Last Updated:
ಬೆಂಗಳೂರಿನ ಕುಂಬಳಗೋಡಿನಲ್ಲಿ ಜಯಮ್ಮ ಕೊಲೆ. ಸೂಟ್ಕೇಸ್ನಲ್ಲಿ ಶವ ಕೆರೆಗೆ ಎಸೆದ ಆರೋಪಿ ಅಮಿತ್ ಬಂಧನ. ಆನ್ಲೈನ್ ಬೆಟ್ಟಿಂಗ್ಗಾಗಿ ಚಿನ್ನ ದೋಚಲು ಕೊಲೆ.
ಬೆಂಗಳೂರು: ವೃದ್ಧ ಮಹಿಳೆಯನ್ನು (Women) ಕೊಲೆಗೈದು, ಆಕೆಯ ಮೃತದೇಹವನ್ನು ಸೂಟ್ಕೇಸ್ನಲ್ಲಿಟ್ಟು ಕೆರೆಗೆ ಬೀಸಾಕಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೋಡು ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಜಯಮ್ಮ ಎಂದು ಗುರುತಿಸಲಾಗಿದ್ದು, ವೃದ್ಧೆಯನ್ನು ಕೊಲೆ ಮಾಡಿ ಆರೋಪ (Crime News) ಮೇರೆಗೆ ಪೊಲೀಸರು ಆಕೆಯ ಪಕ್ಕದ ಮನೆಯ ಯುವಕನನ್ನು (Young Man) ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ 15ರ ಸಂಜೆ ವೇಳೆಗೆ ಜಯಮ್ಮ ತಮ್ಮ ಮನೆಯ ಪಕ್ಕದಲ್ಲೇ ಇದ್ದ ಮನೆಗೆ ಹೋದ ಸಂದರ್ಭದಲ್ಲಿ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ನ್ಯೂಸ್18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಯನ್ನು 21 ವರ್ಷದ ಅಮಿತ್ ಎಂದು ಗುರುತಿಸಲಾಗಿದೆ.
ಜಯಮ್ಮ ಬಳಿ ಫೋನ್ ಇರಲಿಲ್ಲ, ಹಾಗಾಗಿ ಪಕ್ಕದ ಮನೆ ನಿವಾಸಿ ಅಮಿತ್ ಬಳಿ ಹೋಗಿ ಕರೆ ಮಾಡಿಕೊಡುವಂತೆ ಜಯಮ್ಮ ಕೇಳಿದ್ದರಂತೆ. ಈ ವೇಳೆ ಚಿನ್ನದ ಆಸೆಗಾಗಿ ವೃದ್ಧೆ ಜಯಮ್ಮರ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿ, ಹಗಲು ವೇಳೆ ಸೂಟ್ಕೇಸ್ ಸಾಗಿಸಿದರೆ ಯಾರಿಗೂ ಅನುಮಾನ ಬರಲ್ಲ ಅಂತಾ ಪ್ಲಾನ್ ಮಾಡಿ ಮೃತದೇಹ ಸಾಗಾಟ ಮಾಡಿದ್ದನಂತೆ. ನಂತರ ಯಾರಿಗೂ ಅನುಮಾನ ಬಾರದಂತೆ ಅಜ್ಜಿಯ ಹುಡುಕಾಟದಲ್ಲೂ ಭಾಗವಹಿಸಿದ್ದನಂತೆ.
ಆರೋಪಿ ಆನ್ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದನಂತೆ. ಅಲ್ಲದೇ ಸಾಲ ಮಾಡಿಕೊಂಡಿದ್ದರಿಂದ ಸುಲಭವಾಗಿ ಹಣ ಗಳಿಸಲು ವೃದ್ಧೆಯನ್ನು ಕೊಲೆ ಮಾಡಿ ಚಿನ್ನ ದೋಚುವ ಪ್ಲ್ಯಾನ್ ಮಾಡಿದ್ದನಂತೆ. ಕೊಲೆ ಮಾಡಿ ಜಯಮ್ಮ ಮೈಮೇಲಿದ್ದ ಚಿನ್ನಾಭರಣ ದೋಚಿ ಮೃತದೇಹವನ್ನು ಸೂಟ್ಕೇಸ್ಗೆ ತುಂಬಿದ್ದ ಆರೋಪಿ, ಹಾಡಹಗಲೇ ಯಾರಿಗೂ ಅನುಮಾನ ಬಾರದಂತೆ ಆಟೋ ಬುಕ್ ಮಾಡಿ ಅದರಲ್ಲೇ ಸಾಗಾಟ ಮಾಡಿದ್ದನಂತೆ. ಆಟೋದಲ್ಲಿ ರಾಮೋಹಳ್ಳಿ ಕೆರೆ ಬಳಿ ಬಂದ ಆರೋಪಿ, ಮೃತದೇಹ ಬಿಸಾಡಿ ಎಸ್ಕೇಪ್ ಆಗಿದ್ದನಂತೆ. ಸದ್ಯ ಕುಂಬಳಗೋಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ವರದಿ: ಗಂಗಾಧರ ವಾಗಟ, ನ್ಯೂಸ್ 18 ಕನ್ನಡ, ಬೆಂಗಳೂರು)
ಮುಂಗಾರು ಕೈಕೊಟ್ಟ ಹಿನ್ನೆಲೆ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಬ್ಯಾಂಕ್ ನೋಟಿಸ್ಗೆ ಹೆದರಿ ಹಾವೇರಿಯಲ್ಲಿ ರೈತ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ. ತಿಮ್ಮೇನಹಳ್ಳಿ ಗ್ರಾಮದ 44 ವರ್ಷದ ಸೋಮನಗೌಡ ಮುದಿಗೌಡರ ಆತ್ಮಹತ್ಯೆಗೆ ಶರಣಾದ ರೈತ. 7 ಎಕರೆ ಜಮೀನಿನಲ್ಲಿ ರೈತ ಸೋಮನಗೌಡ ಮೆಕ್ಕೆಜೋಳ ಹಾಗೂ ಮೆಣಸಿನಕಾಯಿ ಬೆಳೆ ಬೆಳೆದಿದ್ರು. ಇದಕ್ಕಾಗಿ 10ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ರು. ಸಾಲ ಕಟ್ಟುವಂತೆ ಬ್ಯಾಂಕ್ ನೋಟಿಸ್ ಕಳುಹಿಸಿದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುತ್ತಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bangalore [Bangalore],Bangalore,Karnataka














