Last Updated:
ಕರಾವಳಿ ಚಿತ್ರದ ಪ್ರಜ್ವಲ್ ಮೇಕಿಂಗ್ ವಿಡಿಯೋ ಶೇರ್ ಆಗಿದೆ. ಇದನ್ನ ಪ್ರಜ್ವಲ್ ಪತ್ನಿ ರಾಗಿಣಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರದಲ್ಲಿ (Karavali Movie) ಪ್ರಜ್ವಲ್ ದೇವರಾಜ್ (Prajwal Devaraj) ಅಭಿನಯಸಿದ್ದಾರೆ. ಇವರ ಪಾತ್ರದ ಖದರ್ ಏನು ಅನ್ನೋದನ್ನ ಚಿತ್ರ ನೋಡಿದವರು ಎಂಜಾಯ್ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ (Prajwal Devaraj) ಅವರಿಗೆ ಇದು ಕಮ್ಬ್ಯಾಕ್ ಸಿನಿಮಾ ಅಂತಲೂ ಅನೇಕರು ಹೇಳಿದ್ದಾರೆ. ಆದರೆ, ಈ ಚಿತ್ರದ ಪಾತ್ರಕ್ಕೆ ಪ್ರಜ್ವಲ್ ದೇವರಾಜ್ ಡಬ್ ಮಾಡಿಲ್ಲ. ಇದು ಬಿಟ್ಟರೆ, ಇದರಲ್ಲಿ ಇವರ ಅಭಿನಯ ಅದ್ಭುತ ಅನ್ನೋದನ್ನ ಚಿತ್ರದ ಮೇಕಿಂಗ್ ವಿಡಿಯೂ ಕೂಡ ಹೇಳುತ್ತಿದೆ. ಈ ಒಂದು ವಿಡಿಯೋವನ್ನ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ (Ragini Prajwal) ಹಂಚಿಕೊಂಡಿದ್ದಾರೆ. ಚಿತ್ರ ನೋಡಿದವರಿಗೆ ಧನ್ಯವಾದಗಳು ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪತಿಯ ಕಷ್ಟದ ವಿಡಿಯೋ ಹಂಚಿಕೊಂಡ ರಾಗಿಣಿ ಪಜ್ವಲ್
(ಚಿತ್ರ ಕೃಪೆ: ರಾಗಿಣಿ ಪ್ರಜ್ವಲ್ ಇನ್ಸ್ಟಾಗ್ರಾಮ್)
ಯಕ್ಷಗಾನ ರೂಪದಲ್ಲಿ ಮಾಡಿರೋ ಸಾಹಸಗಳನ್ನು ಅಷ್ಟೆ ಅದ್ಭುತವಾಗಿಯೇ ಮಾಡಿದ್ದಾರೆ. ಯಕ್ಷಗಾನ ವೇಷಧರಿಸಿದ್ದಾರೆ. ಎರಡೂ ಕೈಯಲ್ಲಿ ಪಂಜು ಹಿಡಿದು ಫೈಟ್ ಮಾಡಿದ್ದಾರೆ. ಈ ಒಂದು ದೃಶ್ಯದ ಮೇಕಿಂಗ್ ಅಷ್ಟೆ ಗಮನ ಕೂಡ ಸೆಳೆಯುತ್ತದೆ.
ಕರಾವಳಿ ಚಿತ್ರದ ಈ ವಿಡಿಯೋವನ್ನ ಪ್ರಜ್ವಲ್ ಪ್ರತ್ನಿ ರಾಗಿಣಿ ಹಂಚಿಕೊಂಡಿದ್ದಾರೆ. ಇದರೊಟ್ಟಿಗೆ ಚಿತ್ರಕ್ಕೆ ಪ್ರೀತಿ ಮತ್ತು ಬೆಂಬಲ ಕೊಡ್ತಿರೋ ಪ್ರತಿಯೊಬ್ಬರಿಗೂ ಧನ್ಯವಾದ ಅಂತಲೂ ಹೇಳಿಕೊಂಡಿದ್ದಾರೆ.
ಕರಾವಳಿ ಚಿತ್ರದ ಮೇಕಿಂಗ್ ಔಟ್
(ಚಿತ್ರ ಕೃಪೆ: ರಾಗಿಣಿ ಪ್ರಜ್ವಲ್ ಇನ್ಸ್ಟಾಗ್ರಾಮ್)
ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಚಿತ್ರದ ಮೇಕಿಂಗ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗೆ ಈ ರೀತಿನೂ ಬರೆದುಕೊಂಡಿದ್ದಾರೆ. ಅದು ಹೀಗಿದೆ; Thank you for all the love & support for Karavalli! ಅಂತಲೂ ಹೇಳಿದ್ದಾರೆ ನೋಡಿ.
ಪ್ರಜ್ವಲ್ ದೇವರಾಜ್ ಅವರ ಶ್ರಮ ಏನು ಅನ್ನೋದು ತಿಳಿಯುತ್ತದೆ. ದೇವರು ಎಲ್ಲವನ್ನು ನೋಡ್ತಾನೇ ಇರ್ತಾನೆ ಅಂತಲೂ ಅದ್ಯಾರೋ ಬರೆದಿದ್ದಾರೆ.
ಮತ್ಯಾರೋ ಅಣ್ಣಾ ಈಸ್ ಬ್ಯಾಕ್ ಅಂತಲೂ ಹೇಳಿದ್ದಾರೆ. ಕಂಬಳ ಸೀನ್ ಇನ್ನು ಚೆನ್ನಾಗಿ ಮಾಡ್ಬೇಕಿತ್ತು. ಬಾಡಿ ಫಿಟ್ ಆಗಿಬೇಕಿತ್ತು ಅಂತಲೂ ಮತ್ಯಾರೋ ಹೇಳಿದ್ದಾರೆ.
ಚಿತ್ರದ ಈ ಒಂದು ಮೇಕಿಂಗ್ ವಿಡಿಯೋ ನೋಡಿದವರಲ್ಲಿ ಕರಾವಳಿ ಚಿತ್ರ ನೋಡಿದವರು ಇದ್ದಾರೆ. ಹಾಗಾಗಿಯೇ ಅದ್ಯಾರೋ ಚಿತ್ರವನ್ನ ‘ನಾವು ನೋಡಿ ಆಯ್ತು’ ಅಂತಲೂ ಬರೆದಿದ್ದಾರೆ.
ಪತ್ನಿ ರಾಗಿಣಿ ಹಂಚಿಕೊಂಡ ವಿಡಿಯೋ
(ಚಿತ್ರ ಕೃಪೆ: ರಾಗಿಣಿ ಪ್ರಜ್ವಲ್ ಇನ್ಸ್ಟಾಗ್ರಾಮ್)
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗಿದೆ. ಮೊದಲ ದಿನ 70 ಲಕ್ಷ ಗ್ರಾಸ್ ಕಲೆಕ್ಷನ್ ಕೂಡ ಮಾಡಿದೆ ಅನ್ನುವ ಮಾಹಿತಿನೂ ಇದೆ. ಎರಡನೇ ದಿನಕ್ಕೆ ಈ ಚಿತ್ರದ ಸ್ಕ್ರೀನ್ ಸಂಖ್ಯೆ ಹೆಚ್ಚಾಗಿದೆ. ಅದು 25ಕ್ಕೂ ಹೆಚ್ಚು ಅನ್ನುವ ಮಾಹಿತಿನೂ ಸಿಗುತ್ತದೆ.
ಕರಾವಳಿ ಚಿತ್ರದಲ್ಲಿ ಮಹಾಬಲ ಮತ್ತು ಮಹಾವೀರ ಪಾತ್ರದ ಅಬ್ಬರವೂ ಜೋರಾಗಿದೆ. ಮಹಾಬಲ ಪಾತ್ರದಲ್ಲಿ ಹಾಸ್ಯ ನಟ ಮಿತ್ರ ಅಭಿನಯಿಸಿದ್ದಾರೆ.
ಮಹಾವೀರ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ. ಇವರ ಪಾತ್ರಗಳನ್ನ ಜನ ಹೆಚ್ಚು ಮೆಚ್ಚಿಕೊಂಡಿದ್ದಾರೆ. ಗುರುದತ್ತ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಇನ್ನುಳಿದಂತೆ ಈ ಚಿತ್ರಕ್ಕೆ ಒಳ್ಳೆ ಓಪನಿಂಗ್ ಕೂಡ ಸಿಕ್ಕಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಕೂಡ ಆಗಿದೆ ಅನ್ನುವ ಮಾಹಿತಿನೂ ಸಿಗುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka














