Actress: ‘ಬೆತ್ತಲಾಗಲ್ಲ ಅಂದಿದ್ದಕ್ಕೆ ಆ ಖ್ಯಾತ ನಿರ್ದೇಶಕನ ಸಿನಿಮಾ ಆಫರ್ ಕೈತಪ್ಪಿತು!’ ಬಾಲಿವುಡ್ ನಟಿ ಶಾಕಿಂಗ್ ಸ್ಟೇಟ್‌ಮೆಂಟ್ | | ACTPnews

ತೇಜಸ್ವಿನಿ


Last Updated:

ಸಂದರ್ಶನದಲ್ಲಿ ಮಾತನಾಡಿದ ತೇಜಸ್ವಿನಿ, ತಮ್ಮ ಪಾತ್ರದಲ್ಲಿ ಬೆತ್ತಲಾಗಿ ಕಾಣಿಸಿಕೊಳ್ಳುವ ದೃಶ್ಯವಿದೆ ಎಂಬುದು ತಿಳಿದ ಕೂಡಲೇ ಆ ಅವಕಾಶವನ್ನು ನಿರಾಕರಿಸಿದ್ದಾಗಿ ಹೇಳಿದ್ದಾರೆ.

ತೇಜಸ್ವಿನಿ
ತೇಜಸ್ವಿನಿ

ಅನುರಾಗ್ ಕಶ್ಯಪ್ (Anurag Kashyap) ನಿರ್ದೇಶನದ ಬಹುಚರ್ಚಿತ ಗುಲಾಲ್ (Gulal) ಸಿನಿಮಾ ಬಿಡುಗಡೆಯಾದ ಬಳಿಕ ವಿಮರ್ಶಕರಿಂದ ಮೆಚ್ಚುಗೆ ಪಡೆದು ಕಲ್ಟ್ ಕ್ಲಾಸಿಕ್ ಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಆದರೆ ಈ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಖ್ಯಾತ ನಟಿ ತೇಜಸ್ವಿನಿ ಕೊಲ್ಹಾಪುರೆ (Tejaswini Kolhapure) ತಿರಸ್ಕರಿಸಿದ್ದರು ಎಂಬ ಸಂಗತಿ ಇದೀಗ ಮತ್ತೆ ಸುದ್ದಿಯಾಗಿದೆ.

ಗುಲಾಲ್ ಸಿನಿಮಾವನ್ನು ಏಕೆ ತಿರಸ್ಕರಿಸಿದರು?

ಸಿದ್ಧಾರ್ಥ್ ಕಣ್ಣನ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ತೇಜಸ್ವಿನಿ ಕೊಲ್ಹಾಪುರೆ, ನಿರ್ದೇಶಕ ಅನುರಾಗ್ ಕಶ್ಯಪ್ ಸ್ವತಃ ಚಿತ್ರದ ಕಥೆಯನ್ನು ಓದಲು ನೀಡಿದ್ದರು ಎಂದು ಹೇಳಿದ್ದಾರೆ. ಕಥೆ ಓದಿದ ಬಳಿಕ ತಮ್ಮ ಪಾತ್ರದ ಬಗ್ಗೆ ಮಿಶ್ರ ಅಭಿಪ್ರಾಯ ಮೂಡಿತ್ತು. ಮಹಿಳಾ ಪಾತ್ರಕ್ಕೆ ನಿರೀಕ್ಷಿಸಿದಷ್ಟು ಮಹತ್ವ ಇಲ್ಲವೆಂದು ಅವರಿಗೆ ಅನಿಸಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಒಂದು ದೃಶ್ಯವೇ ಅವರನ್ನು ಸಿನಿಮಾದಿಂದ ಹಿಂದೆ ಸರಿಯುವಂತೆ ಮಾಡಿತು.

ಸಂದರ್ಶನದಲ್ಲಿ ಮಾತನಾಡಿದ ತೇಜಸ್ವಿನಿ, ತಮ್ಮ ಪಾತ್ರದಲ್ಲಿ ಬೆತ್ತಲಾಗಿ ಕಾಣಿಸಿಕೊಳ್ಳುವ ದೃಶ್ಯವಿದೆ ಎಂಬುದು ತಿಳಿದ ಕೂಡಲೇ ಆ ಅವಕಾಶವನ್ನು ನಿರಾಕರಿಸಿದ್ದಾಗಿ ಹೇಳಿದ್ದಾರೆ. ಆ ಸಮಯದಲ್ಲಿ ಅವರು ಅನುರಾಗ್ ಕಶ್ಯಪ್ ಅವರೊಂದಿಗೆ ನೇರವಾಗಿ ಮಾತನಾಡಿ, ನಾನು ಪರದೆಯ ಮೇಲೆ ಬೆತ್ತಲಾಗಿ ನಟಿಸುವುದಿಲ್ಲ. ಇದು ಹಿಂದಿ ಸಿನಿಮಾ. ನಾನು ಹೀಗೆ ಮಾಡಿದರೆ ಮನೆಯವರೇ ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ.

ಹಾಗೆಯೇ ಬೆತ್ತಲೆ ದೃಶ್ಯ ಮಾತ್ರವಲ್ಲದೆ, ಆ ಪಾತ್ರಕ್ಕೆ ಚಿತ್ರದಲ್ಲಿ ನಿರೀಕ್ಷಿಸಿದಷ್ಟು ಪ್ರಾಮುಖ್ಯತೆ ಇರಲಿಲ್ಲ ಎಂಬ ಭಾವನೆಯೂ ಅವರ ನಿರ್ಧಾರಕ್ಕೆ ಕಾರಣವಾಗಿತ್ತು. ಒಂದು ಪಾತ್ರವನ್ನು ಆಯ್ಕೆ ಮಾಡುವಾಗ ಅದರ ಕಥೆಯಲ್ಲಿನ ಸ್ಥಾನ ಹಾಗೂ ಪಾತ್ರದ ಪ್ರಭಾವವೂ ಮುಖ್ಯವಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ತೇಜಸ್ವಿನಿ ತಿರಸ್ಕರಿಸಿದ ಬಳಿಕ ಆ ಪಾತ್ರವನ್ನು ಮಾಡೆಲ್ ಮತ್ತು ನಟಿ ಜೆಸ್ಸಿ ರಾಂಧವಾ ನಿರ್ವಹಿಸಿದರು. ಸಿನಿಮಾ ಬಿಡುಗಡೆಯಾದ ನಂತರ ಆ ಪಾತ್ರವನ್ನು ನೋಡಿದಾಗ ತಮಗೆ ಮತ್ತೊಂದು ಅಚ್ಚರಿ ಕಾದಿತ್ತು ಎಂದು ತೇಜಸ್ವಿನಿ ಹೇಳಿದ್ದಾರೆ.

ಜೆಸ್ಸಿ ಬಾಡಿಸೂಟ್ ಬಳಸಿ ದೃಶ್ಯವನ್ನು ಚಿತ್ರೀಕರಿಸಿರುವ ವಿಚಾರ ತಿಳಿದ ಬಳಿಕ ತಮಗೆ ಬೇಸರವಾಯಿತು ಎಂದು ತೇಜಸ್ವಿನಿ ಒಪ್ಪಿಕೊಂಡಿದ್ದಾರೆ. ಆ ವಿಷಯ ಮೊದಲೇ ಗೊತ್ತಿದ್ದರೆ ನಾನೂ ಬಾಡಿಸೂಟ್ ಧರಿಸಿ ಆ ಪಾತ್ರವನ್ನು ಮಾಡಬಹುದಿತ್ತಲ್ಲಾ ಎಂದು ನಂತರ ಅನಿಸಿತು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ 2009ರಲ್ಲಿ ಬಿಡುಗಡೆಯಾದ ‘ಗುಲಾಲ್’ ಸಿನಿಮಾ ಇಂದಿಗೂ ಸಿನಿಪ್ರಿಯರ ನಡುವೆ ಚರ್ಚೆಯಲ್ಲಿರುವ ಚಿತ್ರವಾಗಿದೆ. ಇದೀಗ ಹಲವು ವರ್ಷಗಳ ನಂತರ ತೇಜಸ್ವಿನಿ ಕೊಲ್ಹಾಪುರೆ ತಮ್ಮ ನಿರ್ಧಾರದ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿರುವುದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಸಿನಿಮಾ ಅವಕಾಶ ಕೈಬಿಟ್ಟ ಬಗ್ಗೆ ಅವರಿಗೆ ನಂತರ ಬೇಸರವಾಗಿದ್ದರೂ, ಆ ಸಮಯದಲ್ಲಿ ತಮ್ಮ ವೈಯಕ್ತಿಕ ನಿಲುವಿಗೆ ಆದ್ಯತೆ ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed