Actress: ಕಾಲಿವುಡ್​ನಲ್ಲಿ ಮಿಂಚ್ತಿದ್ದಾರೆ ಕೇರಳ ಕುಟ್ಟಿಯರು! ಬ್ಯಾಕ್ To ಬ್ಯಾಕ್ ಹಿಟ್ ಕೊಟ್ಟ ಇಬ್ಬರು ಟಾಪ್ ಹೀರೋಯಿನ್ಸ್ | | ACTPnews

Actress: ಕಾಲಿವುಡ್​ನಲ್ಲಿ ಮಿಂಚ್ತಿದ್ದಾರೆ ಕೇರಳ ಕುಟ್ಟಿಯರು! ಬ್ಯಾಕ್ To ಬ್ಯಾಕ್ ಹಿಟ್ ಕೊಟ್ಟ ಇಬ್ಬರು ಟಾಪ್ ಹೀರೋಯಿನ್ಸ್ |


ಹೌದು, ಇಬ್ಬರು ಹೀರೋಯಿನ್ಸ್ ಕಾಲಿವುಡ್​ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮಮಿತಾ ಬೈಜು ಹಾಗೂ ಅನಿಶ್ಮಾ. ಮಮಿತಾ ಅವರು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಆಗಿ ಡ್ಯೂಡ್, ವಿಶ್ವನಾಥ್ & ಸನ್ಸ್ ಮತ್ತು ಜನ ನಾಯಗನ್ ಮಾಡಿದ್ರೆ ಇತ್ತ ಅನಿಶ್ಮಾ ಅವರು ಸಿರೈ, ಯೂತ್, ಮೊದರಾತ್ರಿ ಸಿನಿಮಾ ಮಾಡಿ ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದ್ದಾರೆ.

ಈಗಾಗಲೇ ಸೌತ್​ನಲ್ಲಿ ನಟಿಯರು ಪರಭಾಷಾ ಸಿನಿಮಾಗಳಲ್ಲಿ ನಟಿಸೋದನ್ನು ಟ್ರೆಂಡ್ ಮಾಡಿದ್ದಾರೆ. ತೆಲುಗಿನ ಹೀರೋಯಿನ್ಸ್ ಅಂತೂ ಬಹುತೇಕ ಹೊರಗಿನವರೇ. ತಮಿಳಿನಲ್ಲಿಯೂ ಈಗ ಹೆಚ್ಚಾಗಿ ಅದೇ ಟ್ರೆಂಡ್ ಫಾಲೋ ಆಗುತ್ತಿದ್ದು, ಕೇರಳ ಕುಟ್ಟಿಯರು ತಮಿಳು ಸಿನಿಮಾದಲ್ಲಿ ಸಖತ್ ಆಗಿ ಮಿಂಚೋದಕ್ಕೆ ಶುರು ಮಾಡಿದ್ದಾರೆ.

ಈ ಹಿಂದೆಯೂ ಬಹಳಷ್ಟು ಮಲಯಾಳಂ ನಟಿಯರು ಕಾಲಿವುಡ್​ನಲ್ಲಿ ಸಿನಿಮಾ ಮಾಡಿದರೂ ಕೂಡಾ ಮಮಿತಾ ಬೈಜು ಹಾಗೂ ಅನಿಶ್ಮಾ ಸ್ವಲ್ಪ ಹೆಚ್ಚೇ ಹೈಲೈಟ್ ಆಗುತ್ತಿದ್ದಾರೆ. ಇನ್ನೊಂದು ಕಾರಣ ಏನಂದ್ರೆ ಇವರಿಬ್ಬರು ತಮಿಳಿನಲ್ಲಿ ಮಾಡುತ್ತಿರುವ ಸಿನಿಮಾ ಬ್ಯಾಕ್ To ಬ್ಯಾಕ್ ಕ್ಲಿಕ್ ಆಗುತ್ತಿದೆ. ಬಾಕ್ಸ್ ಆಫೀಸ್ ಗಳಿಕೆ ಚೆನ್ನಾಗಿದೆ. ಚೆನ್ನಾಗಿ ಕಲೆಕ್ಷನ್ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ನಟಿ ಮಮಿತಾ ಬೈಜು ಅವರು ಡ್ಯೂಡ್, ಕರ, ಜನ ನಾಯಗನ್, ವಿಶ್ವನಾಥ್ & ಸನ್ಸ್ ಸಿನಿಮಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇತ್ತ ಮಾಲಿವುಡ್​ನಲ್ಲಿ ಬೆತ್ಲಹೇಮ್ ಕುಟುಂಬ ಯುನಿಟ್ ಸಿನಿಮಾ ಕೂಡಾ ಹಿಟ್ ಎನಿಸಿಕೊಂಡಿದೆ. ಅಲ್ಲಿಗೆ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದಂತಾಗಿದೆ.

