The End Of Oak Street Movie: ಡೈನೋಸಾರ್‌ಗಳ ಅಟ್ಟಹಾಸಕ್ಕೆ ಹೇಗಿತ್ತು ಗೊತ್ತಾ? ‘ದಿ ಎಂಡ್ ಆಫ್ ಓಕ್ ಸ್ಟ್ರೀಟ್’ ನಲ್ಲಿ ಏನೇನೋ ಆಗ್ತಿದೆ ನೋಡಿ! | | ACTPnews

ದಿ ಎಂಡ್ ಆಫ್ ಓಕ್ ಸ್ಟ್ರೀಟ್' ಅಲ್ಲಿ ಏನೇನೋ ಆಗ್ತಿದೆ ನೋಡಿ!


Last Updated:

ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಟ್ರೈಲರ್ ಕೂಡ ಹೊರ ಬಂದಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ದಿ ಎಂಡ್ ಆಫ್ ಓಕ್ ಸ್ಟ್ರೀಟ್' ಅಲ್ಲಿ ಏನೇನೋ ಆಗ್ತಿದೆ ನೋಡಿ!
ದಿ ಎಂಡ್ ಆಫ್ ಓಕ್ ಸ್ಟ್ರೀಟ್’ ಅಲ್ಲಿ ಏನೇನೋ ಆಗ್ತಿದೆ ನೋಡಿ!

ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಚಿತ್ರ (The End of Oak Street Movie) ರೆಡಿ ಆಗಿದೆ. ಈ ಸಿನಿಮಾದ ಟ್ರೈಲರ್ (Movie Trailer) ಕೂಡ ರೋಚಕವಾಗಿದೆ. ಇಡೀ ಓಕ್ ಸ್ಟ್ರೀಟ್‌ (Oak Street) ಬೇರೆ ಕಡೆಗೆ ಹೋಗಿದೆ. ಅಂದ್ರೆ, ಡೈನೋಸಾರ್‌ (Dinosaurs) ಇರೋ ಜಾಗಕ್ಕೆ ಹೋಗಿ ಬಿಟ್ಟಿದೆ. ಇದರಿಂದ ಮನೆಯಲ್ಲಿರೋ ಜನರಿಗೆ ಆತಂಕವು ಶುರು ಆಗಿದೆ. ಆದರೆ, ಇದೆಲ್ಲ ಹೇಗೆ ಆಯಿತು ಅನ್ನುವ ಪ್ರಶ್ನೆನೂ ಇದೆ. ಅದ್ಯಾವಾಗಲೋ ಭೂಮಿ ಮೇಲೆ ಇದ್ದ ಪ್ರಾಣಿಗಳೆಲ್ಲ ಬಂದು ಜೀವ ಹಿಂಡುತ್ತಿರುವುದು ಕೂಡ ಇವರಿಗೆ ಸಹಿಸಿಕೊಳ್ಳಲು ಆಗ್ತಾನೇ ಇಲ್ಲ. ಆ ರೀತಿಯ ಈ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿಯೇ ರಿವೀಲ್ ಆಗಿದೆ. ಇಂಗ್ಲಿಷ್ ಅಲ್ಲದೆ ದಕ್ಷಿಣ ಮತ್ತು ಹಿಂದಿ ಭಾಷೆಯಲ್ಲೂ ಇದು ರಿಲೀಸ್ ಆಗುತ್ತಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಯಾಕ್ ಹಿಂಗೆ ಆಗ್ತಿದೆ

ಒಂದೊಮ್ಮೆ ನಿಗೂಢವದ ಕಾಸ್ಮಿಕ್ ಘಟನೆ ಒಂದು ನಡೆದು ಹೋಗುತ್ತದೆ. ಇದರಿಂದ ಇಡೀ ಓಕ್ ಸ್ಟ್ರೀಟ್ ಗಾಯಬ್ ಆಗುತ್ತದೆ. ಬೇರೆ ಜಾಗದಲ್ಲಿಯೇ ಇದು ಪ್ರತ್ಯಕ್ಷ ಕೂಡ ಆಗುತ್ತದೆ.

The End of Oak Street Movie Release Date Announce

ಹಾಲಿವುಡ್ ದೊಡ್ಡ ಸ್ಟಾರ್ಸ್

ಆದರೆ, ಇದರಿಂದ ಓಕ್ ಸ್ಟ್ರೀಟ್ ಅಲ್ಲಿರೋ ಜನಕ್ಕೆ ಗಾಬರಿನು ಆಗುತ್ತದೆ. ಈ ಭಯದಲ್ಲಿಯೇ ಇರೋ ಜನಕ್ಕೆ ಡೈನೋಸಾರ್‌ಗಳ ದಾಳಿ ತಲ್ಲಣಗೊಳಿಸುತ್ತದೆ ನೋಡಿ.

ಒಂದು ಫ್ಯಾಮಿಲಿ…

ಆದರೆ, ಈ ಒಂದು ಡೈನೋಸಾರ್‌ಗಳ ಅಟ್ಟಹಾಸದಿಂದ ಓಕ್ ಸ್ಟ್ರೀಟ್‌ನ ಜನರೇ ಸತ್ತು ಹೋಗುತ್ತಾರೆ. ಆದರೂ ಈ ‘ಪ್ಲಾಟ್ ಫ್ಯಾಮಿಲಿ’ ಹೆಸರಿನ ಕುಟುಂಬ ಒಂದು ಉಳಿದು ಬಿಡುತ್ತದೆ.

ಆದರೆ, ಇವರು ಹೇಗೆ ಉಳಿದರು? ಮತ್ತು ಇಡೀ ಓಕ್ ಸ್ಟ್ರೀಟ್ ಮತ್ತೆ ಅದೇ ಜಾಗಕ್ಕೆ ಹೇಗೆ ಬಂತು? ಈ ಎಲ್ಲ ಕುತೂಹಲಗಳಿಗೆ ಥಿಯೇಟರ್‌ ಅಲ್ಲಿಯೇ ಉತ್ತರ ಸಿಗುತ್ತದೆ.

ಆಗಸ್ಟ್-14 ರಂದು ರಿಲೀಸ್

ಆಗಸ್ಟ್-14 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇಂಗ್ಲಿಷ್ ಅಲ್ಲಿಯೇ ತಯಾರಾದ ಈ ಚಿತ್ರ, ಬಹು ಭಾಷೆಯಲ್ಲೂ ಬರ್ತಿದೆ. ಭಾರತದ ಹಿಂದಿ ಮತ್ತು ದಕ್ಷಿಣದ ಭಾಷೆಯಲ್ಲೂ ಇದು ಡಬ್ ಆಗಿದೆ.

The End of Oak Street Movie Release Date Announce

ಆಗಸ್ಟ್-14 ರಂದು ರಿಲೀಸ್

ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಡೈರೆಕ್ಟರ್ ಯಾರು ಅಂತ ನೋಡೋದಾದರೆ, ಡೇವಿಡ್ ರಾಬರ್ಟ್ ಮಿಚೆಲ್ ಅವರು ಈ ಚಿತ್ರಕ್ಕೆ ಕತೆಯನ್ನು ಬರೆದಿದ್ದಾರೆ. ಡೈರೆಕ್ಷನ್ ಕೂಡ ಮಾಡಿದ್ದಾರೆ.

ಹಾಲಿವುಡ್ ದೊಡ್ಡ ಸ್ಟಾರ್ಸ್

ಈ ಚಿತ್ರದಲ್ಲಿ ಹಾಲಿವುಡ್‌ನ ಹೆಸರಾಂತ ಕಲಾವಿದರು ನಟಿಸಿದ್ದಾರೆ. ಹಾಗೆ ಆನ್ ಹ್ಯಾಥ್‌ವೇ ,ಇವಾನ್ ಮ್ಯಾಕ್‌ಗ್ರೆಗರ್, ಮೈಸಿ ಸ್ಟೆಲ್ಲಾ ಕ್ರಿಶ್ಚಿಯನ್ ಕಾನ್ವೆರಿ ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಟ್ರೈಲರ್ ಬಹು ಭಾಷೆಯಲ್ಲಿಯೇ ರಿಲೀಸ್ ಆಗಿದೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲೂ ರಿಲೀಸ್ ಆಗಿದೆ. ಇಂಗ್ಲಿಷ್ ಟ್ರೈಲರ್ ಕೂಡ ರಿಲೀಸ್ ಆಗಿದೆ. ಇದರ ಕೊನೆಯಲ್ಲಿ ಚಿತ್ರದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports