬಿಸಿಯನ್ನು (KBC) ಸಕ್ಸಸ್​ಫುಲ್ ಆಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಿನಿಮಾಗಳನ್ನೂ (Cinema) ಮಾಡುತ್ತಿದ್ದಾರೆ. ಆಗಾಗ ವ್ಲಾಗ್ ಬರೆಯುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿಯೂ (Social Media) ಕಾಣಿಸಿಕೊಳ್ಳುತ್ತಾರೆ. ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಕೆಬಿಸಿ ಸೆಟ್​​ನಲ್ಲಿ ಜಾರಿಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಕೌನ್ ಬನೇಗಾ ಕರೋಡ್‌ಪತಿ 18 ಚಿತ್ರೀಕರಣದ ಸಮಯದಲ್ಲಿ ಎಡ ಮೊಣಕಾಲಿಗೆ ಗಾಯವಾದ ನಂತರ ಅಮಿತಾಬ್ ಬಚ್ಚನ್ “ಎದ್ದು ನಿಲ್ಲಲು ಸ್ವಲ್ಪ ಕಷ್ಟವಾಯಿತು” ಎಂದು ಹೇಳಲಾಗಿದೆ.

‘ಸಾಮಾನ್ಯವಾಗಿ ನಾನು ನನ್ನ ಸ್ವಗತವನ್ನು ಮಧ್ಯದಲ್ಲಿ ನಿಂತು ಹೇಳುತ್ತೇನೆ. ಆದರೆ ಇಂದು ನನಗೆ ಮೊಣಕಾಲಿನ ಗಾಯವಾಗಿದೆ. ನಿನ್ನೆ, ಚಿತ್ರೀಕರಣದ ಸಮಯದಲ್ಲಿ ನಾನು ಜಾರಿ ಬಿದ್ದೆ’ ಎಂದು ಅವರು ಹೇಳಿದರು. ಅವರ ಗಾಯ ತೀವ್ರವಾಗಿಲ್ಲ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. ಈ ಮೂಲಕ ಅಭಿಮಾನಿಗಳು ಆತಂಕಗೊಳ್ಳದಂತೆ ಸೂಚಿಸಿದರು.

ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಏನಾದರೂ ಆಗಿದೆ ಎಂದಾದಾಗ ಎಲ್ಲರೂ ಆಘಾತಗೊಳ್ಳುತ್ತಾರೆ. ಅಭಿಮಾನಿಗಳಂತೂ ಬಿಗ್​ ಬಿ ಏನಾಯ್ತು ಅಂತ ತುಂಬಾ ಟೆನ್ಶನ್ ಆಗುತ್ತಾರೆ. ಇದೀಗ ಅಮಿತಾಭ್ ಅವರು ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದಿದ್ದು ಕೇಳಿ ಅಭಿಮಾನಿಗಳು ಆತಂಕಗೊಂಡರು. ಆದರೆ ಸದ್ಯ ನಟ ಅದರಿಂದ ರಿಕವರಿ ಆಗಿ ಶೋ ನಡೆಸಿಕೊಟ್ಟಿದ್ದಾರೆ.

ಧರ್ಮಶಾಲಾ ಪ್ಲಾನ್

ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ದಿ ಸರಯೂ ಎನ್ನುವ ಯೋಜನೆಯಲ್ಲಿ ಪ್ಲಾಟ್ಸ್ ಖರೀದಿಸಿದ್ದರು. ನಟ ರಣಬೀರ್ ಅವರು 3.31 ಕೋಟಿ ಕೊಟ್ಟು 2,134 ಸ್ಕ್ವೇರ್ ಫೀಟ್ ಭೂಮಿ ಖರೀದಿ ಮಾಡಿದ್ದರು. ಇದು ಕೂಡಾ 75 ಕೋಟಿಯ ನದೀತೀರದ ದಿ ಸರಯೂ ಪ್ರಾಜೆಕ್ಟ್ ಅಡಿಯಲ್ಲಿ ಖರೀದಿ ಮಾಡಲಾಗಿದೆ.

ಇದೀಗ ಅಮಿತಾಭ್ ಬಚ್ಚನ್ ತಾವು ಖರೀದಿಸಿದ ಭೂಮಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸೋಕೆ ಸಿದ್ಧರಾಗಿದ್ದಾರೆ. ಅವರು ಅಲ್ಲಿ ಹೊಸ ಪ್ರಾಜೆಕ್ಟ್ ಶುರು ಮಾಡುತ್ತಿದ್ದಾರೆ.

ಬಿಗ್ ಬಿ ತಮ್ಮ ತಂದೆಯ ಸ್ಮರಣಾರ್ಥ ಧರ್ಮಶಾಲೆ ನಿರ್ಮಿಸಲು ಅನುಮತಿಗಾಗಿ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ (ADA) ಅರ್ಜಿ ಸಲ್ಲಿಸಿದ್ದಾರೆ. ಈ ಒಂದು ಕಟ್ಟಡ 20 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದ್ದು, ಸರಯು ಯೋಜನೆಯೊಳಗೆ ದಶರಥ ಪಥದಲ್ಲಿ ತಲೆ ಎತ್ತಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed