Last Updated:
ದುನಿಯಾ ವಿಜಯ್ ತಮ್ಮ ಸಿಟಿ ಲೈಟ್ಸ್ ಚಿತ್ರ ಕಂದಮ್ಮ ಹಾಡಿನಲ್ಲಿ ಒಂದು ಜಾಗೃತಿ ಮೂಡಿಸಿದ್ದಾರೆ. ಇದನ್ನ ಅಷ್ಟೆ ಚೆನ್ನಾಗಿಯೇ ತೋರಿಸಿದ್ದಾರೆ. ಅದಕ್ಕೊಂದು ಪರಿಹಾರವನ್ನು ಕೊಟ್ಟಿದ್ದಾರೆ. ಅದರ ಸುತ್ತ ಇನ್ನಷ್ಟು ವಿಷಯ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ಅವರ ಸಿಟಿ ಲೈಟ್ಸ್ ಚಿತ್ರದಲ್ಲಿ (City Lights) ಮಕ್ಕಳು ಇದ್ದಾರೆ. ಇವರನ್ನ ಅಷ್ಟೆ ರಿಯಲ್ ಆಗಿಯೇ ತೋರಿಸಿದ್ದಾರೆ. ಗಲ್ಲಿಯಲ್ಲಿ ಮನೆ ಅಕ್ಕಪಕ್ಕ ಇರೋ ಮಕ್ಕಳು ಹೇಗೆ ತೋರಿಸ್ಬೇಕೋ ಹಾಗೇನೆ ಚಿತ್ರದ ಕಂದಮ್ಮ ಹಾಡಿನಲ್ಲಿ ತೋರಿಸಿದ್ದಾರೆ. ನಾಯಕ ವಿನಯ್ ರಾಜ್ಕುಮಾರ್ (Vinay Rajkumar) ಹಾಗೂ ನಾಯಕಿ ಮೋನಿಷಾ ವಿಜಯ್ ಕುಮಾರ್ (Monisha Vijay Kumar) ಅವರ ರೋಮ್ಯಾಂಟಿಕ್ ಟ್ರ್ಯಾಕ್ ಜೊತೆಗೆ ಮಕ್ಕಳನ್ನು ಇಲ್ಲಿ ತೋರಿದ್ದಾರೆ. ಆದರೆ, ಇಲ್ಲೊಂದು ಜಾಗೃತಿ ಕೂಡ ಇದೆ. ಇದು ಜಂಕ್ಫುಡ್ ವಿಚಾರವೇ ಆಗಿದೆ. ಇಂದಿನ ಮಕ್ಕಳು ಅದೆಷ್ಟು ಎಡಿಕ್ಟ್ ಆಗಿದ್ದಾರೆ ಅನ್ನೋದನ್ನು ತೋರಿಸ್ತಾರೆ. ನಾಯಕ ಮತ್ತು ನಾಯಕಿ ಏನ್ ಮಾಡ್ತಾರೆ ಅನ್ನೋದು ಇಲ್ಲಿ ಬಹಳ ಚೆನ್ನಾಗಿದೆ. ಈ ಒಂದು ವಿಷಯದ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜಂಕ್ಫುಡ್ ಜಾಮಾನಾ
ಕಂದಮ್ಮ ಅನ್ನುವ ಹಾಡಿನಲ್ಲಿ ನಾಯಕ ವಿನಯ್ ರಾಜ್ಕುಮಾರ್ ಹಾಗೂ ನಾಯಕಿ ಮೋನಿಷಾ ವಿಜಯ್ ಕುಮಾರ್ ಅವರನ್ನ ತೋರಿಸ್ತಾರೆ. ಇವರ ಲವ್ ಟ್ರ್ಯಾಕ್ ಮತ್ತು ಲವ್ ಫೀಲಿಂಗ್ಸ್ ಅನ್ನು ಹೇಳ್ತಾರೆ.
ಜಂಕ್ಪುಡ್ ಅಂತ ಬಂದಾಗ ಕೆಂಪು ಬಣ್ಣದ ಪಾನೀಯ ಕುಡಿಯೋ ಮಕ್ಕಳನ್ನ ತೋರಿಸ್ತಾರೆ. ಕುರ್ಕುರೆ ಕೂಡ ತೋರಿಸ್ತಾರೆ.
ಇದನ್ನ ತಿನ್ನುವ ಮಕ್ಕಳಿಂದ ನಾಯಕ ಮತ್ತು ನಾಯಕಿ ಅದನ್ನ ಕಸಿದುಕೊಳ್ಳುತ್ತಾರೆ. ಆ ಕೂಡಲೇ ಅದಕ್ಕೆಲ್ಲ ಬೆಂಕಿನೂ ಹಚ್ಚುತ್ತಾರೆ.
ಇದೇನೋ ಸರಿ, ಆದರೆ, ಮಕ್ಕಳು ಏನು ತಿನ್ನಬೇಕು ಅನ್ನುವ ಪ್ರಶ್ನೆ ಬರುತ್ತದೆ. ಅದಕ್ಕೂ ಇಲ್ಲಿ ಉತ್ತರ ಕೊಟ್ಟಿದ್ದಾರೆ. ಹಲಸಿನ ಹಣ್ಣನ್ನ ಇಲ್ಲಿ ನಾಯಕಿ ಮಕ್ಕಳಿಗೆ ಕೊಡ್ತಾರೆ ನೋಡಿ. ಈ ರೀತಿ ಇಲ್ಲಿ ಒಂದು ಸಣ್ಣ ಜಾಗೃತಿ ಮೂಡಿಸಿದ್ದಾರೆ.
ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ದುನಿಯಾ ವಿಜಯ್ ಉತ್ತರ ಕೊಟ್ಟಿದ್ದಾರೆ. ಮಕ್ಕಳು ಜಂಕ್ ಫುಡ್ ಹೆಚ್ಚಿಗೆ ತಿನ್ನುತ್ತಿದ್ದಾರೆ. ಅದಕ್ಕೆ ಇಲ್ಲೊಂದು ಜಾಗೃತಿ ಅನ್ನುವ ಅರ್ಥದಲ್ಲಿಯೇ ಉತ್ತರ ಕೊಟ್ಟಿದ್ದಾರೆ.
ಸಿಟಿ ಲೈಟ್ಸ್ ಚಿತ್ರದಲ್ಲಿ ವಾಸ್ತವ
ಸಿಟಿ ಲೈಟ್ಸ್ ಚಿತ್ರದ ಈ ಹಾಡನ್ನ ನಾಗಾರ್ಜುನ್ ಶರ್ಮಾ ಬರೆದಿದ್ದಾರೆ. ಚರಣ್ ರಾಜ್ ಈ ಹಾಡಿಗೆ ಸಂಗೀತ ಕೊಟ್ಟಿದ್ದಾರೆ. ಈ ಹಾಡನ್ನ ದುನಿಯಾ ವಿಜಯ್ ಇಲ್ಲಿ ನಾಗಾರ್ಜುನ್ ಶರ್ಮಾ ಅವರ ಪತ್ನಿ ವೈಭವಿ ಅವರಿಂದಲೇ ರಿಲೀಸ್ ಮಾಡಿಸಿದ್ದಾರೆ.
ಈ ಚಿತ್ರದಲ್ಲೂ ದುನಿಯಾ ವಿಜಯ್ ವಾಸ್ತವವನ್ನು ತೋರಿಸುತ್ತಿದ್ದಾರೆ. ಆದರೆ, ಅದೇನು ಅನ್ನುವ ಕುತೂಹಲ ಇದ್ದೇ ಇದೆ. ಇದರೊಟ್ಟಿಗೆ ವಿನಯ್ ರಾಜ್ಕುಮಾರ್ ಅವರನ್ನ ಇಲ್ಲಿ ವಿಭಿನ್ನವಾಗಿಯೇ ತೋರಿಸುವ ಕೆಲಸ ಮಾಡಿದ್ದಾರೆ.
ಚಿಕ್ಕ ಮಗಳು ಮೋನಿಷಾ ಅವರನ್ನ ಈ ಚಿತ್ರದಲ್ಲಿ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಮೋನಿಷಾ ವಿಜಯ್ ಕುಮಾರ್ ನಾಯಕಿ ಆಗಿಯೇ ಕನ್ನಡ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಮಾಸ್ತಿ ಈ ಚಿತ್ರಕ್ಕೂ ಡೈಲಾಗ್ ಬರೆದಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 21, 2026 12:47 PM IST














