Last Updated:
ನಂದನ್ ನಾಯ್ಕ್ NRJ ರಾಜ್ಯ ಸೀನಿಯರ್ ಡೈವಿಂಗ್ ಚಾಂಪಿಯನ್‌ಶಿಪ್ 2026ರಲ್ಲಿ ಹೈ ಬೋರ್ಡ್ ಚಿನ್ನ, 3 ಮೀಟರ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ದಕ್ಷಿಣ ಕನ್ನಡದ ಹೆಮ್ಮೆ ಹೆಚ್ಚಿಸಿದ ಈ ಯುವಕ ದೇಶ-ವಿಶ್ವಮಟ್ಟದಲ್ಲೂ ಇದೇ ರೀತಿಯ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾನೆ.
ದಕ್ಷಿಣ ಕನ್ನಡ: ಬೆಂಗಳೂರಿನ (Bengaluru) ಕಿಂಗ್‌ಸ್ಟನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ (KSA) ವತಿಯಿಂದ ಇತ್ತೀಚೆಗೆ ನಡೆದ NRJ ರಾಜ್ಯ ಮಟ್ಟದ ಸೀನಿಯರ್ ಡೈವಿಂಗ್ ಚಾಂಪಿಯನ್‌ಶಿಪ್ 2026ರಲ್ಲಿ ಪುತ್ತೂರಿನ ಯುವ ಡೈವರ್ ನಂದನ್ ನಾಯ್ಕ್ ಅಪ್ರತಿಮ ಸಾಧನೆ (Achievement) ತೋರಿ ಇಡೀ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿಯನ್ನು ಪ್ರತಿನಿಧಿಸಿ ಸ್ಪರ್ಧಿಸಿದ ನಂದನ್ ಹೈ ಬೋರ್ಡ್ ಡೈವಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ 3 ಮೀಟರ್ ಸ್ಪ್ರಿಂಗ್ ಬೋರ್ಡ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕವನ್ನೂ ಸ್ವಂತಮಾಡಿಕೊಂಡಿದ್ದಾರೆ. ಈ ಅತ್ಯುತ್ತಮ ಪ್ರದರ್ಶನದ ಫಲವಾಗಿ ನಂದನ್ ರಾಷ್ಟ್ರ ಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದ್ದಾರೆ.
ಅತ್ಯಂತ ಕಠಿಣ ಮತ್ತು ಸಾಹಸಮಯ ಕ್ರೀಡೆಯಾದ ಡೈವಿಂಗ್ ಅನ್ನು ಸಲೀಸಾಗಿ ಮಾಡುವ ನಂದನ್ ಅವರ ಹಿಂದಿರುವ ಶ್ರಮ ಮತ್ತು ಸಾಧನೆಗೆ ವಾರಣಾಸಿ ಸ್ವಿಮ್ಮಿಂಗ್ ಅಕಾಡೆಮಿಯ ಕೋಚ್‌ಗಳಾದ ಪಾರ್ಥ ವಾರಣಾಸಿ, ವಿಕಾಸ್ ಮತ್ತು ವೆಂಕಟೇಶ್ ಅವರ ಮಾರ್ಗದರ್ಶನ ಬಹಳ ಮಹತ್ತ್ವದ ಪಾತ್ರ ವಹಿಸಿದೆ. ವಿಟ್ಲದ ವಾರಣಾಸಿ ಫಾರ್ಮ್‌ನಲ್ಲಿ ಕೋಚ್ ಪಾರ್ಥ ವಾರಣಾಸಿ ವಿಶೇಷವಾಗಿ ಡೈವಿಂಗ್‌ಗಾಗಿ ನಿರ್ಮಿಸಿರುವ ಈಜುಕೊಳದಲ್ಲಿ ನಿರಂತರ ತರಬೇತಿ ಪಡೆದ ನಂದನ್ ಇಂದು ರಾಷ್ಟ್ರ ಮಟ್ಟದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗಣ್ಯರಿಂದ ಅಭಿನಂದನೆ
Dakshina Kannada,Karnataka













