DK Shivakumar-Vijay: ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿಗಳ ಮಹತ್ವದ ಮೀಟಿಂಗ್​ಗೆ ಡೇಟ್ ಫಿಕ್ಸ್​! ‘ದಳಪತಿ’ ಪ್ಲಾನ್ ಏನು? | | ACTPnews

News18


Last Updated:

ಕರ್ನಾಟಕ ಸಿಎಂ ಡಿಕೆ ಶಿವಕುಮಾ‌ರ್ ಮತ್ತು ತಮಿಳುನಾಡು ಸಿಎಂ ವಿಜಯ್ ನಡುವಿನ ಸಭೆ ಭಾರೀ ಕುತೂಹಲ ಮೂಡಿಸಿದೆ. ಭೇಟಿ ಹಿಂದಿನ ದಳಪತಿಯ ಮಾಸ್ಟರ್​ ಪ್ಲಾನ್​ ಏನು?

News18
News18

ಬೆಂಗಳೂರು (ಜು.24): ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ಕಿಚ್ಚು ಇಂದು-ನಿನ್ನೆಯದ್ದಲ್ಲ. ಹಲವು ದಶಕಗಳಿಂದ ಈ ವಿವಾದ ಮುಂದುವರೆದುಕೊಂಡು ಬಂದಿದೆ. ಇದರ ನಡುವೆ ಮೇಕೆದಾಟು ಯೋಜನೆಗೂ ತಮಿಳುನಾಡು ಸರ್ಕಾರ (Tamilnadu Government) ಅಡ್ಡಗಾಲು ಹಾಕ್ತಿದ್ದು, ಕನ್ನಡಿಗರನ್ನ ಮತ್ತಷ್ಟು ಕೆರಳಿಸುತ್ತಿದೆ. ಇದರ ನಡುವೆ ಕರ್ನಾಟಕ ಸಿಎಂ ಭೇಟಿಗೆ ತಮಿಳುನಾಡು ಸಿಎಂ ಸಮಯ ಕೇಳಿ ಪತ್ರ ಬರೆದಿದ್ದು, ಇದೀಗ ಡಿಕೆ ಶಿವಕುಮಾರ್​​ ಅವರು ವಿಜಯ್ (Vijay)​ ಭೇಟಿಗೆ ಡೇಟ್ ಫಿಕ್ಸ್ ಮಾಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಕರ್ನಾಟಕ ಹಾಗೂ ತಮಿಳುನಾಡು ಸಿಎಂ ಭೇಟಿ ಹಿಂದಿನ ಸೀಕ್ರೆಟ್ ಏನು? ದಳಪತಿಯ ಮಾಸ್ಟರ್ ಪ್ಲಾನ್​ ಏನು?

ಡಿಕೆ ಶಿವಕುಮಾರ್​, ವಿಜಯ್ ಭೇಟಿಗೆ ಡೇಟ್ ಫಿಕ್ಸ್​!

ಕಾವೇರಿ ನದಿ ನೀರು, ಮೇಕೆದಾಟು ಯೋಜನೆ ಸೇರಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿಚಾರಗಳ ಕುರಿತು ಚರ್ಚೆ ನಡೆಸಲು ತಮಿಳುನಾಡು ಸಿಎಂ ವಿಜಯ್​ ಕರ್ನಾಟಕಕ್ಕೆ ಬರ್ತಿದ್ದಾರೆ. ಆಗಸ್ಟ್​ 3 ರಂದು ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಮಹತ್ವದ ಮೀಟಿಂಗ್ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ.

ಡಿಕೆಶಿ ಭೇಟಿಗಾಗಿ ವಿಜಯ್ ಬರೆದಿದ್ರು ಪತ್ರ

ಕಳೆದೊಂದು ವಾರದ ಹಿಂದೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲು ಹಾಗೂ ಕರ್ನಾಟಕ-ತಮಿಳುನಾಡು ನಡುವಿನ ವಿಚಾರಗಳ ಕುರಿತು ಚರ್ಚಿಸಲು ದಿನಾಂಕ ನಿಗದಿ ಮಾಡುವಂತೆ ತಮಿಳುನಾಡು ಡಿ.ಕೆ ಶಿವಕುಮಾರ್ ಅವರಿಗೆ ವಿಜಯ್​ ಪತ್ರ ಬರೆದಿದ್ದರು. ಆ ಪತ್ರಕ್ಕೆ ಉತ್ತರಿಸಿರುವ ಡಿ.ಕೆ. ಶಿವಕುಮಾರ್, ಆಗಸ್ಟ್​​ 3ಕ್ಕೆ ನೀವು ಬೆಂಗಳೂರಿಗೆ ಬರಹುದು ಮತ್ತು ನನ್ನನ್ನು ಭೇಟಿಯಾಗಬಹುದು ಎಂದು ಮರು ಪತ್ರದ ಬರೆದಿದ್ದಾರೆ.

ವಿಜಯ್​-ಡಿಕೆಶಿ ಮಹತ್ವದ ಸಭೆ

ಡಿಕೆ ಶಿವಕುಮಾರ್​ ಅವರು ಭೇಟಿಗೆ ದಿನಾಂಕ ತಿಳಿಸಿ ಪತ್ರ ಬರೆದಿದ್ದು, ಈ ಪತ್ರಕ್ಕೆ ವಿಜಯ್‌ ಅವರಿಂದ ಇನ್ನಷ್ಟೇ ಉತ್ತರ ಬರಬೇಕಿದೆ. ಒಣದು ವೇಳೆ ವಿಜಯ್ ಬೆಂಗಳೂರಿಗೆ ಬರಲು ಸಮ್ಮತಿಸಿದ್ರೆ, ಆ.3ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿ ನಡುವೆ ಮಹತ್ವದ ಸಭೆ ನಡೆಯಲಿದೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಕಾವೇರಿಗಾಗಿ ಪಟ್ಟು ಹಿಡೀತಾರಾ ದಳಪತಿ! 

ಕರ್ನಾಟಕ ಸಿಎಂ ಡಿಕೆ ಶಿವಕುಮಾ‌ರ್ ಮತ್ತು ತಮಿಳುನಾಡು ಸಿಎಂ ವಿಜಯ್ ನಡುವಿನ ಸಭೆ ಭಾರೀ ಕುತೂಹಲ ಮೂಡಿಸಿದೆ. ಕಾವೇರಿ ನದಿ ನೀರು ಹಂಚಿಕೆ, ಪ್ರಸ್ತುತ ಮಳೆ ಕೊರತೆ, ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ಮಾಡದಿರುವ ಬಗ್ಗೆ ವಿಜಯ್ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕಾವೇರಿ ನೀರಿಗಾಗಿ ವಿಜಯ್​ ಪಟ್ಟು ಹಿಡಿದ್ರೆ ಮತ್ತೆ ಕಾವೇರಿ ಕಿಚ್ಚು ಜೋರಾಗುವ ಸಾಧ್ಯತೆ ಇದೆ.

ಮೇಕೆದಾಟು ಬಗ್ಗೆಯೂ ಚರ್ಚೆ ಸಾಧ್ಯತೆ

ಮೇಕೆದಾಟು ಯೋಜನೆ ಅನುಷ್ಠಾನದ ಕುರಿತಂತೆ ಚರ್ಚೆ ನಡೆಯೋ ಸಾಧ್ಯತೆ ಹೆಚ್ಚಿದೆ. ಮೇಕೆದಾಟು ಯೋಜನೆಗೆ ಬಿಡೋದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದ್ದು, ಇದೀಗ ಮುಖ್ಯಮಂತ್ರಿ ಚರ್ಚೆ ಮಹತ್ವ ಪಡೆದುಕೊಂಡಿದೆ. ಇವುಗಳ  ಜೊತೆಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಅನುಷ್ಠಾನಗೊಳಿಸಬಹುದಾದ ಯೋಜನೆಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed