Akhil Akkineni: ಅಖಿಲ್ ಯಶಸ್ಸು ಕಂಡು ಕಣ್ಣೀರಿಟ್ಟ ನಾಗಾರ್ಜುನ್; ತಂದೆ-ಮಗನ ಭಾವುಕ ಕ್ಷಣ ವೈರಲ್ | | ACTPnews

ಅಖಿಲ್ ಅಕ್ಕಿನೇನಿ


Last Updated:

ನಟ ನಾಗಾರ್ಜುನ್ (Actor Nagarjuna) ತಮ್ಮ ಮಗನ ಯಶಸ್ಸನ್ನು ಕಂಡು ಭಾವುಕರಾದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ.

ಅಖಿಲ್ ಅಕ್ಕಿನೇನಿ
ಅಖಿಲ್ ಅಕ್ಕಿನೇನಿ

ಹಲವು ವರ್ಷಗಳಿಂದ ಯಶಸ್ಸಿಗಾಗಿ ಕಾಯುತ್ತಿದ್ದ ಅಖಿಲ್ ಅಕ್ಕಿನೇನಿ (Akhil Akkineni) ಅಭಿನಯದ ‘ಲೆನಿನ್’ (Lenin) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಈ ಗೆಲುವು ಇಡೀ ಕುಟುಂಬಕ್ಕೆ ಹೊಸ ಉತ್ಸಾಹವನ್ನು ತಂದಿದೆ. ವಿಶೇಷವಾಗಿ ನಟ ನಾಗಾರ್ಜುನ್ (Actor Nagarjuna) ತಮ್ಮ ಮಗನ ಯಶಸ್ಸನ್ನು ಕಂಡು ಭಾವುಕರಾದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ. ಸಂಭ್ರಮಾಚರಣೆಯ ವೇಳೆ ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿದ ನಾಗಾರ್ಜುನ್ ಅವರ ವಿಡಿಯೋ ಅಭಿಮಾನಿಗಳ ಮನಸ್ಸನ್ನು ಮುಟ್ಟಿದೆ.

ಸಿನಿಮಾ ಕುಟುಂಬದಲ್ಲಿ ಜನಿಸಿದರೆ ಯಶಸ್ಸು ಸುಲಭವಾಗಿ ಸಿಗುತ್ತದೆ ಎಂಬ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ಕಲಾವಿದನೂ ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದಲೇ ಸ್ಥಾನ ಗಳಿಸಬೇಕಾಗುತ್ತದೆ. ಟಾಲಿವುಡ್‌ನ ಅಕ್ಕಿನೇನಿ ಕುಟುಂಬವೂ ಇದಕ್ಕೆ ಹೊರತಾಗಿಲ್ಲ.

ಅಕ್ಕಿನೇನಿ ನಾಗಾರ್ಜುನ್ ಅವರ ಪುತ್ರರಾದ ನಾಗ ಚೈತನ್ಯ ಮತ್ತು ಅಖಿಲ್ ಅಕ್ಕಿನೇನಿ ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಹಲವು ವರ್ಷಗಳ ಕಾಲ ಶ್ರಮಿಸಿದ್ದಾರೆ. ದೊಡ್ಡ ನಿರ್ಮಾಣ ಸಂಸ್ಥೆ, ಕುಟುಂಬದ ಬೆಂಬಲ ಹಾಗೂ ಅಪಾರ ಅಭಿಮಾನಿ ಬಳಗ ಇದ್ದರೂ, ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲು ಸಾಕಷ್ಟು ಸಮಯ ಹಿಡಿದಿದೆ.

ಹಿಂದಿನ ಕೆಲವು ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ‘ಲೆನಿನ್’ ಚಿತ್ರದ ಗೆಲುವು ಅಖಿಲ್ ಅವರ ಸಿನಿ ಪಯಣಕ್ಕೆ ಮಹತ್ವದ ತಿರುವು ನೀಡಿದೆ ಎಂದು ಸಿನಿ ವಲಯದಲ್ಲಿ ಚರ್ಚೆಯಾಗುತ್ತಿದೆ.

ಭಾವುಕರಾದ ನಾಗಾರ್ಜುನ್

ಚಿತ್ರದ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಕ್ಕಿನೇನಿ ಕುಟುಂಬದ ಸದಸ್ಯರು ಹಾಗೂ ಚಿತ್ರತಂಡ ಭಾಗವಹಿಸಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ವೇಳೆ ನಾಗಾರ್ಜುನ್ ತಮ್ಮ ಮಗ ಅಖಿಲ್ ಅವರನ್ನು ಬಿಗಿಯಾಗಿ ತಬ್ಬಿಕೊಂಡು ಭಾವುಕರಾದರು.

ತಂದೆಯಾಗಿ ಮಗನ ಪರಿಶ್ರಮಕ್ಕೆ ಸಿಕ್ಕ ಫಲವನ್ನು ಕಂಡ ಸಂತೋಷದಲ್ಲಿ ಅವರ ಕಣ್ಣಲ್ಲಿ ಆನಂದಬಾಷ್ಪ ಕಾಣಿಸಿಕೊಂಡಿತು. ಈ ಭಾವನಾತ್ಮಕ ಕ್ಷಣವನ್ನು ಅಲ್ಲಿದ್ದವರು ವಿಡಿಯೋದಲ್ಲಿ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports