Last Updated:
ವೈಭವ್ ಸೂರ್ಯವಂಶಿ ಈಗ ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿ ಆಡುತ್ತಿದ್ದಾರೆ. ಇದರ ನಡುವೆ ಆರ್ಆರ್ ಹಂಚಿಕೊಂಡಿರುವ ನೆಟ್ಸ್ ಸೆಷನ್ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20ಐ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಗಳಿಸಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ಸೂರ್ಯವಂಶಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಜಿಂಬಾಬ್ವೆಗೆ ಬಂದ ನಂತರ ಅವರು ಉತ್ತಮ ಪ್ರದರ್ಶನ ನೀಡಿದರು. ಈಗ ರಾಜಸ್ಥಾನ್ ರಾಯಲ್ಸ್ ತಂಡದ ನೆಟ್ ಸೆಷನ್ನ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರಿಗೆ 36 ಎಸೆತಗಳಲ್ಲಿ 80 ರನ್ ಗಳಿಸುವ ಸವಾಲು ಹಾಕಲಾಗಿತ್ತು. ಆದರೆ, 29 ಬಾಲ್ಗಳಲ್ಲೇ ಶತಕ ತಲುಪಿದ್ದಾರೆ. ಈ ವಿಡಿಯೀ ನೋಡಿದ ಕ್ರಿಕೆಟ್ ಅಭಿಮಾನಿಗಳು ವೈಭವ್ ಬ್ಯಾಟಿಂಗ್ ಅನ್ನು ಹೊಗಳುತ್ತಿದ್ದಾರೆ.
ವೈಭವ್ ಸೂರ್ಯವಂಶಿ ತಮ್ಮ ಬಿಡುವಿನ ವೇಳೆಯಲ್ಲಿ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್ನಲ್ಲಿ ಅಭ್ಯಾಸ ಮಾಡುತ್ತಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. ರಾಜಸ್ಥಾನ್ ರಾಯಲ್ಸ್ನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು ವೈಭವ್ಗೆ 36 ಬಾಲ್ಗಳಲ್ಲಿ 80 ರನ್ ತೆಗೆಯಲು ಸವಾಲು ಹಾಕಿದರು. ವೈಭವ್ ಮೊದಲ ಬಾಲ್ನಿಂದಲೇ ಬೌಂಡರಿ-ಸಿಕ್ಸರ್ ಹೊಡೆಯಲು ಪ್ರಾರಂಭಿಸಿದರು.
ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿ ಇತಿಹಾಸ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅರ್ಧಶತಕ ಹೊಡೆದ ಅತ್ಯಂತ ಕಿರಿಯ ಬ್ಯಾಟರ್ ಆದರು. ಅವರಿಗೆ ಆಗ 15 ವರ್ಷ 118 ದಿನಗಳು. ಈ ಮೂಲಕ ಶಾಹಿದ್ ಅಫ್ರಿದಿ, ಸಚಿನ್ ತೆಂಡೂಲ್ಕರ್ ಮುಂತಾದವರ ದಾಖಲೆಯನ್ನು ಬ್ರೇಕ್ ಮಾಡಿದರು.
ವೈಭವ್ ಸೂರ್ಯವಂಶಿ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಚೆನ್ನಾಗಿ ಆಡಿದ್ದಾರೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20ಐ ಪಂದ್ಯ ಈ ಮೈದಾನದಲ್ಲೇ ನಡೆಯಲಿದೆ. ಅವರು ಟಿ20ಐಯಲ್ಲಿ ಮೊದಲ ಶತಕ ಹೊಡೆಯುವ ಮುನ್ನ, ಅಂಡರ್-19 ವಿಶ್ವಕಪ್ನಲ್ಲಿ ಇದೇ ಮೈದಾನದಲ್ಲಿ 175 ರನ್ ಗಳಿಸಿದ್ದರು. ವೈಭವ್ ಈ ಮೈದಾನವನ್ನು ತುಂಬಾ ಇಷ್ಟಪಡುತ್ತಾರೆ. ಇಲ್ಲಿ ಮತ್ತೆ ದೊಡ್ಡ ಇನ್ನಿಂಗ್ಸ್ ಆಡಬಹುದು.














