Last Updated:
Amir Khan: ಅಮೀರ್ ಖಾನ್ ಅವರು ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಫೇಮಸ್. ಸಂಬಂಧ ನಿಭಾಯಿಸೋದ್ರಲ್ಲೂ ಇವರು ಪರ್ಫೆಕ್ಟ್ ಅಂತನಿಸೋ ಘಟನೆ ನಡೆದಿದೆ.
ಬಾಲಿವುಡ್ನ (Bollywood) ಸ್ಟಾರ್ ನಟ ಅಮೀರ್ ಖಾನ್ (Amir Khan) ಅವರು ಈಗಾಗಲೇ ತಮ್ಮ ವೈಯಕ್ತಿಕ ಜೀವನದ ಸಂಬಂಧವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಮಾಜಿ ಪತ್ನಿಯರು ಹಾಗೂ ಭಾವಿ ಪತ್ನಿಯ ಜೊತೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದು ಮತ್ತೊಮ್ಮೆ ಭಾರೀ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಅಮೀರ್ ಖಾನ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದದ್ದು ಕಂಡು ಬಂತು. ಅಮೀರ್ ಖಾನ್ ಮುಂದೆ ಡ್ರೈವರ್ ಪಕ್ಕ ಕುಳಿತರೆ ಹಿಂದಿನ ಸೀಟಿನಲ್ಲಿ ಭಾವೀ ಪತ್ನಿ ಗೌರಿ ಸ್ಪ್ರಾಟ್, ಮಾಜಿ ಪತ್ನಿಯರಾದ ರೀನಾ ದತ್ತಾ ಹಾಗೂ ಕಿರಣ್ ರಾವ್ ಕುಳಿತಿದ್ದರು.
ಇಬ್ಬರು ಮಾಜಿ ಪತ್ನಿಯರು ಜೊತೆಗೆ ಭಾವೀ ಪತ್ನಿಯೂ ಒಟ್ಟಿಗೆ ಪ್ರಯಾಣ ಮಾಡ್ತಾ ಇದ್ದರೆ ನೋಡಿದವರು ಇದ್ಯಾರು ಗುರೂ ಈ ಲೆವೆಲ್ಗೆ ಅಂತ ಕಮೆಂಟ್ ಮಾಡಿದ್ದಾರೆ. ಅಮೀರ್ ಖಾನ್ ಅವರು ಸಂಬಂಧಗಳನ್ನು ನಿಭಾಯಿಸೋ ರೀತಿಗೆ ಸೆಲ್ಯೂಟ್ ಎಂದಿದ್ದಾರೆ ಜನ.
ಲಗಾನ್ ಸಿನಿಮಾದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾಲ್ವರೂ ಒಟ್ಟಿಗೆ ಕಾಣಿಸಿದ್ದಾರೆ. ನಟ ಅಮೀರ್ ಖಾನ್ ತಮ್ಮ ಮಾಜಿ ಪತ್ನಿಯರೊಂದಿಗೆ ಇನ್ನೂ ಆಪ್ತ ಸಂಬಂಧ ಉಳಿಸಿಕೊಂಡಿದ್ದಾರೆ.
ಆಸ್ಕರ್-ನಾಮನಿರ್ದೇಶಿತ ಎವರ್ಗ್ರೀನ್ ಸಿನಿಮಾ ಲಗಾನ್ ಇವೆಂಟ್ನಲ್ಲಿ ನಟನೊಂದಿಗೆ ಅವರ ಈಗಿನ ಗರ್ಲ್ಫ್ರೆಂಡ್ ಗೌರಿ ಸ್ಪ್ರಾಟ್ ಮಾತ್ರವಲ್ಲದೆ, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡ ಹಾಜರಿದ್ದರು.
ಈಗ ಕಾರ್ಯಕ್ರಮದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅಲ್ಲಿ ಆಮಿರ್ ಖಾನ್ ತಮ್ಮ ಮಾಜಿ ಪತ್ನಿಯರು ಮತ್ತು ಪ್ರಸ್ತುತ ಸಂಗಾತಿ ಗೌರಿ ಅವರೊಂದಿಗೆ ಒಂದೇ ಕಾರಿನಲ್ಲಿ ಸ್ಥಳದಿಂದ ಹೊರಡುತ್ತಿರುವುದನ್ನು ಕಾಣಬಹುದು. ಇದು ತಕ್ಷಣ ವೈರಲ್ ಆಗಿದೆ.
ಸೆಲೆಬ್ರೇಷನ್ ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಅವರ ಕುಟುಂಬದ ಸ್ನೇಹ ಕಂಡು ಭೇಷ್ ಎಂದಿದ್ದಾರೆ.
Bangalore,Karnataka













