Cult Movie: ಟಿವಿಯಲ್ಲಿ ಬರ್ತಿದೆ ರಚಿತಾ ರಾಮ್ ಅಭಿನಯದ ಕಲ್ಟ್ ಮೂವಿ | Zaid Khan Rachita ram cult movie television premier know when and where know here | | ACTPnews

Cult Movie: ಟಿವಿಯಲ್ಲಿ ಬರ್ತಿದೆ ರಚಿತಾ ರಾಮ್ ಅಭಿನಯದ ಕಲ್ಟ್ ಮೂವಿ | Zaid Khan Rachita ram cult movie television premier know when and where know here |


ಜುಲೈ 26ಕ್ಕೆ ‘ಕಲ್ಟ್’ ಸಂಭ್ರಮ ಇರಲಿದೆ. ಮನೆಯಲ್ಲೇ ಸಿನಿಮಾ ನೋಡೋರಿಗೆ ಕಲ್ಟ್ ಮೂವಿ ಟಿವಿಯಲ್ಲಿ ಬರಲಿದ್ದು, ಫ್ಯಾಮಿಲಿ ಸಮೇತರಾಗಿ ಎಂಜಾಯ್ ಮಾಡಬಹುದು. ಕಲರ್ಸ್ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಇರಲಿದ್ದು ಕಲರ್ಸ್ ಕನ್ನಡದಲ್ಲಿ ಜುಲೈ 26 ಕ್ಕೆ ‘ಕಲ್ಟ್’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

ಇದೇ ಭಾನುವಾರ, ಮಧ್ಯಾಹ್ನ 3 ಗಂಟೆಗೆ ಕಲ್ಟ್ ಬರಲಿದ್ದು ವಾರಾಂತ್ಯದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ. ಸ್ನೇಹ, ಪ್ರೀತಿ, ಕನಸುಗಳು ಮತ್ತು ಜೀವನದ ಕಠಿಣ ವಾಸ್ತವಗಳ ನಡುವೆ ಸಾಗುವ ಯುವಕರ ಭಾವನಾತ್ಮಕ ಪಯಣವೇ ‘CULt’. ಸದ್ಯ ಸಿನಿಮಾ ಥಿಯೇಟರ್​ನಲ್ಲಿ ಮಿಸ್ ಮಾಡಿಕೊಂಡಿದ್ದರೆ ಮನೆಯಲ್ಲೇ ಕುಳಿತು ನೋಡಬಹುದಾಗಿದೆ.

ನಟ ಜೈದ್ ಖಾನ್ ನಾಯಕನಾಗಿ ನಟಿಸಿರುವ ರೋಮ್ಯಾಂಟಿಕ್, ಮ್ಯೂಸಿಕಲ್ ಹಾಗೂ ಬ್ಲಾಕ್ ಬಸ್ಟರ್ ಸಿನಿಮಾ ಕಲ್ಟ್ (Cult) ಇದೇ ಮೊದಲ ಬಾರಿಗೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ (World Television Premiere) ನಲ್ಲಿ ಜುಲೈ 26 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಭಗ್ನಪ್ರೇಮಿಯಾಗಿ ಕಾಣಿಸ್ಕೊಳ್ತಾರೆ ಝೈದ್ ಖಾನ್

‘ಮಾಧವ’ನ ಪಾತ್ರದಲ್ಲಿ ಅಭಿನಯಿಸಿರುವ ಜೈದ್ ಖಾನ್ ಪ್ರೀತಿಯಲ್ಲಿ ಸೋತು ಭಗ್ನ ಪ್ರೇಮಿಯಾಗಿ ಅನುಭವಿಸುವ ಯಾತನೆ ಭಾವನಾತ್ಮಕತೆಯಿಂದ ಕೂಡಿದೆ. ಜೆನ್-ಝೀ ಯುವಕರ ಇಷ್ಟ, ಅವರ ಪ್ರೀತಿಯ ರೀತಿ, ವಿರಹದ ಕಥಾಹಂದರವನ್ನು ಸಿನಿಮಾ ಹೊಂದಿದ್ದು ಎಳೆ ಎಳೆಯಾಗಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಹೋಗುತ್ತದೆ.‌

ಪ್ರೀತಿಯ ಬಲೆಯಲ್ಲಿ ಬಿದ್ದ ಹೀರೋ ಓದು ಬಿಟ್ಟು, ಕುಡಿತದ ದಾಸನಾಗುವುದು. ಪ್ರೀತಿಸಿದ ಹುಡುಗಿ ದೂರವಾದಾಗ ನಾಯಕನ ಬಾಳಲ್ಲಿ ಇತಿಹಾಸಿನಿ (ರಚಿತಾ) ಎಂಟ್ರಿ ಕೊಟ್ಟ ಬಳಿಕ ಆತನ ಜೀವನದಲ್ಲಾಗುವ ಬದಲಾವಣೆ ಎಲ್ಲವೂ ಕಾಣಿಸಲಿದೆ. ನಾಯಕ ಕೊನೆಗೆ ಯಾರ ಜೊತೆ ಸೇರುತ್ತಾನೆ ಎಂಬ ಕುತೂಹಲ ಹುಟ್ಟಿಸುತ್ತಾ ಸಾಗುವ ಸಿನಿಮಾವೇ ʻಕಲ್ಟ್‌ʼ.

ನಾಯಕ ತನ್ನಿಂದ ದೂರವಾದ ಗೀತಾಳ ಜೊತೆ ಸೇರುತ್ತಾನಾ? ಅಷ್ಟಕ್ಕೂ ಗೀತಾ ದೂರವಾಗೋದು ಏಕೆ? ಇತಿಹಾಸಿನಿ ಮತ್ತು ಮ್ಯಾಡಿ ಒಂದಾಗುತ್ತಾರಾ ಎಂಬುದಕ್ಕೆ ಚಿತ್ರವನ್ನು ನೋಡಲೇಬೇಕು.

ನಟ ಜೈದ್ ಖಾನ್ ಇಲ್ಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಲವರ್ ಬಾಯ್ ಆಗಿ ಮತ್ತೊಮ್ಮೆ ವೈಲೆಂಟ್ ಭಗ್ನಪ್ರೇಮಿಯಾಗಿ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.

ಕಲ್ಟ್ ಕೇವಲ ಪ್ರೇಮಕಥೆಯಲ್ಲ. ಅದು ಕೆಲವು ಮಹತ್ವದ ಸಾಮಾಜಿಕ ಪ್ರಶ್ನೆಗಳನ್ನೂ ಎತ್ತುವ ಸಿನಿಮಾ. ಧೈರ್ಯವಾಗಿ ಬದುಕುವ ಮಹಿಳೆಯರನ್ನು ಸಮಾಜ ಎಷ್ಟು ಬೇಗ ಜಡ್ಜ್ ಮಾಡುತ್ತದೆ. ಅವರ ನೋವು ಮತ್ತು ಮಾನಸಿಕ ಆಘಾತವನ್ನು ಹೇಗೆ ಕಡೆಗಣಿಸುತ್ತದೆ, ಹಾಗೂ ಪೋಷಕರ ನಿರೀಕ್ಷೆಗಳು ಮಕ್ಕಳ ಭಾವನಾತ್ಮಕ ನಿರ್ಧಾರಗಳನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಟ ಜೈದ್ ಖಾನ್, ನಟಿಯರಾದ ರಚಿತಾ ರಾಮ್ ಮತ್ತು ಮಲೈಕಾ ವಾಸುಪಾಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ಅಯ್ಯೋ ಶಿವನೇ’ ಹಾಗೂ ‘ಬ್ಲಡಿ ಲವ್’ ಹಾಡುಗಳು ಬಿಡುಗಡೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿದ್ದವು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed