Khushboo Sundar: ಖುಷ್ಬೂ ಸುಂದರ್ ಹ್ಯಾಪಿ ಡ್ಯಾನ್ಸ್! ನೆಟ್ಟಿಗರು ಏನಂದ್ರು? | | ACTPnews

ಖುಷ್ಬೂ ಸುಂದರ್ ಡ್ಯಾನ್ಸ್ ವಿಡಿಯೋ ವೈರಲ್; ಇದೇನ್ರಿ ನಿಮ್ಮದು ಎಂದು ಕಾಮೆಂಟ್‌!


Last Updated:

ಖುಷ್ಬೂ ಸಂದರ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಇದನ್ನ ನೋಡಿದವರು ಕಾಮೆಂಟ್ ಹೊಡೆದಿದ್ದಾರೆ. ದೆಹಲಿ ಜಂತರ್ ಮಂತರ್ ಅಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡ್ತಿದ್ದಾರೆ. ಇದೇನ್ರಿ ನಿಮ್ಮದು ಅನ್ನುವ ಅರ್ಥದಲ್ಲಿಯೇ ಕಾಮೆಂಟ್ ಹೊಡೆದಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಖುಷ್ಬೂ ಸುಂದರ್ ಡ್ಯಾನ್ಸ್ ವಿಡಿಯೋ ವೈರಲ್; ಇದೇನ್ರಿ ನಿಮ್ಮದು ಎಂದು ಕಾಮೆಂಟ್‌!
ಖುಷ್ಬೂ ಸುಂದರ್ ಡ್ಯಾನ್ಸ್ ವಿಡಿಯೋ ವೈರಲ್; ಇದೇನ್ರಿ ನಿಮ್ಮದು ಎಂದು ಕಾಮೆಂಟ್‌!

ಖುಷ್ಬೂ ಸುಂದರ್ (Khushboo Sundar) ವಿಡಿಯೋ ವೈರಲ್ ಆಗಿದೆ. ಇದು ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಪಾರ್ಟಿ ಒಂದರಲ್ಲಿ ಪ್ಲೇ ಮಾಡಿರೋ ಹಾಡಿಗೆ ಖುಷ್ಬೂ ಸುಂದರ್ ಅಷ್ಟೆ ಖುಷಿಯಲ್ಲಿಯೇ ಡ್ಯಾನ್ಸ್ (Dance) ಮಾಡಿದ್ದಾರೆ. ಆದರೆ, ಈ ವಿಡಿಯೋ ನೋಡಿದವರು ಕಾಮೆಂಟ್‌ ಹೊಡೆದಿದ್ದಾರೆ. ಜಂತರ್ ಮಂತರ್ (Jantar Mantar) ಅಲ್ಲಿ ವಿದ್ಯಾರ್ಥಿಗಳು ಮತ್ತು ಜನ ಸಾಯುತ್ತಿದ್ದಾರೆ. ನಿಮ್ದೆನಿದು ಅಂತಲೂ ಅದ್ಯಾರೋ ಕಾಮೆಂಟ್ ಹೊಡೆದಿದ್ದಾರೆ. ಎಂದಿನಂತೆ ಅಭಿಮಾನಿಗಳು ಬ್ಯೂಟಿಫುಲ್ ಅಂತ ಹೇಳಿರೋದು ಇದೆ. ಅಂದ್ಹಾಗೆ ಈ ವಿಡಿಯೋದಲ್ಲಿ ಖುಷ್ಬೂ ಸುಂದರ್ (Khushboo Sundar) ಯಾವ ಹಾಡಿಗೆ ಡ್ಯಾನ್‌ ಮಾಡಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಕಮಲ್ ಹಾಸನ್ ಚಿತ್ರದ ಸಾಂಗ್

ಖುಷ್ಬೂ ಸುಂದರ್ ಅವರು ಬೇರೆ ಯಾವುದೋ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿಲ್ಲ. ಅಕ್ಟೋಬರ್-17,1990 ರಲ್ಲಿ ಬಂದ ತಮ್ಮದೇ ಚಿತ್ರದ ಹಿಟ್ ಹಾಡಿಗೇನೆ ನೃತ್ಯ ಮಾಡಿದ್ದಾರೆ. ಅಂದ್ರೆ, ಆ ದಿನಗಳನ್ನ ಈ ರೀತಿ ನೆನಪಿಸಿಕೊಂಡಿದ್ದಾರೆ.
Michael Madana Kama Rajan Movie Khushboo Sundar Dance Video Viral

ಕಮಲ್ ಹಾಸನ್ ಚಿತ್ರದ ಸಾಂಗ್

(ಚಿತ್ರ ಕೃಪೆ: ಖುಷ್ಬೂ ಸಂದರ್ ಇನ್‌ಸ್ಟಾಗ್ರಾಮ್)

ಕಮಲ್ ಹಾಸನ್ ಅಭಿನಯದ ಮೈಕೆಲ್ ಮದನ ಕಾಮ ರಾಜನ್ ಚಿತ್ರದ ಪೇರ್ ವಚಾಲುಮ್ ವೈಕಮಾ ಪೋನಾಲುಮ್ (Per Vachalum Vaikama Ponalum) ಅನ್ನುವ ಈ ಹಾಡಿಗೇನೆ ಖುಷ್ಬೂ ಸುಂದರ್ ಡ್ಯಾನ್ಸ್ ಮಾಡಿದ್ದಾರೆ.

