Rising Bharat Summit: ನೀಟ್ ನಿಷೇಧಿಸಿ, ಮೆಡಿಕಲ್ ಸೀಟ್ ರಾಜ್ಯಗಳಿಗೆ ಬಿಟ್ಟುಕೊಡಿ! ರೈಸಿಂಗ್ ಭಾರತ್‌ನಲ್ಲಿ ತಮಿಳುನಾಡು ಸಚಿವರ ಆಗ್ರಹ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಟಿವಿಕೆ ಸಚಿವ ಡಾ. ಕೆ.ಜಿ. ಅರುಣ್‌ರಾಜ್


Last Updated:

ದೆಹಲಿ ಸೇರಿ ದೇಶದಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಲೀಗ್ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು ಎಂದು ಹೇಳಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ನೀಟ್ ಪರೀಕ್ಷೆಯನ್ನು ನಿಷೇಧಿಸುವಂತೆ ತಮಿಳುನಾಡು ಸಚಿವರ ಆಗ್ರಹಿಸಿದ್ದಾರೆ.

ಟಿವಿಕೆ ಸಚಿವ ಡಾ. ಕೆ.ಜಿ. ಅರುಣ್‌ರಾಜ್
ಟಿವಿಕೆ ಸಚಿವ ಡಾ. ಕೆ.ಜಿ. ಅರುಣ್‌ರಾಜ್

ತಮಿಳುನಾಡಿನ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಜಿ. ಅರುಣ್‌ರಾಜ್ (Dr. K.G. Arunraj) ಅವರು ಶುಕ್ರವಾರ ನೀಟ್ (NEET) ಪರೀಕ್ಷೆಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ಕೇಂದ್ರದ ನಿಯಂತ್ರಣದ ಬದಲು ರಾಜ್ಯ ಸರ್ಕಾರಗಳೇ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ನ್ಯೂಸ್ 18 ರೈಸಿಂಗ್ ಭಾರತ್ ಸಮ್ಮೇಳನ (Rising Bharat Summit)ದಲ್ಲಿ ಸಚಿವ ಡಾ. ಕೆ.ಜಿ. ಅರುಣ್‌ರಾಜ್ ಅವರು ನೀಟ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ.

ರೈಸಿಂಗ್ ಭಾರತ್ ಸಮ್ಮೇಳನದಲ್ಲಿ ಮಾತನಾಡುತ್ತ, ಚುನಾವಣೆಗೂ ಮೊದಲೇ ತಮಿಳುನಾಡು ತನ್ನ ನಿಲುವನ್ನು ಕಾಪಾಡಿಕೊಂಡಿದೆ. ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಒಂದೇ ಪ್ರವೇಶ ಪರೀಕ್ಷೆ ನಡೆಸುವುದು ಕಷ್ಟ ಎಂದು ಸಚಿವ ಡಾ. ಕೆ.ಜಿ. ಅರುಣ್‌ರಾಜ್ ಒತ್ತಿ ಹೇಳಿದ್ದಾರೆ.

ಭಾರತ ಒಂದು ಫೆಡರಲ್ ಮತ್ತು ದೊಡ್ಡ ದೇಶ. ನಮ್ಮ ಪಕ್ಷವು ಚುನಾವಣೆಗೆ ಮುಂಚೆಯೇ ಆರೋಗ್ಯ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣವನ್ನು ರಾಜ್ಯ ಮಟ್ಟಕ್ಕೆ ಕೊಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ದೇಶದಾದ್ಯಂತ ಒಂದೇ ಪರೀಕ್ಷೆ ನಡೆಸಬೇಕು ಎನ್ನುವ ಕೇಂದ್ರ ಸರ್ಕಾರದ ಒತ್ತಾಯವೇಕೆ? ಎಂದು ಸಚಿವ ಡಾ. ಕೆ.ಜಿ. ಅರುಣ್‌ರಾಜ್ ಪ್ರಶ್ನಿಸಿದ್ದಾರೆ.

ನೀಟ್ ವಿರುದ್ಧ ತಮಿಳುನಾಡಿನ ಸ್ಥಿರ ನಿಲುವು

ತಮಿಳುನಾಡು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶವನ್ನು ಒಂದೇ ರಾಷ್ಟ್ರೀಯ ಪರೀಕ್ಷೆಯಿಂದ ನಿರ್ಧರಿಸಬಾರದು. ಅದನ್ನು ರಾಜ್ಯಗಳೇ ನಿರ್ಧರಿಸಬೇಕು. ಆದ್ದರಿಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣವನ್ನು ರಾಜ್ಯದ ವ್ಯಾಪ್ತಿಗೆ ತರಬೇಕು ಎಂದು ತಮಿಳುನಾಡು ಸರ್ಕಾರ ಹೇಳುತ್ತಿದೆ.

ಇತ್ತೀಚೆಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಕೂಡ ನೀಟ್ ವಿರುದ್ಧ ತಮ್ಮ ಸ್ಪಷ್ಟ ನಿಲುವನ್ನು ಹೇಳಿದ್ದಾರೆ. ಜುಲೈ 22ರಂದು ನೀಟ್ ಅಕ್ರಮಗಳ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗಳಿಗೆ ವಿಜಯ್ ಬೆಂಬಲ ನೀಡಿದರು. ದೆಹಲಿಯಲ್ಲಿ ನಡೆದ ಆ ಪ್ರತಿಭಟನೆಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸಿದ್ದನ್ನು ಅವರು ಟೀಕಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed