Last Updated:
ದೇಶವ್ಯಾಪಿ ಪ್ರತಿಭಟನೆಯ ಕಿಚ್ಚೆಬ್ಬಿಸಿದ್ದ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪಕೆ ಅವರ ವೈಯಕ್ತಿಕ ಜೀವನದ ಕುರಿತು ಆಸಕ್ತಿದಾಯಕ ಸಂಗತಿಯೊಂದು ಹೊರಬಿದ್ದಿದೆ.
ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಸದ್ಯ ಈ ಪಕ್ಷ ಕಳೆದ ಕೆಲ ದಿನಗಳಿಂದ ಸಾಕಷ್ಟು ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ವಿಡಂಬನಾತ್ಮಕವಾಗಿ ಹುಟ್ಟಿದ ಸಿಜೆಪಿ, ಧಮೇಂದ್ರ ಪ್ರಧಾನ್ (ಧಮೇಂದ್ರ ಪ್ರಧಾನ್) ಅವರ ರಾಜೀನಾಮೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಸುಮಾರು 35 ದಿನಗಳ ಹೋರಾಟ ಮಾಡಿ ಕೇವಲ ರಾಷ್ಟ್ರ ರಾಜಧಾನಿ ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆಯ ಕಿಚ್ಚೆಬ್ಬಿಸಿದ್ದ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜಿತ್ ದೀಪಕೆ ಅವರ ವೈಯಕ್ತಿಕ ಜೀವನದ ಕುರಿತು ಆಸಕ್ತಿದಾಯಕ ಸಂಗತಿಯೊಂದು ಹೊರಬಿದ್ದಿದೆ. ಯುವ ನಾಯಕರಾಗಿ ಹೊರಹೊಮ್ಮಿರುವ ಅಭಿಜಿತ್ ದೀಪ್ಕೆಗೆ ಈಗ ಮದುವೆ ಪ್ರಸ್ತಾಪಗಳ ಮಹಾಪೂರವೇ ಹರಿದುಬರುತ್ತಿದೆಯಂತೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಅಭಿಜಿತ್ ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಮಾತನಾಡಿದ್ದು, ‘ಸಿಜೆಪಿ ಪ್ರತಿಭಟನೆ ಆರಂಭವಾಗುವುದಕ್ಕೂ ಮುಂಚೆಯೇ ನಮಗೆ ಮದುವೆ ಪ್ರಸ್ತಾಪಗಳು ಬರುತ್ತಿದ್ದವು, ಆದರೆ ಈಗ ಮತ್ತಷ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ. ಅಭಿಜಿತ್ ಬಾಸ್ಟನ್‌ನಲ್ಲಿದ್ದಾಗ ಕುಟುಂಬದವರು ಮದುವೆ ವಿಷಯ ಪ್ರಸ್ತಾಪಿಸಿದ್ದರಾದರೂ, ಆದ್ರೆ, ಆತ ಒಪ್ಪಿರಲಿಲ್ಲ, ಇದೀಗ ಅಭಿಜಿತ್ ತಿಂಗಳುಗಳ ನಂತರ ಮನೆಗೆ ವಾಪಸ್ ಆಗಿದ್ದು, ಮತ್ತೊಮ್ಮೆ ಈ ವಿಷಯ ಪ್ರಸ್ತಾಪಿಸಿ ಆತನೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಬಿಡುವುದಾಗಿ ತಾಯಿ ಮಾಹಿತಿ ನೀಡಿದ್ದಾರೆ.
ಆದರೆ ಈ ಮಾತು ತುಂಬಾ ವೈರಲ್ ಆಯಿತು. ಜೊತೆಗೆ ಯುವಜನರಲ್ಲಿ ತುಂಬಾ ಆಕ್ರೋಶವನ್ನು ಉಂಟುಮಾಡಿತು. ಅಭಿಜೀತ್ ದೀಪ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯದ ರೂಪದಲ್ಲಿ ‘ಎಲ್ಲಾ ಕಾಕ್ರೋಚ್‌ಗಳು ಒಟ್ಟಿಗೆ ಸೇರಿದರೆ ಏನಾಗುತ್ತದೆ?’ ಎಂದು ಪೋಸ್ಟ್ ಮಾಡಿದರು. ಇದು ತುಂಬಾ ವೈರಲ್ ಆಯಿತು. ಮುಂದೆ ಆಗಿದ್ದು ಈಗ ಇತಿಹಾಸ.
ಮೇ 16, 2026ರಂದು ಅಭಿಜೀತ್ ದೀಪ್ಕೆ ಎಂಬ ಯುವಕ ಈ ಹಾಸ್ಯಾತ್ಮಕ ಚಳುವಳಿಯನ್ನು ಸ್ಥಾಪಿಸಿದರು. ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ಪಾಲಿಸಿ ಅಧ್ಯಯನ ಮಾಡುತ್ತಿರುವ 30 ವರ್ಷದ ವಿದ್ಯಾರ್ಥಿ. ಡಿಜಿಟಲ್ ಕಮ್ಯುನಿಕೇಷನ್ ಸ್ಟ್ರಾಟಜಿಸ್ಟ್ ಆಗಿದ್ದಾರೆ. ಅವರು ‘ಕಾಕ್ರೋಚ್’ ಪದವನ್ನು ಸಕಾರಾತ್ಮಕವಾಗಿ ಬಳಸಿ, ಯುವಕರ ಬದುಕುಳಿಯುವ ಶಕ್ತಿಯ ಸಂಕೇತವಾಗಿ ಮಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಚಳುವಳಿ ರಾತ್ರಿ ಬೆಳಗಾಗುವುದರೊಳಗೆ ಜನಪ್ರಿಯವಾಯಿತು.
Jul 28, 2026 10:53 PM IST














