Last Updated:
ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್ಎಲ್, ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೀತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು, ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
ಬೆಂಗಳೂರು: KSCA ಲೀಗ್ ಪಂದ್ಯಾವಳಿ ವೇಳೆ ಹೃದಯಘಾತದಿಂದ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ. KSCA ಶ್ರೀ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಆಡುತ್ತಿದ್ದ ಅಕ್ಷಯ್ ಎಸ್.ಎಲ್. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಮೂಲದ 36 ವರ್ಷದ ಅಕ್ಷಯ್ ಎಸ್.ಎಲ್., ಬೊಮ್ಮಸಂದ್ರದ SLS ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಆರೋಗ್ಯ ಸಮಸ್ಯೆ ಎಂದು ಹೊರಬಂದಿದ್ದರು. ಹೊರಬಂದು ನೀರು ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಕ್ಷಯ್ ಸಾವನ್ನಪ್ಪಿದ್ದಾರೆ. ಮೃತ ಅಕ್ಷಯ್ ಕರ್ನಾಟಕದ ತಂಡದ ಪರವಾಗಿ ರಣಜಿ ಪಂದ್ಯಾವಳಿಗಳನ್ನ ಆಡಿರುವ ಅನುಭವ ಹೊಂದಿದ್ದರು.
(ವರದಿ: ಮಂಜು, ನ್ಯೂಸ್18 ಕನ್ನಡ, ಬೆಂಗಳೂರು)
Bangalore,Karnataka













