ಸದ್ಯದ ಮಾಹಿತಿ ಪ್ರಕಾರ ಸಿನಿಮಾ ನಿರ್ಮಾಪಕು ಇಷ್ಟು ದುಡ್ಡು ಖರ್ಚು ಮಾಡಿದ್ದಾರೆ. ಬೃಹತ ವೇದಿಕೆ ನಿರ್ಮಾಣ ಕೂಡ ಆಗಿದೆ. ಹೆಚ್ಚು ಕಡಿಮೆ ಚಿತ್ರದ 27 ಕಲಾವಿದರು ಈ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಕೃತಕ ಜಲಪಾದ ಅತ್ಯಾಕರ್ಷಕ
ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಟ್ರೈಲರ್ ಅನ್ನ ಅದ್ದೂರಿಯಾಗಿಯೇ ರಿಲೀಸ್ ಮಾಡಿದ್ದಾರೆ. ಚಿತ್ರದ ನಿರ್ಮಾಪಕರಾದ ಫಿರೋಜ್ ನಾಡಿಯಾದ್ವಾಲಾ ತಮ್ಮ ಈ ಚಿತ್ರದ ಟ್ರೈಲರ್ ರಿಲೀಸ್‌ಗೆ 1.5 ಕೋಟಿ ವೆಚ್ಚದ ಸೆಟ್ ನಿರ್ಮಿಸಿದ್ದಾರೆ.
ಈ ಸೆಟ್ ಅಲ್ಲಿ ಒಂದು ಕೃತಕ ಜಲಪಾತ ಕೂಡ ಇದೆ. ಸುತ್ತಲು ಜಂಗಲ್ ಸೆಟಪ್ ಕೂಡ ಇದೆ. ಇದರೊಳಗೆ ಹೋದರೆ ಆಯಿತು. ಒಂದು ಅರಣ್ಯಕ್ಕೆ ಕಾಲಿಟ್ಟ ಅನುಭವ ಆಗುತ್ತದೆ.
ವೆಲ್ ಕಮ್ ಟು ದಿ ಜಂಗಲ್ ಚಿತ್ರದ ಈ ಸೆಟ್ ಅನ್ನ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಹಾಕಿದ್ದಾರೆ. ಪಕ್ಕಾ ಜಂಗಲ್ ರೀತಿನೇ ಕಾಣಿಸುತ್ತದೆ.
ಯಶ್ ರಾಜ್ ಸ್ಟುಡಿಯೋ
ಆ ರೀತಿನೇ ಈ ಸೆಟ್ ಇದೆ. ಇದರಲ್ಲಿಯೇ ಟ್ರೈಲರ್ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್, ದಿಶಾ ಪಟಾನಿ ಸೇರಿದಂತೆ ಇನ್ನು ಅನೇಕರು ಈ ಇವೆಂಟ್‌ಗೆ ಬಂದಿದ್ದಾರೆ. ಬಂದ ಚಿತ್ರದ ಟ್ರೈಲರ್ ಹಾಗೂ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಬಾಲಿವುಡ್ ಈ ಚಿತ್ರ ಜೂನ್-26 ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಅಧಿಕೃತ ಘೋಷಣೆ ಆಗಿದೆ. ಟ್ರೈಲರ್ ಕೂಡ ರಿಲೀಸ್ ಆಗಿದೆ. ಹಾಸ್ಯದ ಹೊನಲನ್ನು ಇದು ಹರಿಸುತ್ತದೆ.
ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ಪಾತ್ರಗಳು ಇಲ್ಲಿ ಸಖತ್ ಆಗಿವೆ. ಒಂದು ರೀತಿ ಟಾಮ್ ಆ್ಯಂಡ್ ಜರ್ರಿ ತರವೇ ಎರಡೂ ಪಾತ್ರವೆ ಇವೆ.
ಈ ಎರಡೂ ಪಾತ್ರಗಳ ಕಿತ್ತಾಟ ಇಲ್ಲಿ ಮಜಾ ಕೊಡುತ್ತವೆ. ಇತರ ಪಾತ್ರಗಳ ವರ್ತನೆಗಳು ಇಲ್ಲಿ ನಗು ತರಿಸುತ್ತವೆ. ಡೈರೆಕ್ಟರ್ ಅಹ್ಮದ್ ಖಾನ್ ಇಲ್ಲಿ ಸಣ್ಣ ಸಣ್ಣ ವಿಷಯದಲ್ಲಿ ಹಾಸ್ಯದ ಹೊನಲು ಹರಿಸುವ ಕೆಲಸ ಮಾಡಿದ್ದಾರೆ.
ಒಟ್ಟಾರೆ, ಈ ಚಿತ್ರ ಹಾಸ್ಯಮಯವೇ ಆಗಿದೆ. ಅಂತಹ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ ಏನ್ ಕಮಾಲ್ ಮಾಡುತ್ತದೆ ಅನ್ನೋದು ಸದ್ಯದ ಕುತೂಹಲವೆ ಆಗಿದೆ.












