ವಿಡಿಯೋ ಶೇರ್ ಮಾಡಿದ್ಯಾರು
(ಚಿತ್ರ ಕೃಪೆ: ಉಮೇಶ್ ಫೋಟೋಗ್ರಾಫರ್ ಇನ್ಸ್ಟಾಗ್ರಾಮ್)
ಸಪ್ತಮಿ ಗೌಡ ಅವರ ಈ ಒಂದು ವಿಡಿಯೋದಲ್ಲಿ ಹೆಚ್ಚಾಗಿ ಸೀರಿಯಲ್ಲಿರೋ ದೃಶ್ಯಗಳೇ ಇವೆ. ಅಷ್ಟೆ ಚೆನ್ನಾಗಿ ರೆಡಿ ಆಗಿಯೇ ಸಪ್ತಮಿ ಗೌಡ ಇಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಸಪ್ತಮಿ ಗೌಡ ತುಂಬಾನೆ ಚೆನ್ನಾಗಿ ಅನಿಸೋದು ಸೀರೆ ಹಾಗೂ ಹಾಫ್ ಸೀರೆ ಅಂತ ಹೇಳಬಹುದು. ರೈಸ್ ಆಫ್ ಅಶೋಕ ಚಿತ್ರದಲ್ಲಿ ಅಂಬಿಕಾ ಅನ್ನುವ ರೋಲ್ ಅಲ್ಲಿ ಸಪ್ತಮಿ ಗೌಡ ಅವರು ಹಾಫ್ ಸಾರಿಯಲ್ಲಿಯೇ ಕಾಣಿಸಿಕೊಂಡಿದ್ದರು. ಅಷ್ಟೆ ಚೆನ್ನಾಗಿಯೂ ಕಾಣಿಸಿಕೊಂಡಿದ್ದರು.
ಆದರೆ, ಇವರಿಗೆ ಮಾಡರ್ನ್ ಡ್ರೆಸ್ಗಳು ಅಷ್ಟಾಗಿ ಸೂಟ್ ಆಗೋದಿಲ್ಲ ಅನಿಸುತ್ತದೆ. ಕಾರಣ ಏನೂ ಅನ್ನೋದು ಗೊತ್ತಾಗಲ್ಲ. ಆದರೆ, ಸೀರೆ ಇವರ ಚೆಲುವನ್ನ ಹೆಚ್ಚಿಸುತ್ತದೆ.
ಸಪ್ತಮಿ ಗೌಡ ಅವರ ಈ ಒಂದು ವಿಡಿಯೋವನ್ನ ಫೋಟೋಗ್ರಾಫರ್ ಉಮೇಶ್ ಅವರೇ ಹಂಚಿಕೊಂಡಿದ್ದಾರೆ. ಸಪ್ತಮಿ ಗೌಡ ಅವರ ಬಹುತೇಕ ಫೋಟೋ ಶೂಟ್ ಅನ್ನ ಇವರೇ ಮಾಡಿದ್ದಾರೆ.
ಸುಂದರಿ ಸಪ್ತಮಿ ಗೌಡ
(ಚಿತ್ರ ಕೃಪೆ: ಉಮೇಶ್ ಫೋಟೋಗ್ರಾಫರ್ ಇನ್ಸ್ಟಾಗ್ರಾಮ್)
ತಾವು ಮಾಡಿರೋ ಅಷ್ಟು ಕೆಲಸವನ್ನ ಒಂದರಲ್ಲಿಯೇ ಸೇರಿಸಿದ್ದಾರೆ. ಆದರೆ, ಈ ವಿಡಿಯೋ ತುಂಬಾ ದೊಡ್ಡದೇನು ಇಲ್ಲ. ರೀಲ್ಸ್ ರೂಪದಲ್ಲಿಯೇ ಇದೆ. ಇದರಲ್ಲಿಯೇ ಸೆಲೆಕ್ಟೆಡ್ ಕ್ಲಿಪ್ಗಳನ್ನ ಬಳಕೆ ಮಾಡಿದ್ದಾರೆ. ಅದನ್ನ ಒಂದು ಚೆಂದ ವಿಡಿಯೋ ಮಾಡಿಯೇ ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಅನೇಕರು ಸೆಲೆಬ್ರಿಟಿಗಳ ಫೋಟೋ ಶೂಟ್ ಮಾಡ್ತಾರೆ. ಕ್ಯಾಮರಾಮನ್ ಎ.ಜೆ.ಶೆಟ್ಟಿ ಕೂಡ ಅತ್ಯುತ್ತಮ ಅನಿಸೋ ಫೋಟೋ ಶೂಟ್ ಮಾಡ್ತಾರೆ.
ಸಪ್ತಮಿ ಗೌಡ ಅಭಿನಯದ ರೈಸ್ ಆಫ್ ಅಶೋಕ ಸಿನಿಮಾ ಬಂದು ಹೋಗಿದೆ. ಈ ಚಿತ್ರಕ್ಕೂ ಮುಂಚೆ ಯುವ ಸಿನಿಮಾ ರಿಲೀಸ್ ಆಗಿದೆ. ಅದಕ್ಕೂ ಮೊದಲು ದಿ ವ್ಯಾಕ್ಸಿನ್ ಬಂದಿದೆ. ಕಾಂತಾರ ಚಿತ್ರವಂತು ಈ ನಟಿಯನ್ನ ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ.
ಸಪ್ತಮಿ ಗೌಡ ಹೊಸ ಉದ್ಯಮ ಕೂಡ ಶುರು ಮಾಡಿದ್ದಾರೆ. ಕಾಜಾಣ ಅಂತಲು ಇದಕ್ಕೆ ಹೆಸರಿಟ್ಟಿದ್ದಾರೆ. ಮಲೆನಾಡಿನ ಪ್ರಕೃತಿ ಮಡಿಲಲ್ಲಿಯೇ ಇದು ಇದೆ. ಆದರೆ, ಇದು ವೈಯುಕ್ತಿಕ ಫಾರ್ಮ್ ಹೌಸ್ ಆಗದೆ, ಇಲ್ಲಿ ಇವೆಂಟ್ಸ್, ಪಾರ್ಟಿಗಳನ್ನು ಮಾಡಬಹುದಾಗಿದೆ ಅಂತಲೇ ಹೇಳಬಹುದು.













