Last Updated:
ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ.
ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದಲೇ ವಿಶೇಷ ಸ್ಥಾನ ಪಡೆದಿರುವ ತಮಿಳು ಚಿತ್ರರಂಗದ ಖ್ಯಾತ (Ajith Kumar) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ರೇಸಿಂಗ್ ವೃತ್ತಿಜೀವನದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ, ಅವರ ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ . ಈ ನಿರೀಕ್ಷೆಗಳ ನಡುವೆಯೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಟ ಅಜಿತ್ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ರೇಸಿಂಗ್ ಡ್ರೆಸ್ ಧರಿಸಿರುವ ಅಜಿತ್ ಹೆಲ್ಮೆಟ್ ಹಿಡಿದುಕೊಂಡು ಮಾತನಾಡಿದ್ದಾರೆ.
ವಿಡಿಯೋದಲ್ಲಿ ಅಜಿತ್ ಅತ್ಯಂತ ಆತ್ಮೀಯವಾಗಿ ಮಾತನಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಹಾಗೆಯೇ ಅಜಿತ್ ಅವರು ಆ ಇಬ್ಬರು ಮಕ್ಕಳ ದಿನಚರಿ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ನಾನು ನಿಮ್ಮನ್ನು ಖುದ್ದಾಗಿ ಬಂದು ಭೇಟಿ ಮಾಡುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.
ಆದಾಗ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಬರುವ ಪ್ರತಿಯೊಂದು ಸುದ್ದಿಯೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಇತ್ತೀಚಿನ ಈ ವಿಡಿಯೋ ಕೂಡ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.
ಹೊಸ ಸಿನಿಮಾ ಘೋಷಣೆಗಾಗಿ ಅಭಿಮಾನಿಗಳು ಇನ್ನೂ ಕಾಯುತ್ತಿದ್ದರೂ, ಈ ರೀತಿಯ ಸಣ್ಣ ಕ್ಷಣಗಳು ಅಜಿತ್ ಕುಮಾರ್ ಅವರ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅವರ ಮುಂದಿನ ಸಿನಿಮಾ ಯಾವಾಗ ಘೋಷಣೆಯಾಗುತ್ತದೆ ಎಂಬ ಕುತೂಹಲದ ಜೊತೆಗೆ, ರೇಸಿಂಗ್ ಮತ್ತು ಚಿತ್ರರಂಗ ಎರಡರಲ್ಲೂ ಅವರು ಮುಂದಿನ ದಿನಗಳಲ್ಲಿ ಯಾವ ರೀತಿಯ ಸಾಧನೆ ಮಾಡುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.
Bangalore [Bangalore],Bangalore,Karnataka