ಡ್ಯೂಡ್ ಕಲೆಕ್ಷನ್

ಡ್ಯೂಡ್ ಸಿನಿಮಾ ಸಿನಿಮಾ 116 ಕೋಟಿ ಗಳಿಸಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ರೂ ಕೂಡಾ ಬಾಕ್ಸ್ ಆಫೀಸ್ ಕಲೆಕ್ಷನ್​ ವಿಚಾರದಲ್ಲಿ ಮಾತ್ರ ನಿರ್ಮಾಪಕರಿಗೆ ಲಾಭವಾಗಿದೆ.

ಜನ ನಾಯಗನ್

ವಿಜಯ್ ಅವರ ಕೊನೆಯ ಸಿನಿಮಾದಲ್ಲಿ ಮಮಿತಾ ಬೈಜು ಅವರು ನಟಿಸಿದ್ದು, ಜನ ನಾಯಗನ್ ಮೂವಿ 327 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತು. ಸಿನಿಮಾ ಭರ್ಜರಿಯಾಗಿ ಗಳಿಕೆ ಕಂಡಿದ್ದು ಇದು ಮಮಿತಾ ಕೆರಿಯರ್​ನ ಬಿಗ್ ಹಿಟ್ ಆಯಿತು.

ವಿಶ್ವನಾಥ್ & ಸನ್ಸ್

ನಟ ಸೂರ್ಯ ಅವರು ಅಭಿನಯಿಸಿದರುವ ವಿಶ್ವನಾಥ್ & ಸನ್ಸ್ ಸಿನಿಮಾ ಕೂಡಾ ರೀಸೆಂಟ್ ತಮಿಳು ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ ಫ್ಯಾಮಿಲಿ ಎಂಟರ್​ಟೈನರ್ ಆಗಿದ್ದು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ 212 ಕೋಟಿ ಗಳಿಸಿದೆ.

ಅನಿಶ್ಮಾ-ಸಿರೈ ಸಿನಿಮಾ

ಅನಿಶ್ಮಾ ಅವರು ನಟಿಸಿದ ಸಿರೈ ಸಿನಿಮಾ 32 ಕೋಟಿ ದಾಟಿ ಅಪಾರ ಮೆಚ್ಚುಗೆ ಗಳಿಸಿತು. ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 32 ಕೋಟಿ ದಾಟಿತ್ತು. ಇದರಲ್ಲಿ ತುಂಬಾ ಸರಳವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಯೂತ್

ಅನಿಷ್ಮಾ ನಟಿಸಿದ ಯೂತ್ ಸಿನಿಮಾ 40 ರಿಂದ 50 ಕೋಟಿ ಗಳಿಸಿತು. ಈ ಸಿನಿಮಾ ಎವರೇಜ್ ಟಾಕ್ ಪಡೆದುಕೊಂಡಿದ್ದರೂ ಯುವಜನರನ್ನು ಸೆಳೆಯಿತು.

ಮೊದರಾತ್ರಿ

ಮೊದರಾತ್ರಿ ಎನ್ನುವ ಫಸ್ಟ್​ನೈಟ್ ಎನ್ನುವ ಅರ್ಥದ ಟೈಟಲ್ ಇದ್ದರೂ ಸಿನಿಮಾ ಮಾತ್ರ ಸಂಪೂರ್ಣ ಡಿಫರೆಂಟ್ ಆಗಿದ್ದು, ಭಾವನೆಗಳನ್ನು ಫೋಕಸ್ ಮಾಡುತ್ತದೆ. ಈ ಸಿನಿಮಾ ಕಲೆಕ್ಷನ್ ಕಡಿಮೆಯಾಗಿದ್ದರೂ ಕೂಡಾ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಂತೂ ಇಬ್ಬರು ಮಾಲಿವುಡ್ ನಟಿಯರು ಈಗ ಕಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed