Last Updated:
Actress: ಪ್ರಭಾಸ್ ಸಹನಟಿಯಾಗಿರುವ ಬಾಲಿವುಡ್ ಬಳುಕುವ ಬಳ್ಳಿ ಈಗ ಲಕ್ಷುರಿ ವಾಚ್ ಬ್ರ್ಯಾಂಡ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಕೆನಡಾದಲ್ಲಿ ನಡೆದ FIFA ವಿಶ್ವಕಪ್ (Worldcup) 2026 ರ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅದ್ಭುತ ಫರ್ಫಾಮೆನ್ಸ್ ಮೂಲಕ ಗಮನ ಸೆಳೆದ ಬಾಲಿವುಡ್ ಚೆಲುವೆ, ಬಾಹುಬಲಿಯಲ್ಲಿ ಪ್ರಭಾಸ್ ಜೊತೆ ಸೊಂಟ ಬಳುಕಿಸಿದ ಬಳುಕೋ ಬಳ್ಳಿ ನೋರಾ ಫತೇಹಿ (Nora Fatehi), ಮತ್ತೊಂದು ಪ್ರಮುಖ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.
ನಟಿ, ಗಾಯಕಿಯಾಗಿರುವ ನೋರಾ ಫತೇಹಿ FIFA ನಲ್ಲಿ ತಮ್ಮ ಭರ್ಜರಿ ಡ್ಯಾನ್ಸ್ ಶೋ ನಂತರ Google ನಲ್ಲಿ ಮೋಸ್ಟ್ ಸರ್ಚ್ಡ್ ಬಾಲಿವುಡ್ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ ಎಂದು ವರದಿಯಾಗಿದೆ. ಇದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಭಾರತದ ಸೆಲೆಬ್ರಿಟಿಯಾಗಿ ಅವರ ಸ್ಥಾನಮಾನವನ್ನು ಮತ್ತಷ್ಟು ಭದ್ರಪಡಿಸಿದೆ. ಅವರ ಫೇಮ್ ಒಮ್ಮೆಲೇ ಮೇಲೇರಿದೆ.
ಇದರ ಬೆನ್ನಲ್ಲೇ ಐಷಾರಾಮಿ ವಾಚ್ ತಯಾರಿಸೋ ಸಂಸ್ಥೆಯಾದ ಜಾಕೋಬ್ & ಕಂಪನಿ ನೋರಾ ಅವರನ್ನು ತನ್ನ ಹೊಸ ಬ್ರಾಂಡ್ ರಾಯಭಾರಿಯಾಗಿ ಘೋಷಿಸಿದೆ. ಈ ಕೊಲಾಬರೇಷನ್ ಪ್ರಯುಕ್ತ ಪ್ರಸಿದ್ಧ ವಾಚ್ ಬ್ರ್ಯಾಂಡ್ FIFA ವರ್ಲ್ಡ್ ಕಪ್ನಿಂದ ಸ್ಫೂರ್ತಿ ಪಡೆದ ವಿಶೇಷವಾದ ವಾಚ್ ಅನ್ನು ನಟಿಗೆ ನೀಡಿತು.
ಈ ವಿಶಿಷ್ಟವಾದ ವಾಚ್ ಅನ್ನು ಮೊರೊಕನ್ ಧ್ವಜದ ಕೆಂಪು ಮತ್ತು ಹಸಿರು ವರ್ಣಗಳಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮಾರಾಟಕ್ಕೆ ಲಭ್ಯವಿಲ್ಲ, ಇದು ಅಪರೂಪದ ಕಲೆಕ್ಷನ್ ವಾಚ್ ಆಗಿದೆ.
ಕಂಪೆನಿಯ ಈ ನಡೆಯು ನೋರಾ ಫತೇಹಿ ಅವರನ್ನು ಐಷಾರಾಮಿ ವಾಚ್ ಬ್ರಾಂಡ್‌ನೊಂದಿಗೆ ಸಂಪರ್ಕ ಹೊಂದಿದ ಜಾಗತಿಕ ವ್ಯಕ್ತಿಗಳ ಲೀಗ್‌ನಲ್ಲಿ ಸೇರುವಂತೆ ಮಾಡಿದೆ. ಜಾಕೋಬ್ & ಕಂಪನಿಯ ಪವರ್ಫುಲ್ ಲಿಸ್ಟ್ನಲ್ಲಿ ಸಲ್ಮಾನ್ ಖಾನ್, ನೀತಾ ಅಂಬಾನಿ, ರಿಹಾನ್ನಾ, ಜೇ-ಝಡ್, ಡ್ರೇಕ್, ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಹೆಸರುಗಳು ಸೇರಿವೆ.
ಗೂಗಲ್ ಟ್ರೆಂಡ್ಸ್ ಪ್ರಕಾರ, ಫಿಫಾದಲ್ಲಿ ನೋರಾ ಅವರ ಪ್ರದರ್ಶನದ ನಂತರದ ಸರ್ಚ್ನಲ್ಲಿ ಅವರ ಕುರಿತಾದ ಹುಡುಕಾಟ ಹೆಚ್ಚಾಯಿತು. ಅವರು ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್‌ನ ಹಲವಾರು ದೊಡ್ಡ ತಾರೆಗಳನ್ನು ಹಿಂದಿಕ್ಕಿದ್ದಾರೆ.
ಇತ್ತೀಚಿನ ಗೂಗಲ್ ಟ್ರೆಂಡ್ ನೋರಾ ಫತೇಹಿ ಬಗ್ಗೆ ಹೆಚ್ಚುತ್ತಿರುವ ಅಂತರರಾಷ್ಟ್ರೀಯ ಕುತೂಹಲ ಮತ್ತು ಪ್ರಭಾವವನ್ನು ಎತ್ತಿ ತೋರಿಸುತ್ತದೆ.
ಫುಟ್‌ಬಾಲ್‌ನ ಅತಿದೊಡ್ಡ ವೇದಿಕೆಯೊಂದಿಗೆ ನೋರಾ ಅವರ ದೀರ್ಘಕಾಲದ ಸಂಬಂಧವನ್ನು ಪರಿಗಣಿಸಿದರೆ ಈ ಕ್ಷಣವು ಹೆಚ್ಚಿನ ಮಹತ್ವವನ್ನು ಹೊಂದಿದೆ. ಅವರು ಮೊದಲು FIFA ವಿಶ್ವಕಪ್ 2022 ರ ಸಮಯದಲ್ಲಿ ಇತಿಹಾಸ ನಿರ್ಮಿಸಿದರು.
Bangalore,Karnataka
Actress: ಪ್ರಭಾಸ್ ಜೊತೆ ಸ್ಟೆಪ್ ಹಾಕಿದ ಬಾಲಿವುಡ್ ಬ್ಯೂಟಿಗೆ ಜಾಕ್ಪಾಟ್! ಪ್ರಸಿದ್ಧ ವಾಚ್ ಬ್ರ್ಯಾಂಡ್ಗೆ ಇವರೇ ಬ್ರಾಂಡ್ ಅಂಬಾಸಿಡರ್













