Last Updated:
ಮಲಯಾಳಂ ಬಿಗ್ ಬಾಸ್ ಸೀಸನ್ 7ರ ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಲಯಾಳಂ ಬಿಗ್ ಬಾಸ್ ಸೀಸನ್ 7ರ (Bigg Boss Malayalam Season 7) ವಿಜೇತೆ ಅನುಮೋಲ್ (Anumol) , ತಮಿಳು ನಟ ಭುವನೇಶ್ ರಾಜೇಂದ್ರನ್ (Bhuvanesh Rajendran) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 18ರಂದು ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದಲ್ಲಿ ಈ ಜೋಡಿಯ ವಿವಾಹ ನೆರವೇರಿದ್ದು, ಆಪ್ತ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಮದುವೆಗೆ ಸಾಕ್ಷಿಯಾಗಿದ್ದಾರೆ. ಸರಳವಾದರೂ ಸಾಂಪ್ರದಾಯಿಕವಾಗಿ ನಡೆದ ಈ ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಗಮನ ಸೆಳೆಯುತ್ತಿವೆ.














