Last Updated:
ಟಾಕ್ಸಿಕ್ ಚಿತ್ರದ ರಿಲೀಸ್ಗೆ ಇನ್ನು ಒಂದು ತಿಂಗಳ ಮಾತ್ರ ಬಾಕಿ ಇದೆ. ಮುಂದಿನ ತಿಂಗಳು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. “Begins with a Bang” ಅನ್ನುವ ಹಾಗೆ ಈ ಚಿತ್ರದ ಹೊಸ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರ (Toxic Movie) ರಿಲೀಸ್ ಆಗುವುದಕ್ಕೆ ಬರೋಬ್ಬರಿ ಒಂದು ತಿಂಗಳು ಉಳಿದಿದೆ. ಜುಲೈ-26 ರಿಂದ ಆಗಸ್ಟ್-26ರ ಲೆಕ್ಕ ತೆಗೆದುಕೊಂಡರೆ, ಚಿತ್ರದ ರಿಲೀಸ್ಗೆ (Movie Release) ಇನ್ನು ಒಂದು ತಿಂಗಳೆ ಉಳಿದಿದೆ. ‘Begins with a Bang’ ಅನ್ನುವ ಹಾಗೆ ಈ ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಭರ್ಜರಿ ಆಗಿಯೇ ಕಾಣಿಸುತ್ತಿದ್ದಾರೆ. ರಕ್ತಸಿಕ್ತ ಕೈಗಳಲ್ಲಿ ಸಿಗರೇಟ್ ಕೂಡ ಇದೆ. ಈ ಲುಕ್ (Look) ಸೇರಿದಂತೆ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ವಿಶ್ವದಾದ್ಯಂತ ರಿಲೀಸ್ಗೆ 1 ತಿಂಗಳು ಬಾಕಿ
ಆದರೆ, ಕೈಯಗಳಲ್ಲಿ ರಕ್ತಮೆತ್ತಿಕೊಂಡಿದೆ. ಆಗ ತಾನೆ ಒಂದು ಕೊಲೆ ಮಾಡಿದಂತೆನೂ ಇದೆ. ಕಾರಣ, ರಕ್ತ ಸುರಿಯುತ್ತಲೇ ಇದೆ. ಇದರ ನಡುವೆ ಕೈಯಲ್ಲಿ ಸಿಗರೇಟ್ ಹಿಡಿದು ಸೇದುವ ಶೈಲಿ ಗಮನ ಸೆಳೆಯುತ್ತದೆ.
ಟಾಕ್ಸಿಕ್ Begins with a Bang ಅನ್ನುವ ಹಾಗೆ ಈ ಪೋಸ್ಟರ್ ಹೊರ ಬಂದಿದೆ. ಈ ಒಂದು ಪೋಸ್ಟರ್ ಜುಲೈ-26 ರಂದು ರಿಲೀಸ್ ಆಗಿದೆ. ಇಲ್ಲಿಂದ ಟಾಕ್ಸಿಕ್ ರಿಲೀಸ್ಗೆ ಬರೋಬ್ಬರಿ ಒಂದು ತಿಂಗಳು ಉಳಿದಿದೆ ನೋಡಿ.
ಈ ಟಾಕ್ಸಿಕ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆಯಾ ಭಾಷೆಯಲ್ಲಿ ಇದು ಡಬ್ ಆಗುತ್ತದೆ. ಡಬ್ ಆಗಿಯೇ ಆಗಸ್ಟ್-26 ರಂದು ಇದು ತೆರೆಗೂ ಬರ್ತಿದೆ.
ಗೀತು ಮೋಹನ್ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಗೀತು ಹಾಗೂ ಯಶ್ ಈ ಚಿತ್ರಕ್ಕೆ ಕತೆ ಮಾಡಿದ್ದಾರೆ. ಬಹು ಕೋಟಿ ವೆಚ್ಚದಲ್ಲಿ ಇದು ತಯಾರಾಗಿದೆ. ಯಶ್ ಹಾಗೂ ಕೆವಿಎನ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.
ಆಗಸ್ಟ್-26 ರಂದು ರಿಲೀಸ್
ಟಾಕ್ಸಿಕ್ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಆದರೆ, ಈ ಚಿತ್ರದ ಕೆಲವು ಹಾಡುಗಳನ್ನ ನವ ಸಂಗೀತ ನಿರ್ದೇಶಕರು ಕಂಪೋಸ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಇನ್ನು ಹಲವು ಕಲಾವಿದೆಯರು ಅಭಿನಯಿಸಿದ್ದಾರೆ. ಇವರ ಈ ಚಿತ್ರದ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 26, 2026 12:42 PM IST














