Actress: 10ನೇ ಕ್ಲಾಸ್​ ಪಾಸ್​ ಆಗಿಲ್ಲ, ಆದರೆ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್; ಕೋಟಿ ಕೋಟಿ ಆಸ್ತಿ ಒಡತಿ! | | ACTPnews

News18


Last Updated:

ಈ ನಟಿ 10ನೇ ಕ್ಲಾಸ್ ಪಾಸ್ ಕೂಡ ಆಗಿಲ್ಲ, ಆದರೆ ಬಾಲಿವುಡ್ ಸ್ಟಾರ್ ನಟಿಯಾಗಿ ಸಿನಿಮಾವೊಂದಕ್ಕೆ 25 ಕೋಟಿ ರೆಮ್ಯುನರೇಷನ್ ಪಡೆಯುತ್ತಾರೆ. 200 ಕೋಟಿ ಪ್ಲಸ್ ಆಸ್ತಿ, ಮೇಕಪ್ ಬ್ರಾಂಡ್ ಮೂಲಕ ವರ್ಷಕ್ಕೆ 100 ಕೋಟಿ ಬ್ಯುಸಿನೆಸ್ ಮಾಡ್ತಿದ್ದಾರೆ.

News18
News18

ಸಿನಿಮಾ ಇಂಡಸ್ಟ್ರಿಯಲ್ಲಿ (Cinema Industry) ದಶಕಗಳ ಕಾಲ ಮಿಂಚುವುದು ಅಂದರೆ ಸಾಮಾನ್ಯ ಸಂಗತಿ ಅಲ್ಲ. ಏಕೆಂದರೆ ನಿರಂತರವಾಗಿ ಅವಕಾಶಗಳು ಸಿಗೋದು ಬಹಳ ಕಷ್ಟದ ಕೆಲಸ. ಇದರ ಜೊತೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳುವುದು ಕೂಡ ಅಷ್ಟೇ ಕಷ್ಟ. ಹಲವು ಹೀರೋಯಿನ್​​ಗಳು (Star Heroine) ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಕೆಲವು ಚಿಕ್ಕ ವಯಸ್ಸಿನಿಂದಲೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ತಮ್ಮ ಯಶಸ್ಸನ್ನು ಮುಂದುವರೆಸುತ್ತಾರೆ. ಇಂದಿಗೂ ಕೂಡ ಕೆಲವರು, ಕೆಲವು ನಟಿಯರು ಅಷ್ಟಾಗಿ ಓದಿಲ್ಲ ಅಂದರೂ, ಸ್ಟಾರ್ ಸೆಲೆಬ್ರೆಟಿಗಳಾಗಿ ಹಲವರಿಗೆ ಸ್ಪೂರ್ತಿಯಾಗಿ ನಿಲ್ಲುತ್ತಿದ್ದಾರೆ.

ಈಗ ನಾವು ಮಾತನಾಡುತ್ತಿರುವುದು ಕೂಡ ಇಂತಹದ್ದೇ ಸಾಧನೆ ಮಾಡಿದ ನಟಿಯ ಬಗ್ಗೆ. ಈಕೆ ಅಷ್ಟಾಗಿ ಓದಿಲ್ಲ ಎಂದರೂ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಸ್ಟಾರ್ ಹೀರೋಯಿನ್ ಕೂಡ 10ನೇ ತರಗತಿ ಪಾಸ್ ಕೂಡ ಆಗಿಲ್ಲ, ಆದರೆ ಈಕೆಯ ರೆಮ್ಯುನರೇಷನ್ ಮಾತ್ರ 25 ಕೋಟಿ ರೂಪಾಯಿ. ಆಸ್ತಿಯ ವಿಚಾರಕ್ಕೆ ಬಂದರೆ 200 ಕೋಟಿ ಪ್ಲಸ್​ ಮಾಡಿದ್ದಾರೆ. ಅಷ್ಟಕ್ಕೂ ಈ ನಟಿ ಯಾರು ಅಂತ ನೋಡುವಾದರೆ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಸಿನಿಮಾ ಪ್ರೇಮಿಗಳ ಇಷ್ಟದ ನಟಿಯಾಗಿದ್ದು, ಈಕೆಯ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ರೋಮಾಂಚನಗೊಳ್ಳುತ್ತಾರೆ.

ಬಾಲಿವುಡ್ ಸ್ಟಾರ್ ಹೀರೋಯಿನ್ ಎನಿಸಿಕೊಂಡಿರುವ ಈ ನಟಿ ಬೇರೆ ಯಾರು ಅಲ್ಲ, ಕತ್ರಿನಾ ಕೈಫ್. ಬಾಲಿವುಡ್‌ನಲ್ಲಿ ಯಶಸ್ವಿ ನಟಿಯಾಗಿ ಮುನ್ನುಗುತ್ತಿರುವ ಈ ನಟಿ, ಯಂಗ್ ಹೀರೋ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಸೆಟಲ್ ಆಗಿದ್ದಾರೆ. ಈ ದಂಪತಿ ಈಗ ಹ್ಯಾಪಿ ಲೈಫ್ ಲೀಡ್ ಮಾಡುತ್ತಿದ್ದು, ಮದುವೆ ಬಳಿಕ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದಾರೆ.

ಹಿಂದಿ ಮಾತ್ರವಲ್ಲದೇ, ಟಾಲಿವುಡ್‌ನಲ್ಲಿಯೂ ಎರಡು ಸಿನಿಮಾಗಳನ್ನು ಮಾಡಿರುವ ಕತ್ರಿನಾ, ವೆಂಕಟೇಶ್ ಹಾಗೂ ಬಾಲಕೃಷ್ಣ ಅವರೊಂದಿಗೆ ವೃತ್ತಿ ಜೀವನದಲ್ಲಿ ಆರಂಭದಲ್ಲಿ ನಟಿಸಿದ್ದರು. ಮೊದಲು ವೆಂಕಟೇಶ್ ಅವರ ‘ಮಲ್ಲಿಶ್ವರಿ’ ಸಿನಿಮಾದೊಂದಿಗೆ ಸೂಪರ್ ಹಿಟ್ ಪಡೆದುಕೊಂಡಿದ್ದರು, ಆ ಬಳಿಕ ಬಾಲಕೃಷ್ಣ ಜೊತೆ ‘ಅಲ್ಲರಿ ಪಿಡುಗು’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಎರಡನೇ ಸಿನಿಮಾ ಫ್ಲಾಪ್ ಆಗುತ್ತಿದ್ದಂತೆ ಬಾಲಿವುಡ್​ಗೆ ಜಂಪ್ ಆಗಿದ್ದರು.

ಅಂದಹಾಗೆ, ನಟಿ ಕತ್ರಿನಾ ಕೈಫ್ ಅವರು ಬಾಲ್ಯದಲ್ಲಿ ಶಾಲೆಗೆ ಹೋಗಿಲ್ಲ. ಕತ್ರಿನಾ ಪೋಷಕರು ನಿರಂತರವಾಗಿ ಬೇರೆ ಬೇರೆ ಸ್ಥಳಗಳಿಗೆ ಶಿಫ್ಟ್ ಆಗುತ್ತಿದ್ದ ಕಾರಣ ಅವರಿಗೆ ರೆಗ್ಯುಲರ್ ಸ್ಕೂಲಿಂಗ್ ಸಿಕ್ಕಿಲ್ಲ. ಮನೆಯಲ್ಲಿಯೇ ಶಿಕ್ಷಣ ಪಡೆದಿರುವ ಕತ್ರಿನಾ, ಈ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಕತ್ರಿನಾ ಅವರ ತಂದೆ ಕಾಶ್ಮೀರ ಮುಸ್ಲಿಂ ಆಗಿದ್ದು, ತಾಯಿ ಬ್ರಿಟನ್ ಮೂಲದವರು. ಹಾಂಗ್‌ಕಾಂಗ್‌ನಲ್ಲಿ ಹುಟ್ಟಿದ್ದ ಕತ್ರಿನಾ, ಇಂಗ್ಲೆಂಡ್‌ನಲ್ಲಿ ಬೆಳೆದಿದ್ದರು. 14ನೇ ವಯಸ್ಸಿಗೆ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟಿದ್ದ ನಟಿ, ಆ ಬಳಿಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಸದ್ಯ ಮುಂಬೈನಲ್ಲಿ ನೆಲೆಸಿರುವ ಅವರು ಸುಮಾರು 200 ಕೋಟಿ ಆಸ್ತಿಯ ಒಡತಿ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ಆ್ಯಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: Snake Rescuer: ಬೆಂಗಳೂರಿನ ಖ್ಯಾತ ಉರಗ ರಕ್ಷಕ ‘ಸ್ನೇಕ್ ಅನೀಸ್’ ಇನ್ನಿಲ್ಲ

ಸಿನಿಮಾ, ಬ್ರಾಂಡ್ ಜಾಹೀರಾತು, ಬ್ಯುಸಿನೆಸ್ ಇರುವ ಆಸ್ತಿ ಗಳಿಕೆ ಮೂಲಗಳಾಗಿದ್ದು, ಈಗ ಸಿನಿಮಾಗಳಿಗೆ 10-20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. 2019ರಲ್ಲಿ ಸ್ವತಃ ಮೇಕಪ್ ಬ್ರಾಂಡ್ ಆರಂಭಿಸಿದ್ದ ಕತ್ರಿನಾ ವರ್ಷಕ್ಕೆ 100 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡ್ತಿದ್ದಾರೆ. ಅಲ್ಲದೇ, ದೊಡ್ಡ ದೊಡ್ಡ ಕಂಪನಿಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಮುಂಬೈ ಮಾತ್ರವಲ್ಲದೇ ಇಂಗ್ಲೆಂಡ್‌ನ ಲಂಡನ್‌ನಲ್ಲಿಯೂ ಕತ್ರಿನಾ ಅವರು ಭವ್ಯ ಬಂಗಲೆ ಹೊಂದಿದ್ದಾರೆ. ಜೊತೆಗೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ಫೈನ್ ಕ್ಯಾಶ್​ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed