Last Updated:
Ameesha Patel: ಖ್ಯಾತ ನಟಿಯ ಅಮ್ಮನ ವಜ್ರದ ಬಳೆ ಕಳ್ಳತನ ಆದ ನಂತರ 8 ತಿಂಗಳ ಬಳಿಕ ಈಗ ಕಳ್ಳಿ ಸಿಕ್ಕಿಬಿದ್ದಿದ್ದಾಳೆ. ಆದರೆ ಬಳೆ ಏನಾಯಿತು ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಜನವರಿಯಲ್ಲಿ, ಅಮೀಷಾ ಪಟೇಲ್ (Ameesha Patel) ಅವರ ತಾಯಿ ಆಶಾ ಪಟೇಲ್ ಅವರ ಮನೆಯಿಂದ 5 ಲಕ್ಷ ರೂ. ಮೌಲ್ಯದ ಬಳೆಗಳು (Bangles) ಕಳುವಾಗಿದ್ದವು. ತಿಂಗಳುಗಳ ನಂತರ, ವಜ್ರಖಚಿತ ಆಭರಣವನ್ನು ಕದ್ದಿದ್ದಕ್ಕಾಗಿ ಪೊಲೀಸರು ಈಗ ಅವರ 40 ವರ್ಷದ ಮನೆಕೆಲಸದವಳನ್ನು ಬಂಧಿಸಿದ್ದಾರೆ.














