ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರಾಟ್ ಅವರೊಂದಿಗೆ ಹೊಸ ವೈವಾಹಿಕ ಜೀವನ ಆರಂಭಿಸಿರುವ ಆಮಿರ್ ಖಾನ್ ಅವರ ಮೂರನೇ ಮದುವೆ ಈಗ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಾರಿ ಕುತೂಹಲ ಕೇವಲ ಆಮಿರ್ ಖಾನ್ ಅವರ ವಿವಾಹದ ಬಗ್ಗೆ ಮಾತ್ರವಲ್ಲ, ಅವರ ಪತ್ನಿ ಗೌರಿ ಸ್ಪ್ರಾಟ್ ಅವರ ಹಿಂದಿನ ಜೀವನದ ಬಗ್ಗೆಯೂ ಹೆಚ್ಚಾಗಿದೆ. ಗೌರಿ ಕೂಡ ಈ ಹಿಂದೆ ವಿವಾಹವಾಗಿದ್ದು, ಒಬ್ಬ ಮಗುವಿನ ತಾಯಿಯಾಗಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಹೊರಬಂದಿದೆ. ಅಲ್ಲದೆ, ಅವರ ಮೊದಲ ಪತಿ, ನಟ ಮತ್ತು ಮಾಡೆಲ್ ಆಗಿದ್ದರು ಎನ್ನುವ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.












