Last Updated:
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ಇಟಿಪಿಎಲ್) ವೇಳಾಪಟ್ಟಿಯ ಕುರಿತು ದೊಡ್ಡ ಸುದ್ದಿ ಹೊರಬಿದ್ದಿದೆ. ಲೀಗ್ ಆಗಸ್ಟ್ 26 ರಂದು ಪ್ರಾರಂಭವಾಗಲಿದೆ.
ಯುರೋಪ್(Europe)ನಲ್ಲಿ ಕ್ರಿಕೆಟ್(Cricket)ನ ಹೊಸ ಲೀಗ್ ಶುರುವಾಗಲಿದೆ. ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ತನ್ನ ಮೊದಲ ಸೀಸನ್ನ ವೇಳಾಪಟ್ಟಿಯನ್ನು ಇಂದು (ಜುಲೈ 28) ಪ್ರಕಟಿಸಿದೆ. ಈ ಲೀಗ್ ಆಗಸ್ಟ್ 26 ರಂದು ಶುರುವಾಗಿ ಸೆಪ್ಟೆಂಬರ್ 20 ರಂದು ಫೈನಲ್ ಪಂದ್ಯದೊಂದಿಗೆ ಮುಗಿಯಲಿದೆ. ಒಟ್ಟು 6 ತಂಡಗಳು ಆಡುತ್ತಿವೆ. ಹಲವು ಸ್ಟಾರ್ ಆಟಗಾರರು ಇದರಲ್ಲಿ ಆಡಲಿದ್ದಾರೆ.
ಇಟಿಪಿಎಲ್ 2026 ರ ಮೊದಲ ಪಂದ್ಯ ರೋಟರ್ಡ್ಯಾಮ್ ಡಾಕರ್ಸ್ ಮತ್ತು ಆಮ್ಸ್ಟರ್ಡ್ಯಾಮ್ ಫ್ಲೇಮ್ಸ್ ನಡುವೆ ನಡೆಯಲಿದೆ. ಎಲ್ಲಾ ಪಂದ್ಯಗಳು ನೆದರ್ಲ್ಯಾಂಡ್ಸ್ನ ವೂರ್ಬರ್ಗ್ ಕ್ರಿಕೆಟ್ ಕ್ಲಬ್ ಮತ್ತು ಐರ್ಲೆಂಡ್ನ ಮಲಾಹೈಡ್ನಲ್ಲಿ ನಡೆಯಲಿವೆ. ಈ ಲೀಗ್ ಒಟ್ಟು 26 ದಿನಗಳ ಕಾಲ ನಡೆಯಲಿದೆ. ಡಬ್ಲಿನ್ ಗಾರ್ಡಿಯನ್ಸ್ ತಂಡದ ಸಹ-ಮಾಲೀಕ ಕನ್ನಡಿಗ ರಾಹುಲ್ ದ್ರಾವಿಡ್ ಆಗಿದ್ದಾರೆ
ಇಟಿಪಿಎಲ್ನ ಮೊದಲ ಸೀಸನ್ನಲ್ಲಿ ಆರು ತಂಡಗಳು ಭಾಗವಹಿಸುತ್ತವೆ. ಪ್ರತಿ ತಂಡವು ಡಬಲ್ ರೌಂಡ್-ರಾಬಿನ್ ಸ್ವರೂಪದಲ್ಲಿ ಪರಸ್ಪರ ಎರಡು ಪಂದ್ಯಗಳನ್ನು ಆಡಲಿದೆ. ಅಂದರೆ, ಪ್ರತಿ ತಂಡವು ಇತರೆ ತಂಡಗಳೊಂದಿಗೆ ಎರಡು ಬಾರಿ ಪಂದ್ಯ ಆಡುತ್ತದೆ. ಲೀಗ್ ಹಂತದಲ್ಲಿ ಒಟ್ಟು 30 ಪಂದ್ಯಗಳು ನಡೆಯುತ್ತವೆ. ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನ ಪಡೆದ ತಂಡ ನೇರವಾಗಿ ಫೈನಲ್ಗೆ ಹೋಗುತ್ತದೆ. ಎರಡನೇ ಮತ್ತು ಮೂರನೇ ಸ್ಥಾನದ ತಂಡಗಳು ಅರ್ಹತಾ ಪಂದ್ಯ ಆಡುತ್ತವೆ. ಅದರ ವಿಜೇತ ತಂಡ ಫೈನಲ್ಗೆ ಎರಡನೇ ಟಿಕೆಟ್ ಪಡೆಯುತ್ತದೆ.
ಸೆಪ್ಟೆಂಬರ್ 7 ಮತ್ತು 8 ರಂದು ತಂಡಗಳು ಪ್ರಯಾಣ ಮಾಡುತ್ತವೆ. ಲೀಗ್ ಹಂತದಲ್ಲಿ ಕೆಲವು ಡಬಲ್-ಹೆಡರ್ ಪಂದ್ಯಗಳನ್ನು ಸಹ ಆಡಲಾಗುತ್ತದೆ. ಮೊದಲ ಪಂದ್ಯ ಭಾರತೀಯ ಸಮಯ ಮಧ್ಯಾಹ್ನ 3:30 ಗಂಟೆಗೆ ಮತ್ತು ಎರಡನೆಯದು ಸಂಜೆ 6:45 ಗಂಟೆಗೆ ಕ್ಕೆ ಪ್ರಾರಂಭವಾಗುತ್ತದೆ.
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ 2026ರಲ್ಲಿ ಅನೇಕ ಅಂತಾರಾಷ್ಟ್ರೀಯ ಸೂಪರ್ಸ್ಟಾರ್ ಆಟಗಾರರು ಆಡಲಿದ್ದಾರೆ. ಇವರಲ್ಲಿ ಸ್ಟೀವ್ ಸ್ಮಿತ್, ರವಿಚಂದ್ರನ್ ಅಶ್ವಿನ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹೆನ್ರಿಕ್ ಕ್ಲಾಸೆನ್, ಮಿಚೆಲ್ ಮಾರ್ಷ್, ಲುಂಗಿ ಎನ್ಗಿಡಿ ಮತ್ತು ಟ್ರೆಂಟ್ ಬೌಲ್ಟ್ ಮುಂತಾದ ಪ್ರಸಿದ್ಧ ಆಟಗಾರರು ಸೇರಿದ್ದಾರೆ. ಇವರು ಬರುವುದರಿಂದ ಲೀಗ್ಗೆ ತುಂಬಾ ಉತ್ಸಾಹ ಬರುತ್ತದೆ. ಇದು ಹೆಚ್ಚು ಅಂತಾರಾಷ್ಟ್ರೀಯ ಮನ್ನಣೆ ಪಡೆಯುವ ಸಾಧ್ಯತೆ ಇದೆ. ಈ ಲೀಗ್ನ ಮೊದಲ ಸೀಸನ್ ಯುರೋಪ್ನಲ್ಲಿ ಫ್ರಾಂಚೈಸ್ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.














