Allu Arjun: ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್‌ಸಿಬಿ ಸ್ಟಾರ್ ಕ್ರಿಕೆಟರ್! | | ACTPnews

ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್‌ಸಿಬಿ ಸ್ಟಾರ್ ಕ್ರಿಕೆಟರ್!


Last Updated:

ಆರ್‌ಸಿಬಿ ಸ್ಟಾರ್ ಕ್ರಿಕೆಟರ್ ವೆಂಕಟೇಶ್ ಅಯ್ಯರ್ ತಮ್ಮ ನೆಚ್ಚಿನ ನಾಯಕ ನಟ ಅಲ್ಲು ಅರ್ಜುನ್ ಅವರನ್ನ ಭೇಟಿ ಆಗಿದ್ದಾರೆ. ಅವರ ಮನೆಯಲ್ಲಿಯೇ ಮೀಟ್ ಆಗಿ ಸುಮಾರು ಹೊತ್ತು ಮಾತನಾಡಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್‌ಗೆ ತಮ್ಮ ಸಹಿ ಇರೋ ಜರ್ನಿ ಕೂಡ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್‌ಸಿಬಿ ಸ್ಟಾರ್ ಕ್ರಿಕೆಟರ್!
ಮಗನ ಆಸೆ ಈಡೇರಿಸಿದ ಅಲ್ಲು ಅರ್ಜುನ್; ಮನೆಗೆ ಬಂದ ಆರ್‌ಸಿಬಿ ಸ್ಟಾರ್ ಕ್ರಿಕೆಟರ್!

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮಗನ ಆಸೆ ಈಡೇರಿಸಿದ್ದಾರೆ. ಆರ್‌ಸಿಬಿ (RCB) ಅಪ್ಪಟ ಅಭಿಮಾನಿ ಆಗಿರೊ ಅಲ್ಲು ಪುತ್ರ ಅಲ್ಲು ಅಯಾನ್ (Allu Ayaan) ತನ್ನ ನೆಚ್ಚಿನ ಕ್ರಿಕೆಟ್‌ರನ ನೋಡಿ ಖುಷಿಪಟ್ಟಿದ್ದಾರೆ. ಅವರ ಸಹಿ ಇರುವ ಜರ್ಸಿ ಪಡೆದು ಸಂತೋಷ ಪಟ್ಟಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಆ ಕ್ರಿಕೆಟ್ ಅಲ್ಲು ಅರ್ಜುನ್ (Allu Arjun) ಅಪ್ಪಟ ಅಭಿಮಾನಿ ಕೂಡ ಆಗಿದ್ದಾರೆ. ಈ ವಿಶೇಷ ಭೇಟಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ವೆಂಕಟೇಶ್ ಅಯ್ಯರ್…

ಆರ್‌ಸಿಬಿಯ ಸ್ಟಾರ್ ಕ್ರಿಕೆಟರ್ ವೆಂಕಟೇಶ್‌ ಅಯ್ಯರ್ ಅವರ ಒಂದು ವಿಷಯ ಇದೀಗ ವೈರಲ್ ಆಗಿದೆ. ತಮ್ಮ ನೆಚ್ಚಿನ ನಾಯಕ ನಟನ ಮನೆಗೆ ಹೋಗಿ ಮೀಟ್ ಆಗಿರೋದು ಹೆಚ್ಚು ಗಮನ ಸೆಳೆದಿದೆ. ತಮ್ಮನ್ನ ಲಕ್ಷಾಂತರ ಜನರು ಇಷ್ಟಪಡ್ತಿದ್ದರೂ ಕೂಡ ವೆಂಕಟೇಶ್ ಅಯ್ಯರ್ ಅವರಿಗೆ ಅಲ್ಲು ಅರ್ಜುನ್ ಅಂದ್ರೆ ತುಂಬಾನೆ ಇಷ್ಟ ನೋಡಿ.
RCB Star Cricketer Venkatesh Iyer met Allu Arjun Allu Ayaan photos got viral

ಫೋಟೋ ವೈರಲ್

ವೆಂಕಟೇಶ್ ಅಯ್ಯರ್ ಅವರ ಈ ಒಂದು ಅಭಿಮಾನದ ಕ್ಷಣದ ಫೋಟೋಗಳು ವೈರಲ್ ಆಗಿವೆ. ಮಾಧ್ಯಮಗಳಿಗೂ ಶೇರ್ ಆಗಿವೆ. ಇಲ್ಲಿ ಇನ್ನೂ ಒಂದು ವಿಷಯ ಕೂಡ ಇದೆ. ಅಲ್ಲು ಅರ್ಜುನ್ ಪುತ್ರ ಅಲ್ಲು ಅಯಾನ್ ಕ್ರಿಕೆಟ್ ಅಭಿಮಾನಿ ಆಗಿದ್ದಾರೆ. ಕ್ರಿಕೆಟರ್ ವೆಂಕಟೇಶ್ ಅಯ್ಯರ್ ಅಂದ್ರೆ ಅಯಾನ್‌ಗೂ ತುಂಬಾನೆ ಇಷ್ಟ ಆಗುತ್ತಾರೆ.

ಅಯಾನ್‌ಗೆ ಸ್ಪೆಷಲ್ ಗಿಫ್ಟ್

ವೆಂಕಟೇಶ್ ಅಯ್ಯರ್ ಈ ಒಂದು ಭೇಟಿಯ ಸಮಯದಲ್ಲಿ ಒಂದು ವಿಶೇಷ ಕೆಲಸ ಮಾಡಿದ್ದಾರೆ. ತಮ್ಮ ಸಹಿ ಇರೋ ಆರ್‌ಸಿಬಿಯ ಜರ್ನಿಯನ್ನ ಅಲ್ಲು ಅಯಾನ್ ಗೆ ಉಡುಗೊರೆಯಾಗಿಯೇ ನೀಡಿದ್ದಾರೆ.

ಈ ಸಮಯದಲ್ಲಿ ಕೆಲವು ಫೋಟೋಗಳು ಎಲ್ಲರ ಗಮನ ಸೆಳೆದಿವೆ. ಅಂದ್ಹಾಗೆ ಈ ಒಂದು ಭೇಟಿಯ ಸಮಯದಲ್ಲಿ ಅಲ್ಲು ಅರ್ಜುನ್ ಮತ್ತು ವೆಂಕಟೇಶ್ ಅಯ್ಯರ್ ಆತ್ಮೀಯವಾಗಿ ಸುಮಾರು ಹೊತ್ತು ಮಾತನಾಡಿದ್ದಾರೆ.

ಫೋಟೋ ವೈರಲ್

ಈಗಾಗಲೆ ಹೇಳಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಶೇಷ ಭೇಟಿಯ ಫೋಟೋಗಳು ಶೇರ್ ಆಗುತ್ತಿವೆ. ಸಿನಿಮಾ ಪ್ರೇಮಿಗಳು, ಕ್ರಿಕೆಟ್ ಪ್ರಿಯರು ಇದನ್ನ ನೋಡಿ ಖುಷಿಪಡ್ತಿದ್ದಾರೆ.

ಅಲ್ಲು ಅರ್ಜುನ್ ಫ್ಯಾನ್ಸ್ ಕೂಡ ಇವುಗಳನ್ನ ಇಷ್ಟಪಟ್ಟಿದ್ದಾರೆ. ಹಾಗೆ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಳ್ತಿದ್ದಾರೆ.

RCB Star Cricketer Venkatesh Iyer met Allu Arjun Allu Ayaan photos got viral

ಅಯಾನ್‌ಗೆ ಸ್ಪೆಷಲ್ ಗಿಫ್ಟ್
ವೆಂಕಟೇಶ್ ಅಯ್ಯರ್

ಇಂಡಿಯನ್ ಕ್ರಿಯೆಟರ್ ವೆಂಟೇಶ್ ಅಯ್ಯರ್ ಆಲ್‌ರೌಂಡರ್ ಆಗಿದ್ದಾರೆ. ಆರ್‌ಸಿಬಿ ಅಲ್ಲಿ ಸ್ಟಾರ್ ಕ್ರಿಕೆಟರ್ ಅನ್ನೋದು ಗೊತ್ತೇ ಇದೆ. ಈ ಕ್ರಿಕೆಟರ್ CA ಕೂಡ ಮಾಡಿದ್ದಾರೆ.

ಕ್ರಿಕೆಟ್ ಸೆಳೆತ ಇವರನ್ನ ಈ ಕಡೆಗೆ ಕರೆದುಕೊಂಡು ಬಂದೆ. ಆದರೆ, CA ಬಿಟ್ಟ ಮೇಲೆ ವೆಂಕಟೇಶ್ ಅಯ್ಯರ್ MBA ಕೂಡ ಮಾಡಿದ್ದಾರೆ. ವೆಂಕಟೇಶ್ ಅಯ್ಯರ್ ಜೂನ್ 2, 2024 ರಂದು ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ಶ್ರುತಿ ರಘುನಾಥ್ ಅನ್ನುವವರನ್ನ ಮದುವೆ ಆಗಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾ

ಅಲ್ಲು ಅರ್ಜುನ್ ಸದ್ಯ ತಮ್ಮ ರಾಕಾ ಚಿತ್ರದ ಲುಕ್ ನಿಂದಲೆ ಗಮನ ಸೆಳೆಯುತ್ತಿದ್ದಾರೆ. ಡೈರೆಕ್ಟರ್ ಅಟ್ಲಿ ಕಲ್ಪನೆಯ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಬೇರೆ ರೂಪ ತಾಳಿದ್ದಾರೆ ತೋಳ ಮಾನವ ಅಂತೀವಲ್ಲ. ಆ ರೀತಿನೇ ಕಾಣಿಸುತ್ತಿದ್ದಾರೆ.

ಡೈರೆಕ್ಟರ್ ಅಟ್ಲಿ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ತೆಗೆಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಗಮನದಲ್ಲಿಟ್ಟುಕೊಂಡೇ ಈ ಸಿನಿಮಾ ಮಾಡ್ತಿದ್ದಾರೆ. ಹಾಗೆ ಇದು ಫ್ಯಾಂಟಸಿ ಇರೋ ಆ್ಯಕ್ಷನ್ ಚಿತ್ರವೇ ಆಗಿದೆ.

ಈ ಚಿತ್ರದ ಹೈಪ್ ತುಂಬಾನೆ ಇದೆ. ಬಹುಕೋಟಿ ವೆಚ್ಚದಲ್ಲೂ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಹಾಲಿವುಡ್ ಟೆಕ್ನಿಷನ್‌ಗಳೆಲ್ಲ ಈ ಚಿತ್ರಕ್ಕಾಗಿಯೇ ಕೆಲಸ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports