Last Updated:
Sandalwood Actor: ಈ ಸ್ಟಾರ್ ನಟನ ಬಗ್ಗೆ ಕ್ರೇಜ್ ಯಾವ ಲೆವೆಲ್ಗೆ ಇತ್ತು ಎಂದರೆ ಒಮ್ಮೆ ಅತಿಥಿಯಾಗಿ ಕಾಲೇಜ್ಗೆ ಹೋದಾಗ ಯುವತಿಯರು ಶರ್ಟ್ ಹರಿದು ಬೆನ್ನೆಲ್ಲಾ ಪರಚಿಬಿಟ್ಟಿದ್ದರು.
ಕನ್ನಡ ಚಿತ್ರರಂಗದಲ್ಲಿ (Sandalwood) ಬಹಳಷ್ಟು ಸ್ಟಾರ್ ಹೀರೋಗಳಿದ್ದಾರೆ. ಹ್ಯಾಂಡ್ಸಂ ಹೀರೋಗಳಿಗೆ (Hero) ಇಲ್ಲಿ ಬರವಿಲ್ಲ. ವರ್ಷಗಳು ಉರುಳುತ್ತಿರುವಾಗ ಹೊಸ ಹೊಸ ಹೀರೋಗಳು ಬರುತ್ತಲೇ ಇರುತ್ತಾರೆ. ಆದರೆ ಮೊಬೈಲ್, ಸೋಷಿಯಲ್ ಮೀಡಿಯಾ (Social Media) ಯಾವುದೂ ಇಲ್ಲದ ಸಂದರ್ಭದಲ್ಲಿಯೂ ಈ ಒಬ್ಬ ನಟನ ಕ್ರೇಜ್ ಹೇಗಿತ್ತು ಗೊತ್ತಾ?
ಹೌದು, ಕನ್ನಡದಲ್ಲಿ ಈಗಲೂ ಸ್ಟಾರ್ ನಟನಾಗಿ ಮೆರೆಯುತ್ತಿರುವ ನಟನ ಸಿನಿಮಾಗಳಿಗಾಗಿ ಈಗಲೂ ಪ್ರೇಕ್ಷಕರು ಕಾಯುತ್ತಾರೆ. ಸಾಲು ಸಾಲು ಸಿನಿಮಾ ಮಾಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟನ ಕ್ರೇಜ್ ಒಂದು ಟೈಮ್ನಲ್ಲಿ ಮುಗಿಲೆತ್ತರ ಇತ್ತು.
ಆ ನಟ ಹೋಗಿ ಬಂದಲ್ಲಿ ಎಲ್ಲ ಜನ ಮುತ್ತಿಕೊಳ್ತಾ ಇದ್ದರು. ಕರುನಾಡಿನ ಯುವತಿಯರ ಡ್ರೀಮ್ ಬಾಯ್ ಆಗಿಬಿಟ್ಟಿದ್ದ ಆ ಹೀರೋ ಕಾಲೇಜ್ ಒಂದಕ್ಕೆ ಹೋಗಿದ್ದರು. ಅತಿಥಿಯಾಗಿ ಹೋಗಿ ಬರುವಾಗ ಅವರ ಮೈಮೇಲೆ ಶರ್ಟ್ ಇರಲಿಲ್ಲ. ಯಾರು ಆ ನಟ ಗೊತ್ತಾ?
ಇನ್ಯಾರೂ ಅಲ್ಲ. ಕಾಮಿಡಿ ಟೈಮ್ ಖ್ಯಾತಿಯ, ಮಳೆ ಹುಡುಗ ಗಣೇಶ್. ಗಣೇಶ್ ಕಾಲೇಜ್ ಒಂದಕ್ಕೆ ಅತಿಥಿಯಾಗಿ ಹೋಗಿದ್ದಾಗ ನಡೆದ ಘಟನೆಯನ್ನು ಅವರ ಪತ್ನಿಯೇ ವಿವರಿಸಿದ್ದಾರೆ. ಇದನ್ನು ಕೇಳಿ ಅಬ್ಬಾ ಹೀಗೂ ಆಗಿತ್ತಾ ಎಂದು ಅನಿಸದೇ ಇರದು.
ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ, ನಿರ್ಮಾಪಕಿ, ಉದ್ಯಮಿ ಶಿಲ್ಪಾ ಗಣೇಶ್ ಅವರು ಇತ್ತೀಚೆಗೆ ಚಿಲ್ಲಿಂಗ್ ವಿತ್ ಚಿಲಿಂಬಿ ಖ್ಯಾತಿಯ ದಿ ಪವರ್ಹೌಸಗ ವೈನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಅವರು ಗಣೇಶ್ ಜೊತೆಗಿನ ಲವ್, ಮದುವೆ ಬಗ್ಗೆ ಮಾತನಾಡಿದ್ದಾರೆ.
ಗಂಡನ ಪೀಕ್ ಕೆರಿಯರ್ನ ಕ್ರೇಜ್ ಬಗ್ಗೆ ಮಾತನಾಡಿದ ಶಿಲ್ಪಾ ಅವರು, ಗಣೇಶ್ ಅವರು ಒಂದು ಕಾಲೇಜಿಗೆ ಹೋಗಿದ್ದರು ಗೆಸ್ಟ್ ಆಗಿ. ಬರುವಾಗ ಅವರ ಶರ್ಟ್ ಇಲ್ಲ. ಶರ್ಟ್ ಹರಿದು ಹಾಕಿದ್ದರು. ಬೆನ್ನಲ್ಲಿ ಉಗುರಿನಿಂದ ಪರಚಿದ್ದರು, ಅವರನ್ನು ಹಿಡಿಯೋ ಪ್ರಯತ್ನದಲ್ಲಿ ಅವರಿಗೆ ಗಾಯಗಳಾಗಿದ್ದವು. ಕಚ್ಚಿದ್ದರು. ಶಾಲನ್ನು ಹೊದ್ದುಕೊಂಡು ಬಂದಿದ್ದರು. ಇಂಥದ್ದೆಲ್ಲ ಆದಾಗ ಇದೆಲ್ಲ ಹೆಚ್ಚಿನ ಕ್ರೇಜ್ ಎಂದು ಅನಿಸಿತು ಎಂದು ಹೇಳಿದ್ದಾರೆ.
Bangalore,Karnataka














