Artist Rakesh: ಡ್ಯಾನ್ಸ್​ ಮಾಸ್ಟರ್ ಹಾಗೂ ಕಲಾವಿದ ರಾಕೇಶ್ ಆತ್ಮಹತ್ಯೆ; ದಸರಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕ್ತಿದ್ದವನ ಜೀವನ ಅಂತ್ಯ | | ACTPnews

News18


Last Updated:

ತೀರ್ಥಹಳ್ಳಿಯ ದಸರಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕುತ್ತಿದ್ದ ಕಲಾವಿದ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ ಈ ಘಟನೆ ನಡೆದಿದೆ. 

News18
News18

ಶಿವಮೊಗ್ಗ (ಜು.22): ಡ್ಯಾನ್ಸ್​ ಮಾಸ್ಟರ್​ ಹಾಗೂ ಕಲಾವಿದ ರಾಕೇಶ್ ಮನೆಯಲ್ಲೇ​ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ ಈ ಘಟನೆ ನಡೆದಿದ್ದು, ತೀರ್ಥಹಳ್ಳಿ (Tirthahalli) ದಸರಾ ಕಾರ್ಯಕ್ರಮದಲ್ಲಿ ಹುಲಿವೇಷ ಹಾಕಿ ಹೆಜ್ಜೆ ಹಾಕುತ್ತಿದ್ದ ಕಲಾವಿದ ರಾಕೇಶ್​​, ಶಿವಮೊಗ್ಗದ ಸುತ್ತ-ಮುತ್ತ ಜನಪ್ರಿಯವಾಗಿದ್ದರು. 

 ಹುಲಿವೇಷಕ್ಕೆ ಹೆಜ್ಜೆ ಹಾಕ್ತಿದ್ದ ಕಲಾವಿದ

ತೀರ್ಥಹಳ್ಳಿಯ ದಸರಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕುತ್ತಿದ್ದ ಕಲಾವಿದ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿ ಈ ಘಟನೆ ನಡೆದಿದೆ.  ತೀರ್ಥಹಳ್ಳಿ ದಸರಾ ಕಾರ್ಯಕ್ರಮದಲ್ಲಿ ಹುಲಿವೇಷದ ಬಣ್ಣ ಹಾಕಿ ಹೆಜ್ಜೆ ಹಾಕುತ್ತಿದ್ದ ಕಲಾವಿದ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಸುತ್ತ-ಮುತ್ತಲಿನ ಗ್ರಾಮಸ್ಥರು ಸೀಬಿನಕೆರೆಗೆ ಬರ್ತಿದ್ದಾರೆ.

ಉಡುಪಿಯಲ್ಲಿ ಡಾನ್ಸ್​​ ಮಾಸ್ಟರ್​

29 ವರ್ಷದ ರಾಕೇಶ್ ದುಡುಕಿನ ನಿರ್ಧಾರ ತೆಗೆದುಕೊಂಡು ಸಾವಿಗೆ ಶರಣಾಗಿದ್ದಾರೆ. ಈತ ಉಡುಪಿಯಲ್ಲಿ ಡಾನ್ಸ್ ಮಾಸ್ಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರ್ನಾಲ್ಕು ವರ್ಷದಿಂದ ದಸರಾ ಕಾರ್ಯಕ್ರಮದಲ್ಲಿ ಹುಲಿವೇಷ ಹಾಕಿ ಹೆಜ್ಜೆ ಹಾಕುತ್ತಿದ್ದ ರಾಕೇಶ್ ಎಂದೇ ಜನಪ್ರಿಯರಾಗಿದ್ರು.

ರಾಕೇಶ್​ ಆತ್ಮಹತ್ಯೆಗೆ ಕಾರಣ ಏನು?

ತೀರ್ಥಹಳ್ಳಿಯ ಸೀಬಿನಕೆರೆಯಲ್ಲಿರೋ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡ್ಯಾನ್ಸ್​ ಮಾಸ್ಟರ್ ರಾಕೇಶ್​ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಆತ್ಮಹತ್ಯೆ ಇಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ರಾಜ್ಯ/

Artist Rakesh: ಡ್ಯಾನ್ಸ್​ ಮಾಸ್ಟರ್ ಹಾಗೂ ಕಲಾವಿದ ರಾಕೇಶ್ ಆತ್ಮಹತ್ಯೆ; ದಸರಾದಲ್ಲಿ ಹುಲಿವೇಷಕ್ಕೆ ಹೆಜ್ಜೆ ಹಾಕ್ತಿದ್ದವನ ಜೀವನ ಅಂತ್ಯ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed