Last Updated:
ಸತತವಾಗಿ ಮೊಬೈಲ್ ಗೇಮ್ ಆಡುತ್ತಿದ್ದ ಪರಿಣಾಮ ಕುತ್ತಿಗೆಯ ನರಗಳಿಗೆ ಸಮಸ್ಯೆಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಶಕೀಲಾ ಹೇಳಿದ್ದಾರೆ.
ಮೊಬೈಲ್ ಫೋನ್ (Mobile Phone) ಇಂದು ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗವಾಗಿದೆ. ಕೆಲಸ, ಮನರಂಜನೆ, ಸಾಮಾಜಿಕ ಜಾಲತಾಣ ಹಾಗೂ ಗೇಮಿಂಗ್‌ಗಾಗಿ ಗಂಟೆಗಟ್ಟಲೆ ಫೋನ್ ಬಳಸುವ ಅಭ್ಯಾಸವೂ ಹೆಚ್ಚಾಗಿದೆ. ಆದರೆ ಅತಿಯಾದ ಮೊಬೈಲ್ ಬಳಕೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದಕ್ಕೆ ನಟಿ ಶಕೀಲಾ (Actress Shakeela) ಅವರ ಅನುಭವವೇ ಉದಾಹರಣೆಯಾಗಿದೆ. ಸತತವಾಗಿ ಮೊಬೈಲ್ ಗೇಮ್ ಆಡುತ್ತಿದ್ದ ಪರಿಣಾಮ ಕುತ್ತಿಗೆಯ ನರಗಳಿಗೆ ಸಮಸ್ಯೆಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು ಎಂದು ಶಕೀಲಾ ಹೇಳಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಮರಳಿದ ಬಳಿಕ ನಟಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.














