Last Updated:
ಡಾ. ನಾರಾಯಣ ಚಾಮಿ ಹೊಸ್ಮನೆ Research.com 2026 ರ‍್ಯಾಂಕಿಂಗ್ ನಲ್ಲಿ ರಸಾಯನ ಶಾಸ್ತ್ರ ವಿಭಾಗದ ಅಮೆರಿಕಾದ ಶ್ರೇಷ್ಠ ವಿಜ್ಞಾನಿ, BNCT ಸಂಶೋಧನೆ, Humboldt Research Award ವಿಜೇತ
ಬೆಂಗಳೂರು: ರಥಬೀದಿಯ ಸಣ್ಣ ಮನೆಯಲ್ಲಿ ಬಡತನದ ನಡುವೆ ಬೆಳೆದ ಹುಡುಗ, ಇಂದು ಅಮೆರಿಕಾದ ಶ್ರೇಷ್ಠ ವಿಜ್ಞಾನಿ! ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದ ರಥಬೀದಿ ಮೂಲದ ಡಾ. ನಾರಾಯಣ ಸದಾಶಿವ ಹೊಸ್ಮನೆಅವರು Academic Platform for Research (Research.com) 2026ರ ರ‍್ಯಾಂಕಿಂಗ್ (Ranking) ಪಟ್ಟಿಯಲ್ಲಿ ರಸಾಯನ ಶಾಸ್ತ್ರ ವಿಭಾಗದಲ್ಲಿ ಅಮೆರಿಕಾದ ಶ್ರೇಷ್ಠ ವಿಜ್ಞಾನಿ ಎಂದು ಘೋಷಿತರಾಗಿದ್ದಾರೆ. ಇದು ಇಡೀ ಕರ್ನಾಟಕಕ್ಕೆ ಹೆಮ್ಮೆಯ (Proud) ಕ್ಷಣ!
ಹೊಸ್ಮನೆ ವೈದಿಕ ಮನೆತನದಲ್ಲಿ ಜನಿಸಿದ ನಾರಾಯಣ ಅವರು ಗೋಕರ್ಣದ ಕೆನರಾ ಪ್ರಸಾರಕ ಮಂಡಳಿಯ ಭದ್ರಕಾಳಿ ಪ್ರೌಢಶಾಲೆಯಲ್ಲಿ SSLC ಮುಗಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ BS ಮತ್ತು MS ಪಡೆದರು. ಬಡತನ ಅವರ ಕನಸಿನ ಮುಂದೆ ತಲೆ ಬಾಗಿತು. 1974ರಲ್ಲಿ ಸ್ಕಾಟ್‌ಲ್ಯಾಂಡ್‌ನ ಪ್ರತಿಷ್ಠಿತ ಎಡಿನ್‌ಬರಾ ವಿಶ್ವವಿದ್ಯಾಲಯದಿಂದ Inorganic Chemistryಯಲ್ಲಿ PhD ಪಡೆದ ಚಾಮಿ, 1970-80ರ ದಶಕದಲ್ಲಿ ಅಮೆರಿಕಾಗೆ ತೆರಳಿ ಇಲಿನಾಯ್ ರಾಜ್ಯದ Northern Illinois University (NIU), DeKalbನಲ್ಲಿ ಕಾಲಿಟ್ಟರು. ಮತ್ತು ಇಂದಿಗೂ 50ಕ್ಕೂ ಹೆಚ್ಚು ವರ್ಷಗಳಿಂದ Distinguished Research Professor ಮತ್ತು Board of Trustees Professor ಆಗಿ ಸೇವೆ ಸಲ್ಲಿಸುತ್ತಿದ್ದಾರೆ!
ಚಾಮಿ ಟ್ರಸ್ಟ್ ಮೂಲಕ ಸ್ವಂತ ಊರಿನ ಉದ್ಧಾರ!
ಜಾಗತಿಕ ಕೀರ್ತಿ ಪಡೆದರೂ ತಮ್ಮ ಮಣ್ಣಿನ ಋಣ ಮರೆಯದ ಈ ಮಹಾ ವ್ಯಕ್ತಿ, ತಾವು ಕಲಿತ ಭದ್ರಕಾಳಿ ಪ್ರೌಢಶಾಲೆಯ ಅಭಿವೃದ್ಧಿಗಾಗಿ “ಶ್ರೀಚಾಮಿ ವಿದ್ಯಾವಾಹಿನಿ ಟ್ರಸ್ಟ್” ರಚಿಸಿ ನಿರಂತರ ನೆರವು ನೀಡುತ್ತಿದ್ದಾರೆ. ಕಷ್ಟದ ದಿನಗಳಲ್ಲಿ ತಮಗೆ ನೆರವಾದ ಮಣ್ಣಿಗೆ ಕೃತಜ್ಞತೆ ತೋರುವ ಈ ಹೃದಯ ವೈಶಾಲ್ಯ ನಿಜಕ್ಕೂ ಅನುಕರಣೀಯ. ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಅನೇಕರು ಅಭಿನಂದನೆ ಸುರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 📧 hosmane@niu.edu ಅಥವಾ NIU ವೆಬ್‌ಸೈಟ್ ಸಂಪರ್ಕಿಸಬಹುದು. ರಥಬೀದಿಯ ಬಡ ಮನೆಯಿಂದ ವಿಶ್ವದ ಸಂಶೋಧನಾ ರ‍್ಯಾಂಕಿಂಗ್ ಪಟ್ಟಿವರೆಗೆ ಡಾ. ನಾರಾಯಣ “ಚಾಮಿ” ಹೊಸ್ಮನೆ ಅವರ ಸಾಧನೆ ಗೋಕರ್ಣದ ಹಿರಿಮೆ, ಕರ್ನಾಟಕದ ಕೀರ್ತಿ!
Uttara Kannada,Karnataka
May 11, 2026 12:20 PM IST













