Actress: 2,000 ಕೋಟಿಯ ಡ್ರಗ್ಸ್ ಸ್ಮಗ್ಲಿಂಗ್! ಖ್ಯಾತ ನಟಿ ವಿರುದ್ಧ ಕೇಸ್ | British actress charged with attempting to smuggle drugs into Australia | | ACTPnews

ನಟಿ


Last Updated:

Actress: ಖ್ಯಾತ ನಟಿ ಡ್ರಗ್ಸ್ ಕಳ್ಳ ಸಾಗಣೆ ಕೇಸ್​​ನಲ್ಲಿ ಅಂದರ್ ಆಗಿದ್ದಾರೆ. ಸುಮಾರು 2000 ಕೋಟಿ ಬೆಲೆಬಾಳುವ ಮಾದಕವಸ್ತು ಕಳ್ಳಸಾಗಣೆಗೆ ಪ್ರಯತ್ನಿಸಲಾಗಿದೆ.

ನಟಿ
ನಟಿ

ಪಶ್ಚಿಮ ಆಫ್ರಿಕಾದಿಂದ (Western Africa) ಆಸ್ಟ್ರೇಲಿಯಾಕ್ಕೆ 320 ಕೆಜಿ ಮೆಥಾಂಫೆಟಮೈನ್ ಅನ್ನು ಕಳ್ಳಸಾಗಣೆ (Smuggling) ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಬ್ರಿಟಿಷ್ ನಟಿ ಎಮಾ ಹುಸೇನ್ (34) ವಿರುದ್ಧ ಆರೋಪ ಹೊರಿಸಲಾಗಿದೆ. ಘಾನಾದಿಂದ ಸಾಗಣೆ ಮಾಡುವ ಕಂಟೇನರ್‌ಗಳಲ್ಲಿ ಇದ್ದಿಲಿನ ಬ್ಯಾಗ್​ಗಳಲ್ಲಿ ಈ ಮಾದಕ ವಸ್ತುಗಳನ್ನು ಮರೆಮಾಡಲಾಗಿದೆ ಎಂದು ವರದಿಯಾಗಿದೆ.

ಈಸ್ಟ್‌ಎಂಡರ್ಸ್‌ನ ಸ್ಪಿನ್-ಆಫ್ E20 ನಲ್ಲಿ ನಾಜ್ ಪಾತ್ರ ಮತ್ತು ಜೇಸನ್ ಸ್ಟ್ಯಾಥಮ್ ಅವರ ಆಕ್ಷನ್ ಥ್ರಿಲ್ಲರ್ ಹಮ್ಮಿಂಗ್‌ಬರ್ಡ್ (2013) ನಲ್ಲಿ ನಟಿಸಿದ ಹುಸೇನ್ ಹೆಸರುವಾಸಿಯಾಗಿದ್ದಾರೆ .

ದಕ್ಷಿಣ ಆಸ್ಟ್ರೇಲಿಯಾದ ದಂಪತಿಗಳೊಂದಿಗೆ ಹುಸೇನ್, ಮೆಥಾಂಫೆಟಮೈನ್ ಅನ್ನು ಆಸ್ಟ್ರೇಲಿಯಾಕ್ಕೆ ಆಮದು ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಮಾದಕ ವಸ್ತುಗಳ ಅಂದಾಜು ಮೌಲ್ಯ A$296 ಮಿಲಿಯನ್ (US$208 ಮಿಲಿಯನ್; £157 ಮಿಲಿಯನ್) ಅಂದರೆ ಸುಮಾರು 2000 ಕೋಟಿ ಆಗಿತ್ತು. ಈ ಅಪರಾಧಕ್ಕೆ ಗರಿಷ್ಠ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಹಿಂದಿನ ನ್ಯಾಯಾಲಯದ ತೀರ್ಪಿನಲ್ಲಿ ಹುಸೇನ್ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

ಘಾನಾದಿಂದ ಸಿಡ್ನಿಯ ಪೋರ್ಟ್ ಬಾಟನಿಗೆ ಬಂದ ಎರಡು ಟ್ರಾನ್ಸ್​ಪೋರ್ಟ್ ನಲ್ಲಿ ಅಕ್ರಮ ಕಂಡು ಬಂದು ನಂತರ ಬಾರ್ಡರ್ ಸೆಕ್ಯುರಿಟಿ ಅಧಿಕಾರಿಗಳು ನಿಗಾ ಇಟ್ಟಿದ್ದರು. ನಂತರ ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾದ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು.

ಇದ್ದಿಲಿನ ಚೀಲಗಳು ಎಂದು ಹೇಳಲಾಗಿದ್ದ ವಸ್ತುಗಳನ್ನು ಎಕ್ಸ್-ರೇ ಮಾಡಲಾಗಿದ್ದು, “ಬಿಳಿ ಸ್ಫಟಿಕೀಕರಿಸಿದ ವಸ್ತು” ಪತ್ತೆಯಾಗಿದೆ. ನಂತರದ ಪರೀಕ್ಷೆಯಲ್ಲಿ ಅದು ಮೆಥಾಂಫೆಟಮೈನ್ ಎಂದು ದೃಢಪಟ್ಟಿತು. ಸಿಡ್ನಿಯ ಪಶ್ಚಿಮ ಉಪನಗರಗಳಾದ ಗಿರಾವೀನ್‌ನಲ್ಲಿರುವ ಶೇಖರಣಾ ಸ್ಥಳಕ್ಕೆ ಕಳುಹಿಸುವ ಮೊದಲು ಎಲ್ಲವನ್ನೂ ಸೀಜ್ ಮಾಡಿ ತೆಗೆದುಹಾಕಲಾಯಿತು.

ಹುಸೇನ್ ಅವರು ಸ್ಟೋರ್ ಮಾಡೋ ಸ್ಥಳಕ್ಕೆ ಭೇಟಿ ನೀಡಿ ಕಂಟೇನರ್‌ನಿಂದ ಹಲವಾರು ಚೀಲಗಳನ್ನು ಇಳಿಸುವುದನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಚೀಲಗಳನ್ನು ಕಾರಿನಲ್ಲಿ ತುಂಬಿಸಿ ಬ್ಲ್ಯಾಕ್‌ಟೌನ್‌ನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು. ಅಲ್ಲಿ ಹುಸೇನ್‌ರನ್ನು ಪೊಲೀಸರು ಬಂಧಿಸಿದರು. ಬಂಧನದ ಸಮಯದಲ್ಲಿ ಅಧಿಕಾರಿಗಳು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ನೋಟ್‌ಬುಕ್ ಅನ್ನು ಸಹ ವಶಪಡಿಸಿಕೊಂಡರು.

ತನಿಖೆಯ ಭಾಗವಾಗಿ, ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ 30 ವರ್ಷದ ಮಹಿಳೆ ಮತ್ತು 32 ವರ್ಷದ ವ್ಯಕ್ತಿಯನ್ನು ಸಹ ಬಂಧಿಸಿ ಆರೋಪ ಹೊರಿಸಲಾಗಿದೆ. ಅವರು ಮಾದಕವಸ್ತುಗಳನ್ನು ವಿತರಿಸಲಾಗುತ್ತಿದ್ದ ಸಿಡ್ನಿಯಲ್ಲಿರುವ ಸ್ಟೋರೆಜ್ ರೂಂ ಬಾಡಿಗೆಗೆ ಪಡೆಯಲು ನಕಲಿ ಗುರುತಿನ ಚೀಟಿಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed