Vaibhav Sooryavanshi: ಕೇವಲ 20 ರನ್ ಗಳಿಸಿ ಬಿಗ್ ರೆಕಾರ್ಡ್! ಜಯವರ್ಧನೆ ದಾಖಲೆ ಮುರಿದ ಸೂರ್ಯವಂಶಿ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 20 ರನ್‌ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಿಂದ ಸೂರ್ಯವಂಶಿ ಶ್ರೀಲಂಕಾದ ದಿಗ್ಗಜರ ಆಟಗಾರನ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ತಲುಪಿದರು.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಜಿಂಬಾಬ್ವೆ (Zimbabwe) ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ(India)ಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಅವರು ದೊಡ್ಡ ಸ್ಕೋರ್ ಮಾಡಲಿಲ್ಲ. ಕೇವಲ 9 ಎಸೆತಗಳಲ್ಲಿ 20 ರನ್ ಹೊಡೆದು ಔಟಾದರು. ದೊಡ್ಡ ಇನ್ನಿಂಗ್ಸ್ ಆಡದಿದ್ದರೂ, ಈ ಸಣ್ಣ ಇನ್ನಿಂಗ್ಸ್‌ನಿಂದಲೇ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌(Cricket)ನಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಿದರು. ಶ್ರೀಲಂಕಾದ ಬ್ಯಾಟಿಂಗ್ ದಿಗ್ಗಜ ಮಹೇಲಾ ಜಯವರ್ಧನೆ (Mahela Jayawardene) ಅವರ ದಾಖಲೆಯನ್ನು ಮುರಿದು ವಿಶೇಷ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದರು. 

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದರು. ಅವರು ಕೇವಲ 9 ಎಸೆತಗಳಲ್ಲಿ 1 ಸಿಕ್ಸ್ ಮತ್ತು 3 ಬೌಂಡರಿಗಳೊಂದಿಗೆ 20 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 222.22 ಆಗಿತ್ತು. ಪುಲ್ ಶಾಟ್ ಹೊಡೆಯಲು ಪ್ರಯತ್ನಿಸುತ್ತಿದ್ದಾಗ ಅವರು ಕ್ಯಾಚ್ ಔಟಾದರು.

ಜಯವರ್ಧನೆ ಮುರಿದ ವೈಭವ್!

ಈ ಇನ್ನಿಂಗ್ಸ್ ವೈಭವ್ ಸೂರ್ಯವಂಶಿ ಅವರಿಗೆ ದೊಡ್ಡ ದಾಖಲೆಯನ್ನು ತಂದುಕೊಟ್ಟಿದೆ. ಇದರೊಂದಿಗೆ ಅವರು ಮಹೇಲಾ ಜಯವರ್ಧನೆ ಅವರ ದಾಖಲೆಯನ್ನು ಮುರಿದರು. ಈಗ ಟಿ20ಐ ಕ್ರಿಕೆಟ್‌ನ ಮೊದಲ 5 ಪಂದ್ಯಗಳಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಟಾಪ್ 5 ಬ್ಯಾಟರ್​​ಗಳ ಪಟ್ಟಿಯಲ್ಲಿ ವೈಭವ್ ಎರಡನೇ ಸ್ಥಾನಕ್ಕೆ ಬಂದಿದ್ದಾರೆ. ಮಹೇಲಾ ಅವರು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಮೊದಲ ಸ್ಥಾನದಲ್ಲಿ ಯಾರು?

ವೈಭವ್ ಸೂರ್ಯವಂಶಿ ತಮ್ಮ ಮೊದಲ ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಂದು ಅರ್ಧಶತಕ ಸೇರಿ 112 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 211.32 ಇದೆ. ಇದರಿಂದ ಅವರು ಮಹೇಲಾ ಜಯವರ್ಧನೆಯ 201.82 ಸ್ಟ್ರೈಕ್ ರೇಟ್ ದಾಖಲೆಯನ್ನು ಮೀರಿಸಿ, ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

ಭಾರತದ ಮಾಜಿ ಸ್ಫೋಟಕ ಆಲ್‌ರೌಂಡರ್ ಯುವರಾಜ್ ಸಿಂಗ್ ಈ ವಿಶೇಷ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಯುವರಾಜ್ ತಮ್ಮ ಮೊದಲ ಐದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 235.09 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ. ಈ ದಾಖಲೆಯನ್ನು ಅವರು ಇನ್ನೂ ಹೊಂದಿದ್ದಾರೆ.

ಮೊದಲ 5 ಟಿ20ಐಗಳ ನಂತರ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರು

  • ಯುವರಾಜ್ ಸಿಂಗ್ (ಭಾರತ) – 235.09
  • ವೈಭವ್ ಸೂರ್ಯವಂಶಿ (ಭಾರತ) – 211.32
  • ಮಹೇಲ ಜಯವರ್ಧನೆ (ಶ್ರೀಲಂಕಾ) – 201.82
  • ಮೊಹಮ್ಮದ್ ಅಶ್ರಫುಲ್ (ಬಾಂಗ್ಲಾದೇಶ) – 201.67
  • ರಿಚರ್ಡ್ ಲೆವಿ (ದಕ್ಷಿಣ ಆಫ್ರಿಕಾ) – 200.00



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed