Last Updated:
ಮುಂಬೈನಲ್ಲಿ ನೀಟ್ ಆಕಾಂಕ್ಷಿಗಳಿಗೆ ಬೆಂಬಲ ಸೂಚಿಸಲು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಪೊಲೀಸರು ತಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆಯೇಷಾ ಖಾನ್ ಆರೋಪಿಸಿದ್ದಾರೆ
ನೀಟ್ ಪರೀಕ್ಷೆಗೆ ಸಂಬಂಧಿಸಿದ ಪ್ರತಿಭಟನೆಗಳ ನಡುವೆ ಬಾಲಿವುಡ್ ನಟಿ (Bollywood Actress) ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಆಯೇಷಾ ಖಾನ್ (Ayesha Khan) ಹೆಸರು ಇದೀಗ ಸುದ್ದಿಯಲ್ಲಿದೆ . ಮುಂಬೈನಲ್ಲಿ ನೀಟ್ ಆಕಾಂಕ್ಷಿಗಳಿಗೆ ಬೆಂಬಲ ಸೂಚಿಸಲು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಪೊಲೀಸರು ತಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆಯೇಷಾ ಖಾನ್ ಆರೋಪಿಸಿದ್ದಾರೆ. ಈ ಕುರಿತು ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಂಬೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಲು ಆಯೇಷಾ ಖಾನ್ ತಮ್ಮ ಕೆಲವು ಸ್ನೇಹಿತರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಜೊತೆಗೆ ಶಾಂತಿಯುತವಾಗಿ ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಪೊಲೀಸರು ತಮ್ಮನ್ನು ವಶಕ್ಕೆ ತೆಗೆದುಕೊಂಡರು ಎಂದು ನಟಿ ಆರೋಪಿಸಿದ್ದಾರೆ.
‘Dhurandhar’ fame actor Ayesha Khan was detained while taking part in a protest linked to the ongoing NEET agitation in Mumbai pic.twitter.com/3l3piJ4N74
— WION Showbiz (@WIONShowbiz) July 22, 2026
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿರುವ ಆಯೇಷಾ, ಯಾವುದೇ ಎಚ್ಚರಿಕೆ ಅಥವಾ ಸ್ಪಷ್ಟ ಕಾರಣ ನೀಡದೆ ತಮ್ಮನ್ನು ಪೊಲೀಸ್ ವಾಹನಕ್ಕೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಆಯೇಷಾ ಖಾನ್, ಹಲವು ಮಹಿಳಾ ಪೊಲೀಸರು ತಮ್ಮನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಪೊಲೀಸ್ ವ್ಯಾನ್ಗೆ ಹತ್ತಿಸಿದರು ಎಂದು ಹೇಳಿದ್ದಾರೆ.
ಆಯೇಷಾ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಪೊಲೀಸರು ತಮ್ಮನ್ನು ವಾಹನದೊಳಗೆ ಕರೆದೊಯ್ಯುತ್ತಿರುವ ದೃಶ್ಯಗಳು ಕಾಣಿಸುತ್ತವೆ.
ಶಾಂತಿಯುತವಾಗಿ ನಿಂತಿದ್ದಕ್ಕಾಗಿ ನನ್ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ನಾನು ಯಾವ ಕಾನೂನನ್ನು ಉಲ್ಲಂಘಿಸಿದ್ದೇನೆ ಎಂಬುದಕ್ಕೆ ಯಾರೂ ಉತ್ತರ ನೀಡಲಿಲ್ಲ. ರಸ್ತೆ ಬದಿಯಲ್ಲಿ ನಿಲ್ಲುವುದು ಯಾವಾಗ ಅಪರಾಧವಾಯಿತು? ಎಂದು ನಟಿ ಪ್ರಶ್ನಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಮತ್ತೊಂದು ವಿಡಿಯೊದಲ್ಲಿ ಆಯೇಷಾ ಖಾನ್ ತಮ್ಮ ಕೈಗಳು ನಡುಗುತ್ತಿವೆ ಎಂದು ಹೇಳಿ, ಯಾವುದೇ ಪ್ರತಿಭಟನೆ ಆರಂಭಿಸಿರಲಿಲ್ಲ, ಕೇವಲ ತಮ್ಮ ಸಹೋದರ ಮತ್ತು ಸ್ನೇಹಿತರ ಜೊತೆ ನಿಂತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ನಟಿ ಆಯೇಷಾ ಖಾನ್ ಬಿಗ್ ಬಾಸ್ 17 ಕಾರ್ಯಕ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ನಂತರ ಧುರಂಧರ್ ಚಿತ್ರದ ಶರಾರತ್ ಹಾಡಿನಲ್ಲಿ ಕಾಣಿಸಿಕೊಂಡು ಮತ್ತಷ್ಟು ಜನಪ್ರಿಯತೆ ಗಳಿಸಿದರು.
ಹೀಗಿರುವಾಗ ಇದೀಗ ನಟಿ ಆಯೇಷಾ ಹಂಚಿಕೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Bangalore [Bangalore],Bangalore,Karnataka