ಪಾರ್ಟಿ ಮುಗಿದ್ಮೇಲೆ…

ಖುಷ್ಬೂ ಸುಂದರ್ ಈ ಒಂದು ಡ್ಯಾನ್ಸ್ ಅನ್ನ ಯಾವುದೋ ಪಾರ್ಟಿ ಮುಗಿದ್ಮೇಲೆ ಮಾಡಿದಂತೆ ಇದೆ. ಆದರೆ, ಇದು ಯಾವ ಪಾರ್ಟಿ, ಪಾರ್ಟಿ ಮುಗಿದ್ಮೇಲೆ ಡ್ಯಾನ್ಸ್ ಮಾಡಿರೋದಾ? ಅಥವಾ ಮೊದಲೇ ಮಾಡಿರೋದಾ? ಖುಷ್ಬೂ ಸುಂದರ್ ಈ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ, ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಈ ಡ್ಯಾನ್ಸ್ ವಿಡಿಯೋ ಹಂಚಿಕೊಂಡಿದ್ದಾರೆ.

ಖುಷ್ಬೂ ಸುಂದರ್ ಅವರ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದವರಲ್ಲಿ ಮೆಚ್ಚಿಕೊಂಡವರೇ ಜಾಸ್ತಿ ಜನ ಇದ್ದಾರೆ. ಆದರೂ, ಈ ವಿಡಿಯೋಗೆ ಒಂದು ಸ್ಟ್ರಾಂಗ್ ಕಾಮೆಂಟ್ ಬಂದಿದೆ.

ವಿದ್ಯಾರ್ಥಿಗಳು ಸಾಯ್ತಿದ್ದಾರೆ

“People and students are dying in janthar mantar” ಜಂತರ್ ಮಂತರ್ ಅಲ್ಲಿ ವಿದ್ಯಾರ್ಥಿಗಳು ಮತ್ತು ಜನ ಜಾಸ್ತಿದ್ದಾರೆ ಅನ್ನೋದೇ ಈ ಸಾಲಿನ ಅರ್ಥವಾಗಿದೆ.

Michael Madana Kama Rajan Movie Khushboo Sundar Dance Video Viral

ವಿಡಿಯೋ ಫುಲ್ ವೈರಲ್

(ಚಿತ್ರ ಕೃಪೆ: ಖುಷ್ಬೂ ಸಂದರ್ ಇನ್‌ಸ್ಟಾಗ್ರಾಮ್)

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ದೆಹಲಿ ಜಂತರ್ ಮಂತರ್ ಅಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಖಷ್ಬೂ ಸುಂದರ್ ಅವರ ಡ್ಯಾನ್ಸ್ ವಿಡಿಯೋಗೆ ‘ಹರೀಶ್ ನಂದಾ ತಮಿಳರಸನ್’ ಅನ್ನೋರು ಮೇಲೆ ಹೇಳಿದಂತೆ ಕಾಮೆಂಟ್ ಹೊಡೆದಿದ್ದಾರೆ.

ವಿಡಿಯೋ ಫುಲ್ ವೈರಲ್

ಖುಷ್ಬೂ ಸುಂದರ್ ಅವರ ಈ ಒಂದು ವಿಡಿಯೋ ವೈರಲ್ ಆಗಿದೆ. ಕಮಲ್ ಹಾಸನ್ ಜೊತೆಗೆ ಡ್ಯಾನ್ಸ್ ಮಾಡಿರೋ ತಮ್ಮದೇ ಕಾಮಿಡಿ ಚಿತ್ರದ ಹಾಡಿಗೇನೆ ಇವರು ಈಗ ಡ್ಯಾನ್ಸ್ ಮಾಡಿದ್ದಾರೆ.

ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆ ಖುಷ್ಬೂ ಸುಂದರ್ ಈ ಹಾಡನ್ನ ಸಖತ್ ಎಂಜಾಯ್ ಮಾಡಿದ್ದಾರೆ. ಅಷ್ಟೆ ಬ್ಯೂಟಿಫುಲ್ ಆಗಿಯೇ ಖುಷಿಯಿಂದಲೇ ಡ್ಯಾನ್ಸ್ ಮಾಡಿದ್ದಾರೆ. ಈ ಒಂದು ವಿಡಿಯೋ ಕಂಟೆಂಟ್‌ ಕ್ರಿಯೇಟರ್‌ಗೂ ರೀಲ್ಸ್ ಮಾಡೋಕೆ ಸ್ಪೂರ್ತಿ ನೀಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed