Last Updated:
ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೆಆರ್ಎಸ್ ಶೇ. 34.81, ಆಲಮಟ್ಟಿ ಶೇ. 82.36 ಭರ್ತಿ.
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಪ್ರಮುಖ ಜಲಾಶಯಗಳಿಗೆ ( (Reservoirs)) ನೀರಿನ (Water) ಒಳಹರಿವು ಹೆಚ್ಚಾಗಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಜಲ ಮೂಲಗಳ ಸ್ಥಿತಿಗತಿ ಹೇಗಿದೆ ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ (Level) ಮತ್ತು ಸಂಗ್ರಹದ ವಿವರಗಳು ಇಲ್ಲಿವೆ.
ಹಾರಂಗಿ ಅಣೆಕಟ್ಟು: ಶೇ. 84.78 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಮಟ್ಟ 2855.18 ಅಡಿ ತಲುಪಿದೆ. ಒಳಹರಿವು 4326 ಕ್ಯೂಸೆಕ್ ಇದೆ.
ಹೇಮಾವತಿ ಅಣೆಕಟ್ಟು: ಶೇ. 61.36 ರಷ್ಟು ತುಂಬಿದ್ದು, ಪ್ರಸ್ತುತ ನೀರಿನ ಮಟ್ಟ 2904.57 ಅಡಿ ಇದೆ.
ಕಬಿನಿ ಅಣೆಕಟ್ಟು: ಶೇ. 66.70 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಮಟ್ಟ 2272.65 ಅಡಿ ದಾಖಲಾಗಿದೆ.
ಆಲಮಟ್ಟಿ ಅಣೆಕಟ್ಟು: ರಾಜ್ಯದ ಅತಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಆಲಮಟ್ಟಿಯಲ್ಲಿ ನೀರಿನ ಮಟ್ಟ ಭರ್ತಿಯಾಗುತ್ತಿದ್ದು, ಪ್ರಸ್ತುತ ಶೇ. 82.36 (1700.27 ಅಡಿ) ತುಂಬಿದೆ. ಇಲ್ಲಿಗೆ 63792 ಕ್ಯೂಸೆಕ್ ಭಾರೀ ಒಳಹರಿವು ಹರಿದುಬರುತ್ತಿದೆ!
ತುಂಗಭದ್ರಾ ಅಣೆಕಟ್ಟು: ಶೇ. 25.00 ರಷ್ಟು ಭರ್ತಿಯಾಗಿದ್ದು, ಪ್ರಸ್ತುತ ಸಂಗ್ರಹ 26.45 ಟಿಎಂಸಿ ಇದೆ.
ಭದ್ರಾ ಅಣೆಕಟ್ಟು: ಶೇ. 48.31 ರಷ್ಟು ತುಂಬಿದ್ದು, ಪ್ರಸ್ತುತ ಮಟ್ಟ 2122.33 ಅಡಿ ತಲುಪಿದೆ.
ಹಿಡ್ಕಲ್ ಹಾಗೂ ಮಲಪ್ರಭಾ: ಹಿಡ್ಕಲ್ ಅಣೆಕಟ್ಟು ಶೇ. 48.72 ಹಾಗೂ ಮಲಪ್ರಭಾ ಅಣೆಕಟ್ಟು ಶೇ. 32.46 ರಷ್ಟು ಭರ್ತಿಯಾಗಿವೆ.
Bangalore [Bangalore],Bangalore,Karnataka
Jul 23, 2026 10:03 AM IST














