Aashirwad Sooryavanshi: 6 ಸಿಕ್ಸರ್‌, 19 ಬೌಂಡರಿ 168 ರನ್! ಮತ್ತೊಂದು ಶತಕ ಸಿಡಿಸಿ ಅಣ್ಣನನ್ನೇ ಮೀರಿಸೋ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ ಸಹೋದರ | ಕ್ರೀಡಾ ಸುದ್ದಿ | ACTPnews

ಸೂರ್ಯವಂಶಿ ಸಹೋದರರು


Last Updated:

ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರವನ್ನು ಇಡೀ ಕ್ರಿಕೆಟ್ ಜಗತ್ತು ನೋಡಿದೆ. ಅವರ ಕಿರಿಯ ಸಹೋದರ ಆಶೀರ್ವಾದ್ ಕೂಡ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ. 10 ವರ್ಷದ ಆಶೀರ್ವಾದ್ ಕೇವಲ 15 ದಿನಗಳಲ್ಲಿ ತಮ್ಮ ಎರಡನೇ ಶತಕ ಗಳಿಸಿ ಎಲ್ಲರ ಚಿತ್ತ ಕದ್ದಿದ್ದಾರೆ.

ಸೂರ್ಯವಂಶಿ ಸಹೋದರರು
ಸೂರ್ಯವಂಶಿ ಸಹೋದರರು

ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌(Indian Cricket)ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೆಸರು ನಿರಂತರವಾಗಿ ಸುದ್ದಿಯಲ್ಲಿದೆ. ಕೇವಲ 15 ವರ್ಷ ವಯಸ್ಸಿನಲ್ಲೇ ಸ್ಫೋಟಕ ಬ್ಯಾಟಿಂಗ್ (Batting) ಮೂಲಕ ಎಲ್ಲರ ಗಮನ ಸೆಳೆದಿರುವ ವೈಭವ್ ಈಗ ಐರ್ಲೆಂಡ್ (Ireland) ಮತ್ತು ಇಂಗ್ಲೆಂಡ್ (England) ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ವೈಭವ್ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪಾದರ್ಪಣೆ ಮಾಡುವುದಕ್ಕೆ ದಿನಾಂಕ ನಿಗದಿಯಾಗಿದೆ. ಇದರ ನಡುವೆ ಸೂರ್ಯವಂಶಿ ಕುಟುಂಬದ ಮತ್ತೊಬ್ಬ ಯುವ ಬ್ಯಾಟ್ಸ್‌ಮನ್ ಸದ್ದು ಮಾಡುತ್ತಿದ್ದಾರೆ.

ವೈಭವ್ ಸೂರ್ಯವಂಶಿಯವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆಶೀರ್ವಾದ್ ಸೂರ್ಯವಂಶಿ ಅಬ್ಬರಕ್ಕೆ ಕ್ರಿಕೆಟ್ ಫ್ಯಾನ್ಸ್ ಬೆಚ್ಚಿ ಬಿದ್ದಿದ್ದಾರೆ. ಕೇವಲ 15 ದಿನಗಳಲ್ಲಿ ತಮ್ಮ ಎರಡನೇ ಶತಕ ಗಳಿಸಿ ಎಲ್ಲರ ಚಿತ್ತ ಕದ್ದಿದ್ದಾರೆ.

ಈ ಮಾಹಿತಿಯನ್ನು ಅವರ ಹಿರಿಯ ಸಹೋದರ ಉಜ್ವಲ್ ಸೂರ್ಯವಂಶಿ ನೀಡಿದ್ದಾರೆ. ನಂತರ, ವೈಭವ್ ಸೂರ್ಯವಂಶಿ ಕೂಡ ಉಜ್ವಲ್ ಸೂರ್ಯವಂಶಿ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಂಡಿದ್ದು, ತಮ್ಮ ಕಿರಿಯ ಸಹೋದರನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಅಣ್ಣನನ್ನೇ ಮೀರಿಸೋ ಇನ್ನಿಂಗ್ಸ್

ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಆಶೀರ್ವಾದ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 168 ರನ್‌ಗಳ ಮನಮೋಹಕ ಇನ್ನಿಂಗ್ಸ್ ಆಡಿದ್ದಾರೆ. ತಾಜ್‌ಪುರದಲ್ಲಿ ನಡೆದ ಪಂದ್ಯದಲ್ಲಿ ರಿಷಭ್-11 ಪರ ಆಶೀರ್ವಾದ್ ಅದ್ಭುತ ಬ್ಯಾಟಿಂಗ್ ಮಾಡಿದರು. ವೈಶಾಲಿ-11 ವಿರುದ್ಧ 119 ಎಸೆತಗಳಲ್ಲಿ 168 ರನ್ ಗಳಿಸಿದರು. ಆಶೀರ್ವಾದ್ ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು ಆರು ಸಿಕ್ಸರ್‌ಗಳು ಸೇರಿದ್ದವು. ಜೂನ್ 13 ರಂದು ಕ್ರಿಕೆಟ್ ಅಕಾಡೆಮಿ ತಾಜ್‌ಪುರ ಪರ ಆಡುತ್ತಿದ್ದ ಅವರು 87 ಎಸೆತಗಳಲ್ಲಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 103 ರನ್ ಗಳಿಸಿದ್ದರು.

ಕಾಯುತ್ತಿರುವ ವೈಭವ್

ಕೇವಲ 15 ವರ್ಷದ ವೈಭವ್ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕೂ ಮೊದಲು, ಶ್ರೀಲಂಕಾದಲ್ಲಿ ನಡೆದ ಏಕದಿನ ತ್ರಿಕೋನ ಸರಣಿಯಲ್ಲಿ ಭಾರತ ಎ ಪರ ಆಡುವಾಗ, ವೈಭವ್ ಐದು ಇನ್ನಿಂಗ್ಸ್‌ಗಳಲ್ಲಿ 211 ರನ್ ಗಳಿಸಿದರು. ಇದರಲ್ಲಿ ಫೈನಲ್‌ನಲ್ಲಿ 29 ಎಸೆತಗಳಲ್ಲಿ 94 ರನ್ ಕೂಡ ಸೇರಿತ್ತು. ಈಗ, ವೈಭವ್ ಯಾವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Aashirwad Sooryavanshi: 6 ಸಿಕ್ಸರ್‌, 19 ಬೌಂಡರಿ 168 ರನ್! ಮತ್ತೊಂದು ಶತಕ ಸಿಡಿಸಿ ಅಣ್ಣನನ್ನೇ ಮೀರಿಸೋ ಇನ್ನಿಂಗ್ಸ್ ಆಡಿದ ವೈಭವ್ ಸೂರ್ಯವಂಶಿ ಸಹೋದರ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed