Sheep to Work: ಫೋಕ್ಸ್ ವ್ಯಾಗನ್ ಕಂಪನಿಯಲ್ಲಿ 100 ಕುರಿಗಳಿಗೆ ಉದ್ಯೋಗ! ಏನಿದರ ವಿಶೇಷತೆ? | ವ್ಯಾಪಾರ ಸುದ್ದಿ | ACTPnews

ಕಾರುಗಳ ಕಂಪನಿಯಲ್ಲಿ ಕುರಿಗಳಿಗೆ ಡ್ಯೂಟಿ!


Last Updated:

ಫೋಕ್ಸ್‌ವ್ಯಾಗನ್ ಪ್ಲ್ಯಾಂಟ್‌ನಲ್ಲಿ ಸೋಲಾರ್ ಪ್ಯಾನಲ್ ಕೆಳಗಿನ ಹುಲ್ಲು ನಿರ್ವಹಿಸಲು 100 ಕುರಿಗಳಿಗೆ ಉದ್ಯೋಗ ನೀಡಿದೆ. ಇದು ಪರಿಸರ ಸ್ನೇಹಿ, ವೆಚ್ಚ ಉಳಿತಾಯದ ವಿಧಾನವಾಗಿದೆ.

ಕಾರುಗಳ ಕಂಪನಿಯಲ್ಲಿ ಕುರಿಗಳಿಗೆ ಡ್ಯೂಟಿ!
ಕಾರುಗಳ ಕಂಪನಿಯಲ್ಲಿ ಕುರಿಗಳಿಗೆ ಡ್ಯೂಟಿ!

ಸಾಮಾನ್ಯವಾಗಿ ರೊಬೊ, ದೊಡ್ಡ ದೊಡ್ಡ ಮಿಷನ್, ಲಕ್ಷ ಲಕ್ಷ ಸಂಬಳ ತೆಗೆದುಕೊಳ್ಳುವ ಎಂಜಿನಿಯರ್ ಇರುವ ಅಂತರಾಷ್ಟ್ರೀಯ ಕಾರುಗಳ ಕಂಪನಿ (Volkswagen). ಈಗ ಬರೋಬ್ಬರಿ 100 ಕುರಿಗಳಿಗೆ (100 Sheep) ಉದ್ಯೋಗ ನೀಡಿದೆ. ಕಾರುಗಳ ತಯಾರಿ ಪ್ಲ್ಯಾಂಟ್‌ನಲ್ಲಿ ಕುರಿಗಳಿಗೆ ಕೆಲಸ ಏನು ಅಂತ ಅಚ್ಚರಿಗೆ ಒಳಗಾಗುತ್ತಿದ್ದೀರಾ? ಆದರೆ ಇದು ನಿಜ. ಅಸಲಿಗೆ ಜರ್ಮನ್ ಕಾರುಗಳ ಕಂಪನಿ ಫೋಕ್ಸ್ ವ್ಯಾಗನ್ ಮಾಡಿದ ಪ್ರಯೋಗ ಆದರೂ ಏನು? ಇದರಿಂದ ಕಂಪನಿಗೆ ಲಾಭ ಏನು? (Renewable Energy) ಎಂಬ ವಿಚಾರಗಳನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಜಗತ್ತಿನ ಪ್ರಸಿದ್ಧ ಆಟೋಮೊಬೈಲ್ ಕಂಪನಿ ಫೋಕ್ಸ್ ವ್ಯಾಗನ್ ಒಂದು ವಿಭಿನ್ನ ನಿರ್ಧಾರ ಕೈಗೊಂಡಿದೆ. ಸಾಮಾನ್ಯವಾಗಿ ಆಟೋಮೊಬೈಲ್ ಕಂಪನಿಯಲ್ಲಿ ಅತ್ಯಾಧುನಿಕ ರೊಬೊಗಳು, ಸಾವಿರಾರು ಸಂಖ್ಯೆಯಲ್ಲಿ ಎಂಜಿನಿಯರ್‌ಗಳು ಕೆಲಸ ಮಾಡುತ್ತಾರೆ. ಆದರೆ ಫೋಕ್ಸ್ ವ್ಯಾಗನ್ ಪ್ಲ್ಯಾಂಟ್‌ನಲ್ಲಿ ಕುರಿಗಳ ಗುಂಪು ಕೆಲಸ ಮಾಡುತ್ತಿದೆ.

ಪೋಲೆಂಡ್‌ನ ಪೊಜ್ನಾನ್ ನಗರದಲ್ಲಿರುವ ಫೋಕ್ಸ್ ವ್ಯಾಗನ್ ಪ್ಲ್ಯಾಂಟ್‌ನಲ್ಲಿ 18.03 ಮೆಗಾವ್ಯಾಟ್ ಸಾಮರ್ಥ್ಯದ ಭಾರೀ ಸೋಲಾರ್ ಎನರ್ಜಿ ಪ್ಲ್ಯಾಂಟ್ ಇದೆ. ಇದರಲ್ಲಿ ಸುಮಾರು 31 ಸಾವಿರಕ್ಕಿಂತ ಹೆಚ್ಚು ಸೋಲಾರ್ ಪ್ಯಾನಲ್ ಗಳಿದೆ. ಈ ಸ್ಥಾವರ ಕಾರ್ಖಾನೆಯ ವಾರ್ಷಿಕ ವಿದ್ಯುತ್ ಅಗತ್ಯಗಳಲ್ಲಿ ಶೇಕಡಾ 25ರಷ್ಟು ಪೂರೈಸಲಿದೆ. ಬಿಸಿಲು ಹೆಚ್ಚಿರುವ ಸಂದರ್ಭದಲ್ಲಿ ಇಡೀ ಕಾರ್ಖಾನೆಗೆ ಬೇಕಾದ ವಿದ್ಯುತ್ ಅನ್ನು ಇದು ಪೂರೈಸುತ್ತದೆ. ಆದರೆ ಸೋಲಾರ್ ಪ್ಯಾನಲ್ ಗಳ ಅಡಿ ಬೆಳೆಯುವ ಗಿಡ ಹಾಗೂ ಹುಲ್ಲು ಕತ್ತರಿಸುವುದು ಬಹುದೊಡ್ಡ ಸವಾಲು ಆಗಿದೆ. ಸಾಮಾನ್ಯ ಯಂತ್ರಗಳಲ್ಲಿ ಹುಲ್ಲು ಕತ್ತರಿಸಿದರೆ ಮಾಲಿನ್ಯ ಹೆಚ್ಚಾಗಲಿದೆ. ಆದ್ದರಿಂದ ಕಂಪನಿ ಯಂತ್ರಗಳಿಗೆ ಬ್ರೇಕ್ ಹಾಕಿ, ಪ್ಯಾನಲ್ ಕೆಳಗೆ ಇರುವ ಹುಲ್ಲು ಸರಿಯಾಗಿ ನಿರ್ವಹಿಸಲು 100 ಕುರಿಗಳನ್ನು ತರಿಸಿಕೊಂಡಿತ್ತು.

ಒಂದು ನಿರ್ಧಾರದಿಂದ ಹಲವು ಲಾಭ!

ಖರ್ಚು ಉಳಿತಾಯ: ಯಂತ್ರಗಳಲ್ಲಿ ಹುಲ್ಲು ಕತ್ತರಿಸಲು, ಪ್ಲ್ಯಾಂಟ್ ನಿರ್ವಹಿಸಲು ಖರ್ಚು ಮಾಡುವ ಹಣ ಕಡಿಮೆಯಾಗಿತ್ತು.

ಪರಿಸರ ಸಂರಕ್ಷಣೆ: ಯಂತ್ರಗಳ ಬಳಕೆಯಿಂದ ಕಾರ್ಬನ್ ಬಿಡುಗಡೆ ಕಡಿಮೆಯಾಗಿ ಪರಿಸರಕ್ಕೆ ಒಳ್ಳೆಯದಾಗುತ್ತದೆ.

ಜೀವವೈವಿಧ್ಯ: ನೈಸರ್ಗಿಕ ರೀತಿಯಲ್ಲಿ ಹುಲ್ಲು ನಿಯಂತ್ರಣವು ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ.

ಕಂಪನಿ ಡೈರೆಕ್ಟರ್ ಹೇಳಿದ್ದೇನು?

‘ಈ ಫಾರ್ಮ್ ಕೇವಲ ಗ್ರೀನ್ ಎನರ್ಜಿ ಒದಗಿಸುವುದಲ್ಲದೆ, ಜೀವವೈವಿಧ್ಯ, ಸ್ಥಳೀಯ ಕೃಷಿ ಮತ್ತು ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯು ಆಧುನಿಕ ಕೈಗಾರಿಕೆಗಳು ಪ್ರಕೃತಿಯೊಂದಿಗೆ ಹೇಗೆ ಸಾಮರಸ್ಯದಿಂದ ಕೆಲಸ ಮಾಡಬಹುದು ಎಂಬುದನ್ನು ಪ್ರದರ್ಶಿಸುತ್ತದೆ’ ಎಂದು ವೋಕ್ಸ್‌ವ್ಯಾಗನ್ ನಿರ್ದೇಶಕಿ ಮಾರ್ಜೆನಾ ಬ್ರಿಚ್ ಗ್ರೋನ್ಸ್ಕಾ ಹೇಳಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಕೇವಲ ಹುಲ್ಲು ನಿಯಂತ್ರಣ ಅಷ್ಟೇ ಅಲ್ಲ, ಹಲವು ಲಾಭ!

ವೋಕ್ಸ್‌ವ್ಯಾಗನ್ ಈ ಪ್ರಯೋಗವನ್ನು ಕೇವಲ ಹುಲ್ಲು ಕತ್ತರಿಸುವುದಕ್ಕೆ ಸೀಮಿತಗೊಳಿಸದೆ, ಪೊಜ್ನಾನ್ ಲೈಫ್ ಸೈನ್ಸಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳೊಂದಿಗೆ ಕೈಜೋಡಿಸಿದೆ. ಸೌರ ಫಲಕಗಳ ನೆರಳು ಕುರಿಗಳಿಗೆ ಸೂರ್ಯನ ಶಾಖದಿಂದ ಪರಿಹಾರ ನೀಡುತ್ತದೆಯೇ? ಮಣ್ಣಿನ ಗುಣಮಟ್ಟ, ಸ್ಥಳೀಯ ಮೈಕ್ರೋಕ್ಲೈಮೇಟ್ ಮತ್ತು ಜೀವವೈವಿಧ್ಯತೆಯ ಮೇಲೆ ಈ ವಿಧಾನದ ಪ್ರಭಾವದ ಬಗ್ಗೆ ವಿಜ್ಞಾನಿಗಳು ಸಮಗ್ರ ಸಂಶೋಧನೆ ನಡೆಸುತ್ತಿದ್ದಾರೆ.

ಕುರಿಗಳು ಕೂಡ ವಾತಾವರಣಕ್ಕೆ ಹೊಂದಿಕೊಂಡಿದ್ದು, ಸೌರ ಫಲಕಗಳ ನಡುವೆ ಸಣ್ಣ ಗುಂಪುಗಳಲ್ಲಿ ಶಾಂತಿಯುತವಾಗಿ ಮೇಯುತ್ತಿವೆ ಮತ್ತು ಈ ಪರಿಸರದಲ್ಲಿ ಅವು ಸುರಕ್ಷಿತವಾಗಿರುತ್ತವೆ ಎಂದು ಕುರಿ ಹಿಂಡಿನ ಮಾಲೀಕ ಜಸ್ಟಿನಾ ನೋವಾಕ್ ಗಜೆಕ್ ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed