CSK vs SRH, IPL 2026: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಗೆ ಆಸರೆಯಾದ ಕಾರ್ತಿಕ್-ಬ್ರೆವಿಸ್! ಹೈದರಾಬಾದ್​​ಗೆ 181 ರನ್​​ಗಳ ಗುರಿ ನೀಡಿದ ಸಿಎಸ್​ಕೆ | ಕ್ರೀಡಾ ಸುದ್ದಿ | ACTPnews

ಡೆವಾಲ್ಡ್ ಬ್ರೆವಿಸ್


Last Updated:

IPL 2026ರ 63 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್​ಕೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್​ಗಳಿಸಿದೆ.

ಡೆವಾಲ್ಡ್ ಬ್ರೆವಿಸ್
ಡೆವಾಲ್ಡ್ ಬ್ರೆವಿಸ್

IPL 2026ರ 63ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್​ಗಳಿಸಿದೆ. ಕಾರ್ತಿಕ್ ಶರ್ಮಾ 32, ಡೆವಾಲ್ಡ್ ಬ್ರೆವಿಸ್ 44, ಸಂಜು ಸ್ಯಾಮ್ಸನ್ 27 ರನ್​ಗಳಿಸಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಈ ಪಂದ್ಯ ಸಿಎಸ್​ಕೆ ಪ್ಲೇಆಫ್​ ಪ್ರವೇಶಿಸಲು ನಿರ್ಣಾಯಕವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೈದರಾಬಾದ್​ ತಂಡಕ್ಕೆ ಇನ್ನೂ ಒಂದು ಅವಕಾಶ ಇದೆಯಾದರೂ, ಆರ್​ಸಿಬಿ ವಿರುದ್ಧ ಆಗಿರುವುದರಿಂದ ಇಂದೇ ಗೆದ್ದು ತನ್ನ ಪ್ಲೇಆಫ್ ಪ್ರವೇಶಿ ಖಚಿತಗೊಳಿಸಿಕೊಳ್ಳಲು ಬಯಸುತ್ತಿದೆ.

ಉತ್ತಮ ಆರಂಭ ಪಡೆಯಲು ಸಿಎಸ್​ಕೆ ವಿಫಲ

ತವರಿನ ಮೈದಾನದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ (CSK) ನಿರೀಕ್ಷಿತ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್ (Sanju Samson)​ ಸ್ಫೋಟಕ ಆಟಕ್ಕೆ ಮುಂದಾಗಿ 3ನೇ ಓವರ್​ನಲ್ಲಿಯೇ ವಿಕೆಟ್ ಒಪ್ಪಿಸಿದರು. 13 ಎಸೆತಗಳನ್ನಾಡಿದ ಸಂಜು 5 ಬೌಂಡರಿ, 1 ಸಿಕ್ಸರ್​ ಸಹಿತ 27 ರನ್​ಗಳಿಸಿ ಪ್ಯಾಟ್ ಕಮಿನ್ಸ್ ಬೌಲಿಂಗ್​​ನಲ್ಲಿ ಕೀಪರ್ ಇಶಾನ್ ಕಿಶನ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ 3ನೇ ಕ್ರಮಾಂಕದಲ್ಲಿ ಬಂದ ಉರ್ವಿಲ್ ಪಟೇಲ್ 8 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಕೇವಲ 13 ರನ್​ಗಳಿಸಿ ಸಕಿಬ್ ಹುಸೇನ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು.

ಚೇತರಿಕೆ ನೀಡಿದ ಕಾರ್ತಿಕ್

48ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ಸಿಎಸ್‌ಕೆ ತಂಡಕ್ಕೆ ಕಾರ್ತಿಕ್ ಶರ್ಮಾ ಬಲ ತಂದರು. ನಾಯಕ ಗಾಯಕ್ವಾಡ್ ಜೊತೆಗೂಡಿ 3ನೇ ವಿಕೆಟ್​​​​ಗೆ 42 ರನ್​ಗಳ ಜೊತೆಯಾಟ ನೀಡಿದರು. ಒಂದು ಕಡೆ ಗಾಯಕ್ವಾಡ್ ರನ್​ಗಳಿಸಲು ಪರದಾಡುತ್ತಿದ್ದರಿಂದ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಕಾರ್ತಿಕ್ ಶರ್ಮಾ 10ನೇ ಓವರ್​​​​​​​ನಲ್ಲಿ ಕಮಿನ್ಸ್ ಬೌಲಿಂಗ್​​ನಲ್ಲಿ ರೆಡ್ಡಿಗೆ ಕ್ಯಾಚ್ ನೀಡಿ ಔಟ್ ಆದರು. ಕಾರ್ತಿಕ್ ಬೆನ್ನಲ್ಲೇ ನಾಯಕ ಗಾಯಕ್ವಾಡ್​ 21 ಎಸೆತಗಳಲ್ಲಿ ಒಂದೇ ಒಂದು ಬೌಂಡರಿಯನ್ನೂ ಸಿಡಿಸದೇ ಕೇವಲ 15 ರನ್​ಗಳಿಸಿ ಮಾಲಿಂಗಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಸವಾಲಿನ ಮೊತ್ತಕ್ಕೆ ನೆರವಾದ ಬ್ರೆವಿಸ್-ದುಬೆ

ಈ ಹಂತದಲ್ಲಿ ಒಂದಾದ ಡೆವಾಲ್ಡ್ ಬ್ರೆವಿಸ್ ಹಾಗೂ ಶಿವಂ ದುಬೆ 59 ರನ್​ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್​ಗಳ ಸಹಿತ 44 ರನ್​ಗಳಿಸಿ 18ನೇ ಓವರ್​​​ನಲ್ಲಿ ಔಟ್ ಆದರು. ದುಬೆ 23 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ ಕೇವಲ 26 ರನ್​ಗಳಿಸಿ ಔಟ್ ಆದರು. ಪ್ರಶಾಂತ್ ವೀರ್ 9 ಎಸೆತಗಳಲ್ಲಿ 12, ಅಕೀಲ್ ಹುಸೇನ್ ಅಜೇಯ 3 ರನ್​ಗಳಿಸಿದರು.

 ಪ್ಯಾಟ್ ಕಮಿನ್ಸ್ 3 ವಿಕೆಟ್​

ಸನ್​ರೈಸರ್ಸ್ ಹೈದರಾಬಾದ್ ಪರ ಪ್ಯಾಟ್ ಕಮಿನ್ಸ್ 28ಕ್ಕೆ3 ವಿಕೆಟ್ ಪಡೆದು ಮಿಂಚಿದರೆ, ಸಕಿಬ್ ಹುಸೇನ್ 34ಕ್ಕೆ2 ವಿಕೆಟ್ ಪಡೆದರು. ಇಶಾನ್ ಮಾಲಿಂಗ 26ಕ್ಕೆ1, ಪ್ರಫುಲ್ ಹಿಂಗೆ 37ಕ್ಕೆ1 ವಿಕೆಟ್ ಪಡೆದರು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್​​​​

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ XI: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೀ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ಸಂಜು ಸ್ಯಾಮ್ಸನ್ (ವಿಕೀ), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

CSK vs SRH, IPL 2026: ನಿರ್ಣಾಯಕ ಪಂದ್ಯದಲ್ಲಿ ಚೆನ್ನೈಗೆ ಆಸರೆಯಾದ ಕಾರ್ತಿಕ್-ಬ್ರೆವಿಸ್! ಹೈದರಾಬಾದ್​​ಗೆ 181 ರನ್​​ಗಳ ಗುರಿ ನೀಡಿದ ಸಿಎಸ್​ಕೆ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports