Actress: ‘ಆತ ಸಿಗರೇಟ್‌ನಿಂದ ನನ್ನ ತೊಡೆ ಸುಟ್ಟಿದ್ದ’! ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಚಿತ್ರರಂಗ ಶಾಕ್! | | ACTPnews

ನಟಿ ನೀತಿ ಟೇಲರ್


Last Updated:

ಇತ್ತೀಚೆಗೆ ಪ್ರಸಾರವಾಗುತ್ತಿರುವ ಹಿಂದಿ ರಿಯಾಲಿಟಿ ಶೋ ಅಲಾಯನ್ಸ್‌ನಲ್ಲಿ ಭಾಗವಹಿಸಿದ್ದ ನೀತಿ ಟೇಲರ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ .

ನಟಿ ನೀತಿ ಟೇಲರ್
ನಟಿ ನೀತಿ ಟೇಲರ್

ಪ್ರೀತಿ ಕೆಲವರ ಬದುಕನ್ನು ಸುಂದರಗೊಳಿಸಿದರೆ, ಮತ್ತೊಂದೆಡೆ ಕೆಲವರಿಗೆ ಮರೆಯಲಾಗದ ನೋವನ್ನೂ ನೀಡುತ್ತದೆ. ಹೀಗಿರುವಾಗ ಜನಪ್ರಿಯ ನಟಿ ನೀತಿ ಟೇಲರ್ (Actress Neeti Taylor) ತಮ್ಮ ಜೀವನದ ಅತ್ಯಂತ ಕಹಿ ಘಟನೆಯೊಂದನ್ನು ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಹಿಂದಿ ರಿಯಾಲಿಟಿ ಶೋನಲ್ಲಿ ಮಾತನಾಡಿದ ನಟಿ, ತಮ್ಮ ಮಾಜಿ ಪ್ರಿಯಕರನಿಂದ ತಾವು ಅನುಭವಿಸಿದ್ದೆಂದು ಆರೋಪಿಸಿರುವ ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಸಾರವಾಗುತ್ತಿರುವ ಹಿಂದಿ ರಿಯಾಲಿಟಿ ಶೋ ಅಲಾಯನ್ಸ್‌ನಲ್ಲಿ ಭಾಗವಹಿಸಿದ್ದ ನೀತಿ ಟೇಲರ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ . ಕಾರ್ಯಕ್ರಮದಲ್ಲಿ ಮಿನಿ ಮಾಥುರ್, ರೂಹಿ ದೇಸಾಯಿ ಮತ್ತು ದೆಲ್ಬರ್ ಆರ್ಯ ಅವರೊಂದಿಗೆ ಸಂಭಾಷಣೆ ನಡೆಸುವ ವೇಳೆ, ತಮ್ಮ ಹಿಂದಿನ ಪ್ರೇಮ ಸಂಬಂಧದ ಬಗ್ಗೆ ನೋವಿನ ನೆನಪುಗಳನ್ನು ಹಂಚಿಕೊಂಡರು.

ಮಾಜಿ ಪ್ರಿಯಕರನ ವಿರುದ್ಧ ಗಂಭೀರ ಆರೋಪ

ನೀತಿ ಟೇಲರ್ ತಮ್ಮ ಮಾಜಿ ಪ್ರಿಯಕರನನ್ನು ‘ಸೈಕೋ’ ಎಂದು ಉಲ್ಲೇಖಿಸಿ, ಸಂಬಂಧದ ಅವಧಿಯಲ್ಲಿ ಆತ ತಮ್ಮ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ದೈಹಿಕ ಹಲ್ಲೆಯ ಜೊತೆಗೆ ಮಾನಸಿಕವಾಗಿ ಕೂಡ ಸಾಕಷ್ಟು ಕಿರುಕುಳ ಅನುಭವಿಸಬೇಕಾಯಿತು. ಪ್ರೀತಿ ಎಂಬ ಹೆಸರಿನಲ್ಲಿ ತಾವು ಅನುಭವಿಸಿದ ನೋವು ಜೀವನದ ಅತ್ಯಂತ ಕಠಿಣ ಹಂತವಾಗಿತ್ತು ಎಂದು ಅವರು ಹೇಳಿದ್ದಾರೆ.

ಸಿಗರೇಟ್‌ನಿಂದ ಸುಟ್ಟಿದ್ದ ಎಂದು ಆರೋಪ

ಸಂದರ್ಶನದಲ್ಲಿ ನೀತಿ ಟೇಲರ್ ಒಂದು ಆಘಾತಕಾರಿ ಘಟನೆಯನ್ನು ನೆನಪಿಸಿಕೊಂಡರು. ತಮ್ಮ ಮಾಜಿ ಪ್ರಿಯಕರನ ಜನ್ಮದಿನದಂದು ಆತ ತಮ್ಮ ಕೆನ್ನೆಗೆ ಹೊಡೆದಿದ್ದಲ್ಲದೆ, ತೊಡೆಯ ಒಳಭಾಗವನ್ನು ಸಿಗರೇಟ್‌ನಿಂದ ಸುಟ್ಟಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಆ ಘಟನೆಯಿಂದ ಉಂಟಾದ ಗಾಯದ ಗುರುತು ಇಂದಿಗೂ ತಮ್ಮ ದೇಹದ ಮೇಲೆಯೇ ಇದೆ ಎಂದು ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Karan Johar: ಭಾಷಣ ವೇಳೆ ‘ಕುಚ್ ಕುಚ್ ಹೋತಾ ಹೈ’ ಎಂದ ಮೋದಿ! ಕರಣ್ ಜೋಹರ್ ಫುಲ್ ಕುಶ್

ಆ ಘಟನೆ ನಡೆದ ತಕ್ಷಣವೇ ಆ ಸಂಬಂಧದಿಂದ ಹೊರಬರಲು ನಿರ್ಧರಿಸಿದ್ದಾಗಿ ನೀತಿ ತಿಳಿಸಿದ್ದಾರೆ. ಬಳಿಕ ಮತ್ತೆ ಆ ವ್ಯಕ್ತಿಯನ್ನು ಎಂದಿಗೂ ಭೇಟಿಯಾಗಿಲ್ಲ ಎಂದೂ ಹೇಳಿದ್ದಾರೆ. ಜೊತೆಗೆ ತಮ್ಮ ಸುರಕ್ಷತೆ ಮತ್ತು ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಿ ತೆಗೆದುಕೊಂಡ ಆ ನಿರ್ಧಾರವೇ ಜೀವನದಲ್ಲಿ ಮುಂದೆ ಸಾಗಲು ಸಹಾಯ ಮಾಡಿತು ಎಂದು ನಟಿ ಪರೋಕ್ಷವಾಗಿ ತಿಳಿಸಿದ್ದಾರೆ.

ಆ ಕಹಿ ಅನುಭವಗಳನ್ನು ಹಿಂದಿಕ್ಕಿ, ನೀತಿ ಟೇಲರ್ 2020ರಲ್ಲಿ ಭಾರತೀಯ ಸೇನೆಯ ಅಧಿಕಾರಿ ಪರೀಕ್ಷಿತ್ ಬಾವಾ ಅವರನ್ನು ವಿವಾಹವಾದರು.

ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ನಡೆದ ಈ ಮದುವೆ ಸರಳವಾಗಿ ನೆರವೇರಿತ್ತು. ಮದುವೆಯ ಬಳಿಕ ಸುಮಾರು ಎರಡು ವರ್ಷಗಳ ಕಾಲ ಅವರು ಅಭಿನಯದಿಂದ ದೂರ ಉಳಿದು ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಸಮಯ ನೀಡಿದ್ದರು.

ಇತ್ತೀಚಿನ ದಿನಗಳಲ್ಲಿ ನೀತಿ ಟೇಲರ್ ಅವರ ದಾಂಪತ್ಯ ಜೀವನದ ಬಗ್ಗೆ ಕೆಲವು ವದಂತಿಗಳು ಹರಿದಾಡಿದ್ದರೂ, ಅವುಗಳ ಕುರಿತು ಅವರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ, ತಮ್ಮ ಹಿಂದಿನ ಸಂಬಂಧದ ಅನುಭವವನ್ನು ಬಹಿರಂಗವಾಗಿ ಹಂಚಿಕೊಳ್ಳುವ ಮೂಲಕ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed