NEET Protest: ಪ್ರಧಾನಿ ಮೋದಿ ಮಿಡ್​ನೈಟ್ ಸೆಲ್ಫಿ ವಿಡಿಯೋಗೆ ಕಮೆಂಟ್ ಮಾಡಿದ ನಟಿ ರಮ್ಯಾ, ಬಿಗ್​ಬಾಸ್ ಪ್ರಥಮ್ | actress ramya comments on modi selfie video | | ACTPnews

ಮೋದಿ-ರಮ್ಯಾ


Last Updated:

Modi: ಪ್ರಧಾನಿ ಮೋದಿ ಮಧ್ಯರಾತ್ರಿ ಸೆಲ್ಫಿ ವಿಡಿಯೋ ಪೋಸ್ಟ್ ಮಾಡಿದ್ದು ಅದು ತಕ್ಷಣ ವೈರಲ್ ಆಗಿದೆ. ಇದಕ್ಕೆ ಕನ್ನಡದ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಮೋದಿ-ರಮ್ಯಾ
ಮೋದಿ-ರಮ್ಯಾ

ದೆಹಲಿಯ ಜಂತರ್ ಮಂತರ್​​ನಲ್ಲಿ (Jantar Mantar) ವಿದ್ಯಾರ್ಥಿಗಳು (Students) ನೀಟ್ ಪೇಪರ್ ಲೀಕ್ ವಿರುದ್ಧ ಪ್ರತಿಭಟನೆ (Protest) ಮಾಡುತ್ತಿದ್ದಾರೆ. ಈಗಾಗಲೇ ಪ್ರತಿಭಟನೆ ವಾರದಿಂದ ಸುದ್ದಿಯಾಗುತ್ತಿದ್ದು ಈ ನಡುವೆ ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಕೂಡಾ ಮಾಡಿದ್ದರು. ಆ ನಂತರ ಪ್ರಧಾನಿ ಸೆಲ್ಫಿ ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್ ​ನಲ್ಲಿ (Instagram) ಪೋಸ್ಟ್ ಮಾಡಿದ್ದರು. ಆ ವಿಡಿಯೋಗೆ (Video) ಹಲವಾರು ಜನ ಕಮೆಂಟ್ ಮಾಡಿದ್ದಾರೆ.

ಸಿಜೆಪಿ ಕಳೆದ ಕೆಲವು ದಿನಗಳಿಂದ ಜಂತರ್ ಮಂತರ್​ನಲ್ಲಿ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಈಗಾಗಲೇ ಈ ಪ್ರತಿಭಟನೆಗೆ ಬಹಳಷ್ಟು ಜನರು ರಿಯಾಕ್ಟ್ ಮಾಡಿದ್ದಾರೆ. ಬಹಳಷ್ಟು ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು ಈ ಒಂದು ಪ್ರತಿಭಟನೆಯ ಪರ ಹಾಗೂ ವಿರೋಧವಾಗಿ ಧ್ವನಿ ಎತ್ತಿದ್ದಾರೆ. ಇದೀಗ ಮಧ್ಯೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸೆಲ್ಫಿ ವಿಡಿಯೋ ಶೇರ್ ಮಾಡಿದ್ದರು. ಅದಕ್ಕೆ ನಟಿ ರಮ್ಯಾ ಹಾಗೂ ಬಿಗ್​ಬಾಸ್ ಪ್ರಥಮ್ ಕಮೆಂಟ್ ಮಾಡಿದ್ದಾರೆ.

ಮೋದಿ ವಿಡಿಯೋದಲ್ಲಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ ವೀಡಿಯೊವನ್ನು ಪೋಸ್ಟ್ ಮಾಡಿ ಪರೀಕ್ಷೆಗಳ ಸಂಬಂಧ ಕಠಿಣ ಹೊಸ ಕಾನೂನು ಜಾರಿಗೆ ಬರುತ್ತಿದೆ ಎಂದು ಹೇಳಿದರು. ಅದರ ಡ್ರಾಫ್ಟ್ ಕೂಡಾ ತನಗೆ ತಲುಪಿದೆ. ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇದನ್ನು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಪರೀಕ್ಷಾ ಪ್ರಶ್ನೆಪತ್ರಿಕೆ ಲೀಕ್​​ಗೆ ಕಾರಣರಾದವರನ್ನು ಶಿಕ್ಷಿಸಲು ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಇಲಾಖೆಗಳು ಈಗಾಗಲೇ ಡ್ರಾಫ್ಟ್ ಪ್ರಪೋಸಲ್ ನನಗೆ ಸಲ್ಲಿಸಿವೆ. ತ್ವರಿತ ನ್ಯಾಯಾಲಯಗಳು ಮತ್ತು ಕಠಿಣ ದಂಡಗಳಿಗೆ ನಿಬಂಧನೆಗಳನ್ನು ಒಳಗೊಂಡಿರುವ ಈ ಡ್ರಾಫ್ಟ್ ನಾಳೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಸಂಪುಟ ಸಹೋದ್ಯೋಗಿಗಳ ಸಲಹೆಗಳನ್ನು ಸೇರಿಸಿದ ನಂತರ ಇದನ್ನು ಅಂತಿಮಗೊಳಿಸಲಾಗುವುದು. ಈ ಬರುವ ಸೋಮವಾರ ಸಂಸತ್ತಿನ ಅಧಿವೇಶನದ ಎರಡನೇ ವಾರದಿಂದ ಸಾಧ್ಯವಾದಷ್ಟು ಬೇಗ ಮಸೂದೆಯನ್ನು ಸದನದಲ್ಲಿ ಅಂಗೀಕರಿಸಲು ಪ್ರಯತ್ನಿಸಲಾಗುವುದು, ”ಎಂದು ಅವರು ಹೇಳಿದ್ದಾರೆ.

ನಟಿ ರಮ್ಯಾ ಪ್ರತಿಕ್ರಿಯೆ

ಪ್ರಧಾನಿ ಮೋದಿ ಅವರ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಅವರ ಕಮೆಂಟ್ ಗಮನ ಸೆಳೆದಿದೆ. ‘ಆದರೆ ಮೊದಲು ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು’ ಎಂದು ರಮ್ಯಾ ಕಮೆಂಟ್ ಮಾಡಿದ್ದಾರೆ. ರಮ್ಯಾ ಅವರ ಕಮೆಂಟ್​​ಗೆ 3270 ಲೈಕ್ಸ್ ಹಾಗೂ 215 ಕಮೆಂಟ್ಸ್ ಬಂದಿವೆ.

ಬಿಗ್​ಬಾಸ್ ಪ್ರಥಮ್ ಪ್ರತಿಕ್ರಿಯೆ

ನಾನು ಜಗತ್ತಿನ ಅತಿದೊಡ್ಡ ಗಣರಾಜ್ಯ ದೇಶದ ನಮ್ಮ ನಾಯಕ, ಪ್ರಧಾನಿ ಮೋದಿ ಅವರನ್ನು ಗೌರವಿಸುತ್ತೇನೆ ಎಂದು ಬರೆದಿದ್ದಾರೆ.

ನಟಿ ರಾಖಿ ಸಾವಂತ್ ಅವರು ಜಿಫ್ ಮೂಲಕ ಕಮೆಂಟ್ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ಬೇರೆ ಸೆಲೆಬ್ರಿಟಿಗಳು ಕಮೆಂಟ್ ಮಾಡಿರುವುದು ಕಂಡುಬಂದಿಲ್ಲ. ಮೋದಿ ಅವರ ಪೋಸ್ಟ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ತ್ವರಿತ ಕ್ರಮಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.

4 ಮಿಲಿಯನ್ ಲೈಕ್ಸ್

ಪ್ರಧಾನಿ ಮೋದಿ ಅವರ ಸೆಲ್ಫಿ ವಿಡಿಯೋಗೆ ನಾಲ್ಕು ಮಿಲಿಯನ್ ಲೈಕ್ಸ್ ಬಂದಿದೆ. 451 ಸಾವಿರ ಕಮೆಂಟ್ಸ್ ಕೂಡಾ ಬಂದಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed