Actress: ‘ನೀಟ್ ಪ್ರತಿಭಟನೆಗೆ ಬಂದ್ರೆ ಹಣ ಕೊಡ್ತೀವಿ!’ ಆಫರ್‌ ಬಗ್ಗೆ ಖ್ಯಾತ ನಟಿ ಸ್ಫೋಟಕ ಹೇಳಿಕೆ | | ACTPnews

ನಟಿ ಆಕಾಂಕ್ಷಾ ಪುರಿ


Last Updated:

ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ಮತ್ತು ಅವುಗಳ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಬಾಲಿವುಡ್ ನಟಿ ಆಕಾಂಕ್ಷಾ ಪುರಿ (Actress Akanksha Puri) ಮಾಡಿರುವ ಹೊಸ ಆರೋಪ ಸಂಚಲನಕ್ಕೆ ಕಾರಣವಾಗಿದೆ.

ನಟಿ ಆಕಾಂಕ್ಷಾ ಪುರಿ
ನಟಿ ಆಕಾಂಕ್ಷಾ ಪುರಿ

ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ಮತ್ತು ಅವುಗಳ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಬಾಲಿವುಡ್ ನಟಿ ಆಕಾಂಕ್ಷಾ ಪುರಿ (Actress Akanksha Puri) ಮಾಡಿರುವ ಹೊಸ ಆರೋಪ ಸಂಚಲನಕ್ಕೆ ಕಾರಣವಾಗಿದೆ. ಜಂತರ್ ಮಂತರ್‌ನಲ್ಲಿ(Jantar Mantar) ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವ ಹೆಸರಿನಲ್ಲಿ ನಟ ನಟಿಯರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳಿಗೆ (Content Creators) ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ನಟಿ ಬಹಿರಂಗವಾಗಿ ಆರೋಪಿಸಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಕಾಂಕ್ಷಾ ಪುರಿ, ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳಲು ತಮ್ಮನ್ನು ಸಂಪರ್ಕಿಸಲಾಗಿತ್ತು ಎಂದು ಹೇಳಿದ್ದಾರೆ. ಇದಕ್ಕಾಗಿ ವಿಮಾನ ಪ್ರಯಾಣದ ವ್ಯವಸ್ಥೆಯೊಂದಿಗೆ ಹಣದ ಆಫರ್ ಕೂಡ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ, ಈ ಪ್ರಸ್ತಾಪವನ್ನು ತಾವು ನೇರವಾಗಿ ತಿರಸ್ಕರಿಸಿದ್ದಾಗಿ ಪುರಿ ಹೇಳಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ಮನಸಾರೆ ಬೆಂಬಲಿಸಬೇಕು, ಅದನ್ನು ಯಾವುದೇ ರೀತಿಯ ಮಾರ್ಕೆಟಿಂಗ್ ಅಭಿಯಾನವನ್ನಾಗಿ ಪರಿವರ್ತಿಸಬಾರದು ಎಂಬುದು ತಮ್ಮ ನಿಲುವು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಪ್ರತಿಭಟನೆಗಳ ಹಿಂದೆ ನಡೆಯುವ ಪ್ರಚಾರ ತಂತ್ರಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿದ್ಯಾರ್ಥಿಗಳ ಮಾತನ್ನು ಆಲಿಸುವುದು ಮುಖ್ಯ. ಅವರು ತಮ್ಮ ಭವಿಷ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಅಳುವುದು, ಗಾಯಗೊಳ್ಳುವುದು ಹಾಗೂ ಲಾಠಿ ಚಾರ್ಜ್ ಎದುರಿಸುವ ದೃಶ್ಯಗಳನ್ನು ಕಂಡು ತಮಗೆ ತುಂಬಾ ನೋವಾಗಿದೆ ಎಂದು ನಟಿ ತಿಳಿಸಿದ್ದಾರೆ.

ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. ಅವರಿಗೆ ಧ್ವನಿ ಎತ್ತುವ ಹಕ್ಕಿದೆ. ಅವರ ಹೋರಾಟವನ್ನು ಗೌರವಿಸಬೇಕು ಎಂದು ನಟಿ ಒತ್ತಾಯಿಸಿದ್ದಾರೆ.

ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ಕೆಲವರು ಬಾಲಿವುಡ್ ಕಲಾವಿದರನ್ನು ಟೀಕಿಸುತ್ತಿರುವ ವಿಚಾರಕ್ಕೂ ಆಕಾಂಕ್ಷಾ ಪುರಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಒಂದು ಉದ್ದೇಶವನ್ನು ಬೆಂಬಲಿಸುತ್ತಾರೆ. ಅದಕ್ಕಾಗಿ ಅವರನ್ನು ಟೀಕಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಆಕಾಂಕ್ಷಾ ಪುರಿ ಮಾಡಿರುವ ಆರೋಪವು ಜಂತರ್ ಮಂತರ್ ಪ್ರತಿಭಟನೆಯ ಸುತ್ತ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನೆಗಳಿಗೆ ಬೆಂಬಲ ನೀಡುವ ಹೆಸರಿನಲ್ಲಿ ಹಣದ ಆಮಿಷ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports