Last Updated:
ಯೋಗರಾಜ್ ಭಟ್ರ ರೆಟ್ರೋ ಸ್ಟೈಲ್ ಸೂಪರ್ ಆಗಿದೆ. ರಮ್ಯಾ ಮತ್ತು ರಕ್ಷಿತಾ ಅವರೂ ಈ ವೈಬ್ ಅಲ್ಲಿದ್ದಾರೆ. ಆ್ಯಂಕರ್ ಅನುಶ್ರೀ ಅಪ್ಪು ಜೊತೆಗಿನ 80 ರ ಫೋಟೋ ಹಂಚಿಕೊಂಡಿದ್ದಾರೆ. ಈ ಹೊಸ ಟ್ರೆಂಡ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಈಗೊಂದು ಹೊಸ ಟ್ರೆಂಡ್ (New Trend) ಶುರು ಆಗಿದೆ. ಎಲ್ರೂ ಈ ಟ್ರೆಂಡ್‌ಗೆ ಕಳೆದು ಹೋಗಿದ್ದಾರೆ. ತಮ್ಮ ಫೋಟೋಗಳನ್ನ ಹಾಗೆ 80 ರ ಕಾಲಘಟಕ್ಕೆ ಬದಲಾಯಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್ AI ಟ್ರೆಂಡ್ (Instagram AI Trend) ಮೂಲಕವೇ ಇದು ಎಲ್ಲರಿಗೂ ಸಾಧ್ಯ ಆಗುತ್ತಿದೆ. ಯೋಗರಾಜ್ ಭಟ್ (Yogaraj Bhat) ಅವರ ಫೋಟೋಗಳನ್ನು ಅದ್ಯಾರೋ 80 ಕಾಲ ಘಟ್ಟಕ್ಕೆ ಬದಲಿಸಿದ್ದಾರೆ. ಅದನ್ನ ಭಟ್ರು ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲೂ ಅಪ್‌ಲೋಡ್ ಮಾಡಿದ್ದಾರೆ. ಹೀಗೂ ಬರೆದುಕೊಂಡಿದ್ದಾರೆ.”ಯಾರೊ ಮಾಡಿ ಕಳಸಿದ್ದು ಮಜಾ ಇದೆ” ಅಂತಲೆ ಬರೆದಿದ್ದಾರೆ. ರಮ್ಯಾ, ರಕ್ಷಿತಾ ಕೂಡ ತಮ್ಮ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














