Aamir Khan: ಆಮಿರ್ ಖಾನ್ ವಿರುದ್ಧ ಫತ್ವಾ! ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾದ 3ನೇ ಮದುವೆ! | | ACTPnews

ನಟ ಆಮಿರ್ ಖಾನ್


Last Updated:

ಆಮಿರ್ ಖಾನ್ ವಿರುದ್ಧ ಮುಸ್ಲಿಂ ಧರ್ಮಗುರು ಸಾರ್ವಜನಿಕ ಫತ್ವಾ ಹೊರಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ನಟ ಆಮಿರ್ ಖಾನ್
ನಟ ಆಮಿರ್ ಖಾನ್

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಅವರ ಮೂರನೇ ಮದುವೆಯ ಬಗ್ಗೆ ಚರ್ಚೆಗಳು ಜೋರಾಗಿರುವ ನಡುವೆಯೇ ಇದೀಗ ಆಮಿರ್ ಖಾನ್ ವಿರುದ್ಧ ಮುಸ್ಲಿಂ ಧರ್ಮಗುರು ಸಾರ್ವಜನಿಕ ಫತ್ವಾ ಹೊರಡಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

61 ವರ್ಷದ ಆಮಿರ್ ಖಾನ್ ಇತ್ತೀಚೆಗೆ ಉದ್ಯಮಿ ಗೌರಿ ಸ್ಪ್ರಾಟ್ ಅವರನ್ನು ವಿವಾಹವಾಗಿದ್ದಾರೆ. ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಜುಲೈ 5ರಂದು ವಿಶೇಷ ವಿವಾಹ ಕಾಯ್ದೆಯಡಿ ಈ ಮದುವೆ ನೆರವೇರಿದೆ ಎನ್ನಲಾಗಿದೆ. ಈ ವಿವಾಹದ ಸುದ್ದಿ ಹೊರಬಿದ್ದ ತಕ್ಷಣವೇ ಅಭಿಮಾನಿಗಳು ಹಾಗೂ ಸಿನಿರಂಗದಲ್ಲಿ ಸಾಕಷ್ಟು ಚರ್ಚೆ ಆರಂಭವಾಗಿತ್ತು.

ಈ ಮದುವೆಯ ಬೆನ್ನಲ್ಲೇ ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರು ಆಮಿರ್ ಖಾನ್ ವಿರುದ್ಧ ಸಾರ್ವಜನಿಕ ಫತ್ವಾವನ್ನು ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಅವರ ಪ್ರಕಾರ, ಇಸ್ಲಾಮಿಕ್ ಶರಿಯಾದ ನಿಯಮಗಳಂತೆ ನಂಬಿಕೆಯುಳ್ಳ ಮುಸ್ಲಿಂ ಪುರುಷರು ಮುಸ್ಲಿಂ ಮಹಿಳೆಯರನ್ನು ಅಥವಾ ಧಾರ್ಮಿಕ ನಿಯಮಗಳಿಗೆ ಅನುಗುಣವಾಗಿ ವಿವಾಹವಾಗಲು ಅವಕಾಶವಿರುವ ಮಹಿಳೆಯರನ್ನು ಮಾತ್ರ ವಿವಾಹವಾಗಬೇಕು ಎಂದು ಹೇಳಿದ್ದಾರೆ.

ಧರ್ಮಗುರು ತಮ್ಮ ಹೇಳಿಕೆಯಲ್ಲಿ, ಇಂತಹ ವಿವಾಹ ಮಾಡಿಕೊಂಡವರು ಅಲ್ಲಾಹನ ಮುಂದೆ ಪಶ್ಚಾತ್ತಾಪ ಪಡಬೇಕು ಹಾಗೂ ಆ ಕೃತ್ಯದಿಂದ ದೂರ ಸರಿಯಬೇಕು ಎಂದು ಹೇಳಿದ್ದಾರೆ. ಈ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸುವ ಉದ್ದೇಶದಿಂದಲೇ ಫತ್ವಾ-ಎ-ಆಮ್ ಹೊರಡಿಸಿರುವುದಾಗಿ ಅವರು ತಿಳಿಸಿದ್ದಾರೆ.

ಫತ್ವಾ ಎಂದರೆ ಏನು?

ಫತ್ವಾ ಎಂಬುದು ಯಾವುದೇ ನ್ಯಾಯಾಲಯದ ಆದೇಶ ಅಥವಾ ಸರ್ಕಾರದ ಕಾನೂನು ತೀರ್ಪು ಅಲ್ಲ. ಸಾಮಾನ್ಯವಾಗಿ ಇಸ್ಲಾಮಿಕ್ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಅರ್ಹ ಧರ್ಮಪಂಡಿತರು ಅಥವಾ ಧಾರ್ಮಿಕ ಸಂಸ್ಥೆಗಳು ನೀಡುವ ಧಾರ್ಮಿಕ ಅಭಿಪ್ರಾಯ ಅಥವಾ ಮಾರ್ಗದರ್ಶನವನ್ನು ಫತ್ವಾ ಎಂದು ಕರೆಯಲಾಗುತ್ತದೆ.

ಇದು ವಿವಿಧ ದೇಶಗಳಲ್ಲಿ ವಿಭಿನ್ನ ರೀತಿಯ ಧಾರ್ಮಿಕ ಪ್ರಾಮುಖ್ಯತೆ ಹೊಂದಿರಬಹುದು. ಆದರೆ ಅದರ ಕಾನೂನುಬದ್ಧ ಪರಿಣಾಮವು ಆಯಾ ದೇಶದ ಕಾನೂನು ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ.

ಆಮಿರ್ ಖಾನ್ ವಿರುದ್ಧ ಫತ್ವಾ ಹೊರಬಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಧಾರ್ಮಿಕ ನಿಯಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ವೈಯಕ್ತಿಕ ಜೀವನ ಮತ್ತು ವಿವಾಹದ ಆಯ್ಕೆಯನ್ನು ಗೌರವಿಸಬೇಕು ಎಂದು ಪ್ರತಿಕ್ರಿಯಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed