Last Updated:
ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ BMRCL ಅರ್ಜಿ ಆಹ್ವಾನಿಸಿದೆ. ಉಪ ಪ್ರಧಾನ ವ್ಯವಸ್ಥಾಪಕ, ಸೂಪರ್ವೈಸರ್ ಹುದ್ದೆಗಳಿಗೆ ಪದವಿ/ಇಂಜಿನಿಯರಿಂಗ್, ಅನುಭವ ಕಡ್ಡಾಯ. ಕೊನೆಯ ದಿನಾಂಕ ಜುಲೈ 31, ಆಗಸ್ಟ್ 10.
ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕೆಲಸ (Job) ಮಾಡಬೇಕು ಎಂದು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಬಂಪರ್ ಆಫರ್. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅತ್ಯಕರ್ಷಕ ವೇತನ ಹಾಗೂ ಭರ್ಜರಿ ಸೌಲಭ್ಯಗಳನ್ನು ಹೊಂದಿರುವ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ (Application) ಆಹ್ವಾನಿಸಲಾಗಿದೆ.ನೀವು ಕೂಡ ಪದವಿ ಅಥವಾ ಇಂಜಿನಿಯರಿಂಗ್ ಪೂರೈಸಿದ್ದರೆ ಮತ್ತು ನಿಗದಿತ ಅನುಭವ ಹೊಂದಿದ್ದರೆ, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ
ಸೂಪರ್ವೈಸರ್ (ಆಪರೇಷನ್ ಸೇಫ್ಟಿ) – 02 ಹುದ್ದೆಗಳು: ಈ ಹುದ್ದೆಗಳಿಗೆ ಮಾಸಿಕ 50,000 ರಿಂದ 62,500 ವರೆಗೆ ಸಂಬಳ ನಿಗದಿಪಡಿಸಲಾಗಿದೆ.
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಇಂಜಿನಿಯರಿಂಗ್ ಮುಗಿಸಿರಬೇಕು. ಇದರೊಂದಿಗೆ ಕನಿಷ್ಠ 14 ವರ್ಷಗಳ ವೃತ್ತಿ ಅನುಭವವಿರಬೇಕು (ಮೆಟ್ರೋ ಅಥವಾ ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಣೆ ಮತ್ತು ಭದ್ರತಾ ವಿಭಾಗದಲ್ಲಿ ಕನಿಷ್ಠ 8 ವರ್ಷ ಅನುಭವ ಕಡ್ಡಾಯ).
ಸೂಪರ್ವೈಸರ್ ಹುದ್ದೆಗೆ: ಪದವಿ ಅಥವಾ ಇಂಜಿನಿಯರಿಂಗ್ ಜತೆಗೆ, ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಇನ್ಸ್ಪೆಕ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಮುಕ್ತ ಅನುಭವ ಹೊಂದಿರಬೇಕು.
ಸೂಪರ್ ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇ ದಿನಾಂಕ: ಆನ್ಲೈನ್ ಅರ್ಜಿ ಸಲ್ಲಿಸಿ, ಪ್ರಿಂಟ್ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 31, 2026 ರ ಸಂಜೆ 4:00 ಗಂಟೆಯೊಳಗೆ ತಲುಪಿಸಬೇಕು.
ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಕಡೇ ದಿನಾಂಕ: ಆನ್ಲೈನ್ ಅರ್ಜಿಗೆ ಆಗಸ್ಟ್ 10 ಕೊನೆಯ ದಿನವಾಗಿದ್ದು, ಪ್ರಿಂಟ್ಔಟ್ ಪ್ರತಿಯನ್ನು ಆಗಸ್ಟ್ 13, 2026 ರ ಸಂಜೆ 4:00 ಗಂಟೆಯೊಳಗೆ ಕಳುಹಿಸಬೇಕು.
https://projectrecruit.bmrc.co.in/frmApplFillTab.aspx?ND=116
ಸೂಪರ್ವೈಸರ್ (ಆಪರೇಷನ್ ಸೇಫ್ಟಿ)
https://projectrecruit.bmrc.co.in/frmApplFillTab.aspx?ND=115
ದಾಖಲೆಗಳನ್ನು ಕಳುಹಿಸಬೇಕಾದ ವಿಳಾಸ: ಜನರಲ್ ಮ್ಯಾನೇಜರ್ (HR), BMRCL, ಶಾಂತಿನಗರ, ಬೆಂಗಳೂರು.
Bangalore [Bangalore],Bangalore,Karnataka
Metro Jobs: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ, ಲಕ್ಷಾಂತರ ರೂಪಾಯಿ ಸಂಬಳದ ಈ ಹುದ್ದೆಗಳಿಗೆ ಇಂದೇ ಅಪ್ಲೈ ಮಾಡಿ!














